Advertisement

ಗ್ರಾಮಸ್ಥರ ಬೇಡಿಕೆ ಇದೀಗ ಈಡೇರಿಕೆ

03:37 PM Nov 19, 2019 | Suhan S |

ತರೀಕೆರೆ: ವಿಧಾನಸಭಾ ಚುನಾವಣೆ ಸಮಯದಲ್ಲಿ ಸಮತಳ ಗ್ರಾಮಸ್ಥರು ಇಟ್ಟಿದ್ದ ಹಲವಾರು ಬೇಡಿಕೆಗಳನ್ನು ಇದೀಗ ಈಡೇರಿಸಲಾಗುತ್ತಿದೆ ಎಂದು ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

Advertisement

ಸಮತಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಯುಷ್‌ ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ, 1 ಕೋಟಿ ರೂ. ವೆಚ್ಚದಲ್ಲಿ ಸಮತಳ ಹಳಿಯೂರು ರಸ್ತೆ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 30 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದೊಳಗೆ ಸಿಸಿ ರಸ್ತೆ ನಿರ್ಮಾಣ ಮತ್ತು ನಿರ್ಮಿತಿ ಕೇಂದ್ರದ ವತಿಯಿಂದ ಬಸ್‌ ತಂಗುದಾಣದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಆಡಳಿತ ನಡೆಸಿದ ಶಾಸಕರು ಕ್ಷೇತ್ರದಲ್ಲಿ ಹೋದಕಡೆಗೆಲ್ಲ ಒಂದೊಂದು ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟುಕೊಂಡು ತಿರುಗಾಡಿದ್ದರು. ಗ್ರಾಮೀಣ ಭಾಗದ ಯಾವುದೇ ರಸ್ತೆಗಳು ಅಭಿವೃದ್ಧಿ ಕಂಡಿರಲಿಲ್ಲ. ಅವರೊಂದು ರೀತಿಯಲ್ಲಿ ಮತದಾರರ ದಿಕ್ಕು ತಪ್ಪಿಸುವ ಪೇಪರ್‌ ಟೈಗರ್‌ ಆಗಿದ್ದರು. ಸಾರ್ವಜನಿಕರು ಶಾಸಕರ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಅಭಿವೃದ್ಧಿ ಮಾಡಿದ ಶಾಸಕನನ್ನು ಜನರೇಕೆ ಸೋಲಿಸಿದರು. ಪಕ್ಷವೇಕೆ ಟಿಕೆಟ್‌ ನೀಡಲಿಲ್ಲ ಎಂದು ಪ್ರಶ್ನಿಸಿದರು. ಯಾವುದೇ ಶಾಸಕರಿಗೆ ಮತದಾರರು ಸ್ವಲ್ಪ ಕಾಲಾವಕಾಶ ನೀಡಬೇಕು. ಸರಕಾರದಿಂದ ಅನುದಾನ ತರುವುದು ಸುಲಭದ ಮಾತಲ್ಲ. ನಾನು ಸರಕಾರದ ಒಂದು ಭಾಗವಾಗಿ ಅನುದಾನವನ್ನು ತಂದು ಗುದ್ದಲಿ ಪೂಜೆ ನೆರವೇರಿಸಿ ಜನರ ಬಳಿಗೆ ಹೋಗುತ್ತಿದ್ದೇನೆ. ಅಧಿಕಾರವಧಿಯಲ್ಲಿ ನಡೆಸಿದ ಕೆಲಸದ ವಿವರಗಳನ್ನು ವರ್ಷಾಂತ್ಯದಲ್ಲಿ ಎಲ್ಲರಿಗೂ ನೀಡಲಾಗುವುದು. ಬೊಗಳೆ ಬಿಡುವುದು ನಮ್ಮ ಜಾಯಮಾನವಲ್ಲ, ಮತದಾರರಿಗೆ ಸುಳ್ಳು ಹೇಳುವುದಿಲ್ಲ ಎಂದರು.

