Advertisement

ಹೆಲಿಕಾಪ್ಟರ್‌ ಬಳಕೆಗೆ ಬಿಜೆಪಿಯಲ್ಲೇ ಹೆಚ್ಚು ಬೇಡಿಕೆ

07:25 AM Apr 29, 2018 | Team Udayavani |

ಬೆಂಗಳೂರು: ಚುನಾವಣೆ ಪ್ರಚಾರಕ್ಕೆ ಪ್ರಮುಖ ರಾಜಕೀಯ ಪಕ್ಷಗಳಿಂದ ಹೆಲಿಕಾಪ್ಟರ್‌ಗಳ ಬಳಕೆಗಾಗಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಒಟ್ಟು 53 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಬಿಜೆಪಿಯಿಂದ ಅತಿ ಹೆಚ್ಚು ಅರ್ಜಿಗಳು ಬಂದಿವೆ. ಬಿಜೆಪಿ 40 ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 36 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಎರಡು ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 2 ಅರ್ಜಿಗಳು ಬಾಕಿ ಇವೆ. ಕಾಂಗ್ರೆಸ್‌ 2 ಅರ್ಜಿಗಳನ್ನು ಸಲ್ಲಿಸಿದ್ದು ಎರಡಕ್ಕೂ ಅನುಮತಿ ಕೊಡಲಾಗಿದೆ.

Advertisement

ಜೆಡಿಎಸ್‌ನಿಂದ 10 ಅರ್ಜಿಗಳು ಬಂದಿದ್ದು, 9 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. 1 ಅರ್ಜಿ ಬಾಕಿ ಇದೆ. ಇತರರು ಒಂದು ಅರ್ಜಿ ಸಲ್ಲಿಸಿದ್ದು,ಅದನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next