ಆನೇಕಲ್: ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ನಡೆದ ದಬ್ಟಾಳಿಕೆ, ದೌರ್ಜನ್ಯ, ಭ್ರಷ್ಟಾಚಾರದ ಆಡಳಿತಕ್ಕೆ ಅಂತ್ಯ ಹಾಡಲು ಕ್ಷೇತ್ರದ ಯುವ ಸಮೂಹ ಸಜ್ಜಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎ.ನಾರಾಯಣಸ್ವಾಮಿ ¸ವಿಷ್ಯ ನುಡಿದರು.
ತಾಲೂಕಿನ ಯಮರೆ ಗ್ರಾಮದಲ್ಲಿ ನಡೆದ ಸಮಾರಂ¸ದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತಾಲೂಕು ಪಂಚಾಯ್ತಿ ಸದಸ್ಯ ಶ್ರೀನಿವಾಸ್ ರೆಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ನಾವೇ ಅಭ್ಯರ್ಥಿ ಎಂದು ಮತ ಯಾಚಿಸುತ್ತಿದ್ದಾರೆ. ಇಂತಹ ಪ್ರೀತಿ, ವಿಶ್ವಾಸವೇ ನನ್ನ ಶಕ್ತಿ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿ ಬಿಜೆಪಿ ಅಲೆಯಿದೆ. ಇನ್ನು 10 ದಿನ ಕಳೆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕ್ಷೇತ್ರದಲ್ಲೂ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಈ ಮೂಲಕ ಹಾಲಿ ಶಾಸಕರ ದುರಾಡಳಿತ ಕೊನೆಗೊಳ್ಳಲಿದೆ ಎಂದರು.
ಈಗಾಗಲೇ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ತಿಳಿಸಿರುವಂತೆ ಪಕ್ಷ ಆಡಳಿತಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಿದೆ. ನೇಕಾರರಿಗೆ ಸಬ್ಸಿಡಿ ನೀಡುವುದು, ಹೊಸ ನೀರಾವರಿ ಯೋಜನೆಗಳ ಜಾರಿ, ದಿನವಿಡೀ ವಿದ್ಯುತ್ ನೀಡುವುದು ಸೇರಿದಂತೆ ಎಲ್ಲ ಭರವಸೆಗಳನ್ನು ಪಕ್ಷ ಈಡೇರಿಸಲಿದೆ ಎಂದು ಹೇಳಿದರು.
ಪಕ್ಷ ಸೇರಿದ ಶ್ರೀನಿವಾಸ ರೆಡ್ಡಿ ಮಾತನಾಡಿ, ಕ್ಷೇತ್ರದ ಪ್ರಗತಿಗೆ ಶಾಸಕ ಬಿ.ಶಿವಣ್ಣ ಕೊಡುಗೆ ಏನೂ ಇಲ್ಲ. ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳು ಪ್ರಗತಿ ಕಂಡಿರುವುದು ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಅನುದಾನದಲ್ಲಿ. ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಹೈಮಾಸ್ಟ್ ದೀಪಗಳ ಅಳವಡಿಕೆ, ಹಾಲಿನ ಡೇರಿಗಳಿಗೆ ಭೂಮಿ ನೀಡಿರುವುದು,
ರುದ್ರಭೂಮಿಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಎ.ನಾರಾಯಣಸ್ವಾಮಿ ಅವರು ಶಾಸಕ, ಸಚಿವರಾಗಿದ್ದ ಅವಧಿಯಲ್ಲಿ ಎಂದರು. ತಾ.ಪಂ ಸದಸ್ಯ ಟಿ.ವಿ.ಬಾಬು, ಜಿ.ಪಂ ಸದಸ್ಯೆ ಪವಿತ್ರಾ ಜಯಪ್ರಕಾಶ್ ಹಾಗೂ ಇತರರು ಹಾಜರಿದ್ದರು.