ಜಿಲ್ಲೆಯಲ್ಲಿ 228 ಆಯುಷ್‌ ಆರೋಗ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ತಾಲೂಕಿನಲ್ಲಿ 38 ಎಂಎಚ್‌ಪಿ ಕೇಂದ್ರಗಳು ದೊರೆತ್ತಿದ್ದು, ಈಗಾಗಲೇ 28 ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲೂ ಬಿಎಸ್‌ಸಿ ನರ್ಸಿಂಗ್‌ ಮಾಡಿದವರಿಗೆ ಉದ್ಯೋಗ ನೀಡಲಾಗಿದೆ. ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿದೆ. ಲಕ್ಷಾಂತರ ನಿರುದ್ಯೋಗಿಗಳಿಗೆ

Advertisement

ಉದ್ಯೋಗಾವಕಾಶ ನೀಡುತ್ತಿದೆ ಎಂದರು. ಗ್ರಾಮದ ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರಿನಲ್ಲಿ ಫ್ಲೋರೈಡ್‌ ಅಂಶವಿದೆ ಎಂಬುದು ನನ್ನ  ಗಮನದಲ್ಲಿದೆ. ಈ ವರ್ಷ ನೆರೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಹೀಗಾಗಿ, ಸರಕಾರ ಶುದ್ಧಗಂಗಾ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಸರಕಾರ ಅನುದಾನ ನೀಡಿದಾಗ ಪ್ರಥಮ ಆದ್ಯತೆ ನೀಡಿ ಶುದ್ಧಗಂಗಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಪಂ ಸದಸ್ಯ ಆನಂದಪ್ಪ ಮಾತನಾಡಿ, ನಾವು ಸುಳ್ಳ ಹೇಳಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿಲ್ಲ, ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸುತ್ತಿದ್ದೇವೆ. ಕೇವಲ ಪತ್ರಿಕೆಗಳಲ್ಲಿ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ, ಹಿಂದಿನ ಅವಧಿ ಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು ಜನರ ಕಣ್ಣಿಗೆ ಏಕೆ

ಬೀಳುತ್ತಿಲ್ಲ ಎಂದು ಪ್ರಶ್ನಿಸಿದರು. ಅತಿಯಾದ ಮಳೆಯಿಂದಾಗಿ ತಾಲೂಕಿನಾದ್ಯಂತ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ತಿಗೆ ಆದ್ಯತೆ ನೀಡಬೇಕಾಗಿದೆ. 282 ಹಳ್ಳಿಗಳಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಹಂತ ಹಂತವಾಗಿ ಪರಿಹರಿಸುವ ಪ್ರಯತ್ನ ನಡೆಸಲಾಗುವುದು. ಪ್ರವಾಹದಿಂದಾಗಿ ನಮ್ಮದೇ ಬಿಜೆಪಿ ಸರಕಾರವಿದ್ದರೂ ಅನುದಾನ ತರುವುದು ಸ್ವಲ್ಪ ನಿಧಾನವಾಗಬಹುದು. ಸಾರ್ವಜನಿಕರು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದರು.

ಗಾಪಂ ಸದಸ್ಯ ಸುಧಾಕರ್‌ ಮಾತನಾಡಿದರು. ಗಾಪಂ ಅಧ್ಯಕ್ಷೆ ಪರ್ವಿನ್‌, ತಾಪಂ ಸದಸ್ಯೆ ಕಲ್ಪನಾ, ಹಾಲನಾಯ್ಕ, ಸದಸ್ಯ ಸುಧಾಕರ್‌, ಇಒ ವಿಶಾಲಾಕ್ಷಮ್ಮ, ಪಿಡಿಒ ಪವಿತ್ರಾ.ಎನ್‌.ಕೆ, ಗುಳ್ಳದಮನೆ ವಸಂತಕುಮಾರ್‌, ಹೊಳೆಯಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next