Advertisement
ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ನಗರದ ರಥ ಮೈದಾನದಲ್ಲಿಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಾಧನೆಗೆ ಗುರಿ ಮತ್ತು ಆತ್ಮವಿಶ್ವಾಸ ಮುಖ್ಯ. ಈ ಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಗುರಿಯೇ ಇರುವುದಿಲ್ಲ ಎಂದರು.
Related Articles
Advertisement
ಶಿಕ್ಷಕರಿಗೆ ವಿದೇಶ ಪ್ರವಾಸ ವ್ಯವಸ್ಥೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಭಾಗ ಮಟ್ಟದಲ್ಲಿ ಸಾಧನೆ ಮಾಡುವ ತಾಲೂಕಿನ ಶಾಲೆಯ ನಾಲ್ಕು ಜನ ಶಿಕ್ಷಕರಿಗೆ ವಿದೇಶ ಪ್ರವಾಸ, ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡುವ ಶಾಲೆಯ ನಾಲ್ಕು ಜನ ಶಿಕ್ಷಕರಿಗೆ ದೇಶ ಪ್ರವಾಸ ಮತ್ತು ತಾಲೂಕು ಮಟ್ಟದಲ್ಲಿ ಸಾಧನೆ ಮಾಡುವ ಶಾಲೆಯ ನಾಲ್ವರು ಶಿಕ್ಷಕರಿಗೆ ರಾಜ್ಯ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಘೋಷಿಸಿದರು.
ಜನಪ್ರತಿನಿಧಿಗಳ ಬಹಿಷ್ಕಾರ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನೆ ವೇಳೆ ವೇದಿಕೆಗೆ ಆಹ್ವಾನಿಸಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕೆಲ ಜನಪ್ರತಿಧಿಗಳು ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಜರುಗಿತು. ಕಾರ್ಯಕ್ರಮ ಆರಂಭದಲ್ಲಿ ಉದ್ಘಾಟನೆ ವೇಳೆ ಶಾಸಕರಿಗೆ ಮಾತ್ರ ವೇದಿಕೆಗೆ ಆಹ್ವಾನಿಸಿದಕ್ಕೆ ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ ಆಕ್ಷೇಪ ವ್ಯಕ್ತಪಡಿಸಿ ಬಿಇಒ ಅವರನ್ನು ತರಾಟೆಗೆ ತಗೆದುಕೊಂಡರು. ತಾಪಂ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ ನಗರಸಭೆ ಅಧ್ಯಕ್ಷ ಮೀರ ಅಜರ ಅಲಿ, ಜಿಪಂ ಸದಸ್ಯರಾದ ಸುಧೀರ ಕಾಡಾದಿ ಹಾಗೂ ನಿರ್ಮಲಾ ಮಾನೆಗೋಪಾಲೆ ಅಸಮಾಧಾನಗೊಂಡು ಹೊರನಡೆದರು. ಇಲಾಖೆ ಆಹ್ವಾನದ ಮೇರೆಗೆ ಭಾಗವಹಿಸಲು ಆಗಮಿಸಿದ ನಗರಸಭೆ ಅಧ್ಯಕ್ಷ, ತಾಪಂ ಅಧ್ಯಕ್ಷೆ ಮತ್ತು ಜಿಪಂ ಸದಸ್ಯರಿಗೆ ವೇದಿಕೆಗೆ ಕರೆಯದ ಹಿನ್ನೆಲೆಯಲ್ಲಿ ಭವನದಿಂದ ಹೊರ ನಡೆದರು