Advertisement
ಅತೀ ಹೆಚ್ಚು ಸಂದರ್ಭದಲ್ಲಿ ಚುನಾವಣೆಯು ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ಏಕೈಕ ಸಾಧನ ಎಂದು ಪರಿಗಣಿಸಿ ಪ್ರಜಾಪ್ರಭುತ್ವ ಉಳಿಯುವುದೇ ಚುನಾವಣೆಯಿಂದ ಎಂದು ತೀರ್ಮಾನಿಸಲಾಗಿದೆ. ನಮ್ಮ ಚುನಾವಣೆಗಳು ತಂದೊಡ್ಡಿರುವ ಪ್ರಜಾಪ್ರಭುತ್ವದ ಬಗ್ಗೆ ಹಲವಾರು ವಿಮರ್ಶೆಗಳು ಈಗಾಗಲೇ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಅಭಿವೃದ್ದಿ ನೆಲೆಯಲ್ಲಿ ಪ್ರಚಾರಗಿಟ್ಟಿಸಿಕೊಂಡಿವೆ. ಪ್ರತೀ ವರ್ಷ, ಪ್ರತೀ ತಿಂಗಳು ಚುನಾವಣೆಗಳು ನಡೆದಿರುವ, ನಡೆಯುತ್ತಿರುವ ಇವತ್ತಿನ ಸಂದರ್ಭದಲ್ಲಿ “ಒಂದು ರಾಷ್ಟ್ರ -ಒಂದು ಚುನಾವಣೆ’ ವಿಷಯ ವಾಗಿ ಚರ್ಚೆ ಆರಂಭಗೊಂಡು ಮೂರು ಪ್ರಮುಖ ವಿಷಯಗಳನ್ನು ಮುನ್ನೆಲೆಗೆ ತಂದಿದೆ.
Related Articles
Advertisement
ಭಾರತಕ್ಕೆ ಯಾವ ಮಾದರಿಯ ಪ್ರಜಾಪ್ರಭುತ್ವ ಬೇಕು ಎಂದು ಕೇಳುವ ರೀತಿಯಲ್ಲೇ ಯಾವ ರೀತಿಯ ಚುನಾವಣೆ ಬೇಕು ಎಂದು ಕೇಳುವುದೂ ಅಷ್ಟೇ ಮುಖ್ಯ. ಸ್ವಾತಂತ್ರಾéನಂತರ ಸುಮಾರು 60ರ ದಶಕದವರೆಗೂ ಕೇಂದ್ರ ಮತ್ತು ರಾಜ್ಯ ಸರ ಕಾರಗಳಿಗೆ ಒಂದೇ ಕಾಲದಲ್ಲಿ ಚುನಾವಣೆಗಳು ನಡೆದಿವೆ. ಅನಿವಾರ್ಯ ರಾಜಕೀಯ ಕಾರಣಗಳಿಂದ ಅನಂತರದ ಕಾಲದಲ್ಲಿ ಚುನಾವಣೆಗಳು ಬೇರೆ ಬೇರೆ ಕಾಲದಲ್ಲಿ ನಡೆದಿವೆ ಮತ್ತು ಅದರಿಂದ ದೇಶಕ್ಕೆ ಸಾಕಷ್ಟು ನಷ್ಟಗಳು ಸಂಭವಿಸಿವೆ. ಪ್ರತಿಯೊಂದು ಚುನಾವ ಣೆಗೂ ರಾಜ್ಯ ಅಥವಾ ಕೇಂದ್ರ ಸರಕಾರ ಖರ್ಚು ಮಾಡುವ ಹಣದ ಮೊತ್ತವನ್ನು ಅದೆಷ್ಟೋ ಕಾಲದ ರಾಜ್ಯದ ಬಜೆಟ್ ಮೊತ್ತಕ್ಕೆ ಸರಿದೂಗಿಸಬಹುದಾಗಿದೆ. ಬೇರೆ ಬೇರೆ ಕಾಲದಲ್ಲಿ ಚುನಾವಣೆಗಳು ನಡೆದರೆ ದೇಶದ ಅಭಿವೃದ್ಧಿಗೆ ಉಂಟಾಗ ಬಹುದಾದ ಅಪಾಯ ಗಳನ್ನು ನಾವು ಕಂಡುಕೊಂಡಿದ್ದೇವೆ. ಪ್ರಾಥಮಿಕ, ಪ್ರೌಢ ಶಿಕ್ಷಣಗಳಿಗೆ ಹೂಡಿಕೆ ಮಾಡಬೇಕಾಗಿರುವ ಹಣವನ್ನು ನಿರಂತರ ನಡೆಯುವ ಚುನಾವಣೆಗಳಿಗೆ ಹೂಡಿಕೆ ಮಾಡಿದರೆ ರಾಷ್ಟ್ರದ ಶಕ್ತಿಯನ್ನು ಭವಿಷ್ಯದ ಜನತೆಯನ್ನು ವೈಚಾರಿಕತೆಯಿಂದ ಬೆಳೆಸಲು ಸಾಧ್ಯವಿಲ್ಲ.
