Advertisement
ಜನರು ನಿಯಮ ಪಾಲಿಸಬೇಕುಕೆಲವು ವಿಚಾರಗಳಲ್ಲಿ ಇಲಾಖೆ ಹಾಗೂ ವ್ಯವಸ್ಥೆಯ ತಪ್ಪುಗಳಿರುತ್ತದೆ.ಆದರೆ ಇನ್ನು ಕೆಲವು ವಿಷಯದಲ್ಲಿ ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಭಟ್ಕಳದಿಂದ ಕುಂದಾಪುರ ದವರೆಗೆ ನೀವೆಲ್ಲಾದರೂ ಏಕಮುಖ ರಸ್ತೆಯಲ್ಲಿ ನಿರಾಳವಾಗಿ ಸಂಚರಿಸಬಹುದೆಂದರೆ ನಿಮ್ಮ ಊಹೆ ಖಂಡಿತ ತಪ್ಪಾಗುತ್ತದೆ. ದಾರಿಯುದ್ದಕ್ಕೂ ನೂರೆಂಟು ವಾಹನಗಳು ಎದುರು ಬಂದು ವಾಹನದವರನ್ನು ಕೈ ತೋರಿಸಿ ಹೋಗುವಂತೆ ಪರಿಸ್ಥಿತಿ ಇದೆ.ಆರಂಭದಲ್ಲಿ ಕಂಪೆನಿ ಅಲ್ಲಲ್ಲಿ ರಸ್ತೆ ವಿಭಜಕಗಳನ್ನು ಅಳವಡಿಸಿತ್ತು. ಇದರಿಂದಾಗಿ ಆಯಾಯ ಊರಿನವರು ದ್ವಿಚಕ್ರ ಹಾಗೂ ವಾಹನಗಳನ್ನು ಅಲ್ಲಲ್ಲಿ ನುಸುಳಿಸುತ್ತಿದ್ದರು. ಪ್ರಸ್ತುತ ಎಲ್ಲಾ ವಿಭಜಕಗಳನ್ನು ಬಂದ್ ಮಾಡಲಾಗಿದೆ. ಕೆಲವು ಊರುಗಳಲ್ಲಿ ಒಂದು ಮೀಟರ್ ಅಂತರವನ್ನು ಎರಡೆರಡು ಕಿ.ಮೀ. ಸುತ್ತಿ ಬರಬೇಕಾಗಿದೆ. ಹೀಗಾಗಿ ಸಮಯ ಹಾಗೂ ಧಾವಂತದಿಂದ ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಕೆಲವು ವಾಹನಗಳಲ್ಲಿ ಹೆಡ್‌ಲೈಟ್ ಕೂಡ ಹಾಕುತ್ತಿಲ್ಲ. ಇದರಿಂದ ಬಹುತೇಕ ಜಂಕ್ಷನ್‌ಗಳಲ್ಲಿ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ಕೂಡ ರಸ್ತೆ ನಿಯಮ ಪಾಲಿಸಬೇಕಾಗಿದೆ.
ಆರಕ್ಷಕ ಇಲಾಖೆ ವಾಹನ ದಾಖಲೆ ಪರಿಶೀಲನೆ ಪ್ರಕರಣ ದಾಖಲಿಸುತ್ತಿದೆ ಇದರ ಜೊತೆಗೆ ಎಕಮುಖ ಸಂಚಾರದ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಜನರು ಕೂಡ ಈ ನಿಯಮಗಳಿಗೆ ಅವಲಂಬಿಸುವ ಮೂಲಕ ಅಪಘಾತ ತಡೆಗಟ್ಟಬೇಕು. ಹೆದ್ದಾರಿ ಸಂಚಾರ ಸುಗಮಗೊಳಿಸಬೇಕಾಗಿದೆ. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ
ಬೈಂದೂರು ವ್ಯಾಪ್ತಿಯಲ್ಲಿ ಏಕಮುಖ ಸಂಚಾರ ನಿಯಮ ಪಾಲಿಸದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.ಕೆಲವು ಕಡೆ ಇದುವರೆಗೆ ಏಕಮುಖ ಸಂಚಾರ ಆರಂಭಿಸಿಲ್ಲ.ಈಗಾಗಲೇ ಅಪಾಯಕಾರಿ ಜಂಕ್ಷನ್‌ಗಳಲ್ಲಿ ದಾನಿಗಳು ಹಾಗೂ ಇಲಾಖೆ ನೆರವಿನಿಂದ ಬ್ಯಾರಿ ಕೇಡ್ ಅಳವಡಿಸಲಾಗಿದೆ.ಸಾರ್ವಜನಿಕರು ಕೂಡ ರಸ್ತೆ ನಿಯಮ ಪಾಲಿಸಿದಾಗ ಅಪಘಾತ ಸಂಖ್ಯೆ ಇಳಿಮುಖವಾಗುತ್ತದೆ.
-ಸುರೇಶ್ ನಾಯಕ್, ವೃತ್ತ ನಿರೀಕ್ಷಕರು ಬೈಂದೂರು