Advertisement

ಆರೋಗ್ಯ ಇಲಾಖೆ ವಸತಿಗೃಹಕ್ಕೆ ಬೇಕು ಕಾಯಕಲ್ಪ

05:37 PM Dec 23, 2021 | Team Udayavani |

ಬೆಳ್ತಂಗಡಿ: ಸೋರುತಿಹುದು ಮನೆಯ ಮಾಳಿಗೆ.. ಸರಕಾರದ ಅಜ್ಞಾನ ದಿಂದ ಎಂಬ ಸಾಲನ್ನು ಬರೆಯಬೇಕಾದ ಸನ್ನಿವೇಶ ದ.ಕ. ಜಿಲ್ಲೆಯ ಬೆಳ್ತಂಗಡಿ ಸಹಿತ ಇತರ ತಾಲೂಕು ಆರೋಗ್ಯ ಸಿಬಂದಿಗೆ ನಿರ್ಮಿಸಿರುವ ವಸತಿಗೃಹಗಳನ್ನ ಕಂಡಾಗ ಅನಿಸುವಂತಾಗಿದೆ. ದಿನಪೂರ್ತಿ ರೋಗಿಗಳ ಆರೈಕೆ ಮಾಡಿ ಬಸವಳಿದ ಆರೋಗ್ಯ ಸಿಬಂದಿಗೆ ನೆಮ್ಮದಿಯಿಂದ ವಸತಿಗೃಹದಲ್ಲಿ ಒಂದೊತ್ತು ವಿಶ್ರಾಂತಿ ಪಡೆಯೋಣ ಎಂದರೆ ಅವುಗಳ ಸ್ಥಿತಿಯೂ ರೋಗಪೀಡಿತರಂತಾಗಿದೆ.

Advertisement

ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಸಿಬಂದಿಗಾಗಿ ಸರಕಾರವು ವಸತಿ ಗೃಹಗಳನ್ನೇನೊ ನಿರ್ಮಿಸಿದೆ. ಆದರೆ ಇದರ ನಿರ್ವಹಣೆ ಕಂಡಾಗ ಮಾತ್ರ ಸಾರ್ವಜನಿಕರಿಗೂ ಭಯ ಹುಟ್ಟಿಸು ವಂತಿದೆ. ಪಾಳುಬಿದ್ದಂತ ಕಟ್ಟಡಗಳು, ಮನೆಸುತ್ತ ಪೊದೆಗಳು ಆವರಿಸಿರುವುದು, ಹಾವುಗಳು ಮನೆಯೊಳಗೇ ವಾಸಿಸುವ ಮಟ್ಟಿಗೆ ನಿರ್ವಹಣೆಯಿಲ್ಲದೆ ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿವೆ.

ಕೊರೊನಾ ಸಂದರ್ಭದಲ್ಲಂತೂ ಸರಕಾರವು ಆರೋಗ್ಯ ಇಲಾಖೆಯ ಸೇವೆ ಯನ್ನು ಕೊಂಡಾಡಿದೆ ಹೊರತು ಅವರ ಮೂಲ ಸೌಕರ್ಯಕ್ಕೆ ಆದ್ಯತೆ ನೀಡ ಬೇಕೆಂಬ ಕನಿಷ್ಠ ಚಿಂತನೆ ನಡೆಸಿದಂತಿಲ್ಲ ಎಂಬುದು ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರ್‌ ವಿಭಾಗದಿಂದ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಸೇರಿದಂತೆ ಇತರ ತಾಲೂಕುಗಳಲ್ಲಿ ವಸತಿಗೃಹ ನಿರ್ಮಾಣಕ್ಕೆ ಅನುದಾನ ಕೋರಿ 2017ರಿಂದಲೇ ಸರ ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಕೋವಿಡ್‌ ಪರಿಸ್ಥಿತಿಯಿಂದಾಗಿ ಸರಕಾರಕ್ಕೆ ಅನುದಾನ ಒದಗಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಟ್ಟಡ ಕೋವಿಡ್‌ ಬರುವ ಮುನ್ನವಾದರೂ ನಿರ್ವಹಣೆಯಾಗಬೇಕಿತ್ತು ಎಂಬ ಚಿಂತನೆ ನಡೆಸಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು, ದಾದಿಯರು, ಹಿರಿಯ ಆರೋಗ್ಯ ಸಹಾಯಕರು, ಗ್ರೂಪ್‌ ಡಿ ನೌಕರರಿಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆ ವಠಾರದಲ್ಲಿ 13 ವಸತಿಗೃಹಗಳಿವೆ. ಆದರೆ ಇಲ್ಲಿನ ಪರಿಸ್ಥಿತಿ ಕಂಡು ವೈದ್ಯಾಧಿಕಾರಿಗಳು ಪ್ರತ್ಯೇಕವಾಗಿ ವಾಸ್ತವ್ಯ ಹೂಡುತ್ತಿದ್ದಾರೆ. ಪ್ರಸಕ್ತ ದಾದಿಯರು, ಗ್ರೂಪ್‌ ಡಿ, ಔಷಧ ಉಗ್ರಾಣದ ಸಿಬಂದಿ ವಾಸಿಸುತ್ತಿದ್ದಾರೆ.ವೈದ್ಯಾಧಿಕಾರಿಗಳ ಕೊಠಡಿಗೆ ಟೈಲ್ಸ್‌ ಅಳವಡಿಕೆ ಹೊರತುಪಡಿಸಿ ಇನ್ನಾವುದೇ ನಿರ್ವಹಣೆ ಕಾರ್ಯ ನಡೆದಿಲ್ಲ. ದಾದಿಯರಿಗಾಗಿ ಇರುವ ಒಂದು ವಸತಿಗೃಹವಂತು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದರಿಂದ ಬಳಕೆಯಾಗುತ್ತಿಲ್ಲ.