ಒಂದು ಚುನಾವಣೆ ಒಂದು ರಾಷ್ಟ್ರವನ್ನು ವ್ಯಾಖ್ಯಾನಿಸುವಲ್ಲಿ ಸಹಕಾರಿಯಾಗುತ್ತದೆಯೇ? ಅಭಿವೃದ್ಧಿಯು ಒಂದರ್ಥದಲ್ಲಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಿದರೆ ಎಲ್ಲರನ್ನೂ ಭಾಗವಹಿಸು ವಂತೆ ಮಾಡಿದರೆ ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಕೇವಲ ಪರಿ ಕಲ್ಪನೆಯಾಗಿರದೆ ಹೃದಯಾಂತರಾಳದಲ್ಲಿ ಬೇರೂರಿ ಪ್ರಶ್ನಾತೀತ ರಾಷ್ಟ್ರೀಯತೆಯ ಮೇಲೆ ಕಟ್ಟುವ ರಾಷ್ಟ್ರವಾಗಿ ಭಾರತ ಹೊಸತನ ವನ್ನು ಕಂಡುಕೊಳ್ಳುವಲ್ಲಿ ಸಂದೇಹವಿಲ್ಲ.
ಇಲ್ಲಿಯ ತನಕದ ಚುನಾವಣೆ ಪೂರ್ವದ ಮತ್ತು ಅನಂತರದ ಬೆಳವಣಿಗೆಗಳು ಚುನಾವಣೆಯ ಕುರಿತ ಆಸಕ್ತಿಯನ್ನು ಕೆರಳಿಸದೆ ಚುನಾವಣೆಯೇ ಬೇಡ ಎಂಬ ತೀರ್ಮಾನಕ್ಕೆ ಬಂದಂಥ ಜನರಿ ರುವ ಅದೆಷ್ಟೋ ಕ್ಷೇತ್ರಗಳು ಇವೆ. ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸುವವರ ಜತೆಗೆ ಚುನಾವಣೆಯ ಬಗ್ಗೆ ಒಂದಿಷ್ಟು ಆಸಕ್ತಿ ತೋರದೆ ಮತ ಚಲಾವಣೆಯನ್ನು ಮಾಡದೆ ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುವ ಜನರೂ ಇದ್ದಾರೆ. ಬಹುಶಃ ಚುನಾವಣೆಗಳು ಇತ್ತೀಚಿನ ದಿನಗಳವರೆಗೂ ನೀಡಿರುವ ಕುಖ್ಯಾತ ಕೊಡುಗೆಗಳನ್ನು ಗಮನಿಸಿದರೆ ಚುರುಕು ಬುದ್ಧಿಯ ಯುವಕರು ಆಕರ್ಷಿತರಾಗುವ ಬದಲು ದ್ವೇಷ ಸಾಧಿಸುವಂಥ ಜನರಾಗುತ್ತಿದ್ದಾರೆ, ಜನರಾಗ ಬಹುದು. ಇವನ್ನೆಲ್ಲ ತಪ್ಪಿಸುವ ಉದ್ದೇಶದಿಂದ “ಒಂದು ರಾಷ್ಟ್ರ- ಒಂದು ಚುನಾವಣೆ’ ಅತ್ಯಂತ ಪ್ರಸ್ತುತ ಮತ್ತು ಅನಿವಾರ್ಯ.