Advertisement

ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿಸಲು ಆಗ್ರಹ

02:33 PM Aug 03, 2018 | Team Udayavani |

ಶಹಾಪುರ: ಕೃಷ್ಣಾ ಕಾಡಾ ವ್ಯಾಪ್ತಿ ಬರುವ ತಾಲೂಕಿನ ಹಯ್ನಾಳ (ಬಿ) ಮತ್ತು ವಡಿಗೇರಾ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿಗೆ ಸಮರ್ಪಕ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕಾಡಾ ಮುಖ್ಯ ಎಂಜಿನಿಯರ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರೇಖರ ಮಾಗನೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಗನೂರ, ಕೆಳ ಭಾಗದ ಕಾಲುವೆಗೆ ನೀರು ತಲುಪದೆ ಇರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ರೈತರಿಗೆ ನೀರು ತಲುಪದಿರುವ ಕುರಿತು ತಿಳಿಸಿದರೂ ಯಾರೊಬ್ಬರು ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ. ಕಾಲುವೆ ನಿರ್ಮಾಣದಿಂದಲೂ ಕೆಳ ಭಾಗದ ರೈತರಿಗೆ ನೀರಿಲ್ಲ. ನೀರಾವರಿ ಪ್ರದೇಶದಡಿ ಭೂಮಿ ಕಳೆದುಕೊಂಡಿದ್ದು, ಅಲ್ಲದೆ ಕಾಲುವೆ ನಿರ್ಮಾಣವಾದರೂ ಇದುವರೆಗೂ ಕೆಳ ಭಾಗದ ಕಾಲುವೆಗೆ ನೀರು ಬರುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಆ. 5ರ ವರೆಗೆ ಕೆಳ ಭಾಗದ ಡಿಸ್ಟಿಬ್ಯೂಟರ್‌ -9 ವ್ಯಾಪ್ತಿ ಕಾಲುವೆಗೆ ನೀರು ಹರಿಸದಿದ್ದರೆ, ಕಾಡಾ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಕೃಷ್ಣಾ ಕಾಡಾ ವ್ಯಾಪ್ತಿ ಕಾಲುವೆ ನೀರನ್ನು ಅಕ್ರಮವಾಗಿ ಬಳಸುತ್ತಿದ್ದಾರೆ. ಆಂಧ್ರದ ಹಲವರು ಮೀನು ಸಾಕಾಣಿಕೆ ಕೆರೆಗಳಿಗೆ ಗದ್ದೆಗಳಿಗೆ ಅಕ್ರಮ ಪೈಪ್‌ ಲೈನ್‌ ಮಾಡಿ ಕಾಲುವೆ ನೀರನ್ನು ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಕೆಬಿಜೆಎನ್ನೆಲ್‌ ಅಧಿಕಾರಿಗಳು ಸಾಥ್‌ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೇಣು ಮಾದಪ್ಪ ನಾಯಕ, ಬಸನಗೌಡ ಪಾಟೀಲ, ಮುದಕಪ್ಪ, ಗೋವಿಂದಪ್ಪ ನರಿಬೋಳ, ಮಲ್ಲಣ್ಣ ಪೂಜಾರಿ, ಕೃಷ್ಣಪ್ಪ ದೊರಿ, ನಿಂಗಯ್ಯ ಕವಲಿ, ಭೀಮರಾಯ ಹೂಗಾರ, ರಾಮಪ್ಪ ಬಲಕಲ್‌, ಅಂಬ್ಲಿಯ್ಯ ಕವಲಿ, ರಾಮಣ್ಣ, ವೀರೇಶ ನಾಯಕ, ಹಣಮಂತ ಬೀರನೂರ, ಸೊಮಣ್ಣ, ಮಲ್ಲಣ್ಣ, ನಂದಣ್ಣ ಬೀರನೂರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next