ನೂತನ
ವಸತಿ ಸಮುಚ್ಚಯದ ಅಗತ್ಯ
ಪ್ರಸಕ್ತ ಇರುವ ಹೆಂಚಿನ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರಿಂದ ಹೆಂಚಿನ ಮೇಲೆ ಟಾರ್ಪಾಲು ಹೊದಿಕೆ ಹಾಕಿ ವಾಸಿಸುತ್ತಿದ್ದಾರೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿದೆ. ವಸತಿಗೃಹ ಸುತ್ತ ಗಿಡಗಂಟಿ ಆವರಿಸಿ ವಿಷಜಂತು ವಾಸಸ್ಥಾನವಾಗಿದೆ. ಆಸ್ಪತ್ರೆಯಲ್ಲಿ ಬಳಕೆಯಾದ ವೈದ್ಯಕೀಯ ಬಯೋತ್ಯಾಜ್ಯವನ್ನು ಮೂಟೆ ಕಟ್ಟಿಡಲಾಗಿದೆ. ವಿದ್ಯುತ್‌ ಸಲಕರಣೆಗಳು ಮಳೆಗಾಲದಲ್ಲಿ ಶಾಕ್‌ ಟ್ರàಟ್‌ಮೆಂಟ್‌ ನೀಡುತ್ತಿದೆ. ಇಷ್ಟು ಸಮಸ್ಯೆಗಳ ಮಧ್ಯೆ ಸಿಬಂದಿ ಅದೇ ಕಷ್ಟನಷ್ಟದಲ್ಲಿ ಜೀವನ ಸವೆಸುವಂತಾಗಿದೆ. ಕನಿಷ್ಠ ಸ್ವತ್ಛತೆ ಗಾದರೂ ಆದ್ಯತೆ ನೀಡುವಲ್ಲಿ ಇಲಾಖೆ ಚಿಂತಿಸದಿರುವುದು ದುರದೃಷ್ಟಕರ.

Advertisement

ಸರಕಾರಕ್ಕೆ ಪತ್ರ
ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಿಬಂದಿ ವಸತಿಗೃಹ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರತೀ ವರ್ಷ ಬೇಡಿಕೆ ಸಲ್ಲಿಸಲಾಗುತ್ತಿದೆ. ಸುಳ್ಯದಲ್ಲಿ ಎರಡು ವರ್ಷಗಳ ಹಿಂದೆ 3.50 ಕೋ.ರೂ. ವೆಚ್ಚದಲ್ಲಿ 10 ವಸತಿಗೃಹ ನಿರ್ಮಿಸಲಾಗಿದೆ. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲೂಕುಗಳಲ್ಲಿ ವಸತಿಗೃಹ ನಿರ್ಮಾಣಕ್ಕೆ ಸರಕಾರಕ್ಕೆ ಬರೆಯಲಾಗಿದೆ.
-ರಾಜೇಶ್‌ ರೈ, ಎಇ, ಜಿಲ್ಲಾ ಆರೋಗ್ಯ ಎಂಜಿನಿಯರ್‌ ವಿಭಾಗ

ಬೇಡಿಕೆ ಸಲ್ಲಿಕೆ
ಬೆಳ್ತಂಗಡಿಯಲ್ಲಿ ಹಳೆ ಕಟ್ಟಡವಾದ್ದರಿಂದ ಸಮಸ್ಯೆ ಉಂಟಾಗಿದೆ. ಈಗಿರುವ ಹಳೆ ಕಟ್ಟಡ ತೆರವುಗೊಳಿಸಿ ವಸತಿ ಸಮು ಚ್ಚಯ ನಿರ್ಮಿಸುವ ಕುರಿತು ಬೇಡಿಕೆ ಸಲ್ಲಿಸಲಾಗಿದೆ. ಸ್ವತ್ಛತೆಗೆ ಕ್ರಮ ಕೈಗೊಳ್ಳುವ ಸಲುವಾಗಿ ಪ.ಪಂ.ಗೆ ಸೂಚನೆ ನೀಡಲಾಗುವುದು.
-ಡಾ| ಕಲಾಮಧು,
ತಾಲೂಕು ಆರೋಗ್ಯಾಧಿಕಾರಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next