ನಮ್ಮ ಚುನಾವಣೆಗಳು ಈ ದೇಶದ ಚರಿತ್ರೆಯಾಗಬೇಕು, ಈ ದೇಶದ ಸಂಸ್ಕೃತಿಯಾಗಬೇಕು, ಧಾರ್ಮಿಕ ನಂಬಿಕೆಗಳಂತೆ ಇರಬೇಕು, ಈ ದೇಶದ ಪ್ರಮುಖ ಮೌಲ್ಯಗಳಾಗಬೇಕು, ಪ್ರೀತಿ ವಿಶ್ವಾಸದ ದ್ಯೋತಕವಾಗಬೇಕು, ಎಲ್ಲಕ್ಕಿಂತ ಮಿಗಿಲಾಗಿ ಚುನಾ ವಣೆಯು ಈ ದೇಶದ ವ್ಯಕ್ತಿಯ ಪ್ರತಿಯೊಬ್ಬನ ಕರ್ತವ್ಯದ ಭಾಗ ವಾಗಬೇಕು ಎನ್ನುವ ಆಶಯಗಳನ್ನು “ಒಂದು ರಾಷ್ಟ್ರ-ಒಂದು ಚುನಾ ವಣೆ’ ಎಂಬ ಪರಿಕಲ್ಪನೆ ಒಳಗೊಂಡಿದೆ ಎಂಬುದು ಸಾಬೀತಾಗಿರು ವುದರಿಂದಲೇ ಯುವಜನರ ಪರವಾಗಿ, ಅವರ ಭವಿಷ್ಯದ ಹಿತದೃಷ್ಟಿಯಿಂದ ಈ ರಾಷ್ಟ್ರದ ಹಿತದೃಷ್ಟಿಯಿಂದ ಒಬ್ಬ ಮತದಾರನಾಗಿ ಈ ಪರಿಕಲ್ಪನೆಯೊಡನೆ ನಾನಿದ್ದೇನೆ. “ಡಿಜಿಟಲ್ ಇಂಡಿಯಾದ’ ಪ್ರಾಜೆಕ್ಟ್‌ನ ಒಳಗಡೆ ಈ “ಒಂದು ರಾಷ್ಟ್ರ -ಒಂದು ಚುನಾವಣೆ’ಯನ್ನು ತರಬಹುದುದಾದರೆ ಒಂದು ನಿರ್ದಿಷ್ಟ ಸಮಯದೊಳಗೆ ಮನೆಯಿಂದಲೇ ಅಥವಾ ಕಾರ್ಯನಿರ್ವಹಿಸುವ ಕ್ಷೇತ್ರದಿಂದಲೇ ಮತಹಾಕುವ ಹೊಸ “ಡಿಜಿಟಲ್ ವ್ಯವಸ್ಥೆ’ಯನ್ನು ಪರಿಚಯಿಸಿದರೆ ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು. ಮೊಬೈಲ್ ಪೋನ್‌ನಲ್ಲಿ ಪ್ರಪಂಚ ಸೃಷ್ಟಿಸುತ್ತಿರುವ ನಮಗೆ “ಒಂದು ರಾಷ್ಟ್ರ-ಒಂದು ಚುನಾವಣೆ’ ಅನಗತ್ಯ ಚರ್ಚೆಗೆ ಒಳಗಾಗುವುದು ಬೇಡ ಎಂಬುದು ನನ್ನ ಆಶಯ. “ನನ್ನ ಭಾರತ ನನ್ನ ಹಕ್ಕು’ ಎಂಬಂತೆ ಅತ್ಯಂತ ಪಾರದರ್ಶಕತೆಯಿಂದ ಮತದಾನ ಮಾಡೋಣ- “ಒಂದು ರಾಷ್ಟ್ರ-ಒಂದು ಚುನಾವಣೆ’ಗೆ ಬೆಂಬಲವಾಗೋಣ. – ಪ್ರೊ| ಪಿ. ಎಲ್. ಧರ್ಮ,
ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