Advertisement

ಕಲಬುರ್ಗಿ ಹಂತಕರ ಬಂಧನಕ್ಕೆ ಆಗ್ರಹ

04:16 PM Aug 31, 2017 | Team Udayavani |

ಸುರಪುರ: ಖ್ಯಾತ ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ ಅವರ ಕೊಲೆಗೈದ ಹಂತಕರನ್ನು
ತ್ವರಿತವಾಗಿ ಬಂಧಿಸಬೆಕು ಎಂದು ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಆಗ್ರಹಿಸಿದರು.

Advertisement

ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜೂ ಕುಂಬಾರ ಏರ್ಪಡಿಸಿದ್ದ ಡಾ| ಎಂ.ಎಂ.
ಕಲಬುರ್ಗಿ ಅವರ ಎರಡನೇ ಸ್ಮರಣೋತ್ಸವ ಹಾಗೂ ವಚನ ಬಾಲಕಿಯ ನಾಮಕರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಮೌಡ್ಯತೆಯನ್ನು ವಿರೋಧಿಸಿ ಸಮಾಜಕ್ಕಂಟ್ಟಿದ
ಕೊಳಕನ್ನು ನಿವಾರಿಸಲು ಡಾ| ಕಲಬುರ್ಗಿ ಅವಿರತವಾಗಿ ಶ್ರಮಿಸಿದ್ದರು. ಶೈವ ಸಂಸ್ಕೃತಿಯನ್ನು
ಬಲವಾಗಿ ಖಂಡಿಸುತ್ತಿದ್ದರು. ಲಿಂಗಾಯತವೇ ಸ್ವತಂತ್ರ್ಯ ಧರ್ಮಕ್ಕೆ ಯೋಗ್ಯ ಎನ್ನುವದನ್ನು ಆಧಾರ
ಸಹಿತವಾಗಿ ಪ್ರತಿಪಾದಿಸಿದ್ದರು. ಅವರ ವಿಚಾರಗಳನ್ನು ಸಹಿಸಲಾಗದ ದುಷ್ಟ ಶಕ್ತಿಗಳು ಅವರನ್ನು ಕೊಲೆ ಮಾಡಿವೆ ಎಂದು ಆರೋಪಿಸಿದರು.

ವಚನ ಸಾಹಿತ್ಯದಲ್ಲಿ ಕಂಡುಬರುವ ಮಾನವೀಯ ಮೌಲ್ಯಗಳು ಬೇರಾವ ಸಾಹಿತ್ಯದಲ್ಲಿ ಕಂಡು
ಬರುವುದಿಲ್ಲ. ಸರಳ ಭಾಷೆಯಲ್ಲಿರುವ ವಚನ ಸಾಹಿತ್ಯ ಶ್ರೀ ಸಾಮಾನ್ಯ ಸಾಹಿತ್ಯವಾಗಿ ಬೆಳೆಯಿತು.
ದಿನ ಕಳೆದಂತೆ ಹೆಚ್ಚು ಜನಪ್ರೀಯತೆ ಗಳಿಸಿತು. ವಚನ ಸಾಹಿತ್ಯ ಹೊರ ಬಂದರೆ ಸನಾತನ ಪರಂಪರೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಸನತಾನವಾದಿಗಳು ವಚನ ಸಾಹಿತ್ಯವನ್ನು ಮೂಲೆ ಗುಂಪು ಮಾಡಿದರು ಎಂದು ಆರೋಪಿಸಿದ ಅವರು, ಇದಕ್ಕೆ ಕಲಬುರ್ಗಿ ಅವರು ಪುನಃಶ್ಚೇತನ ನೀಡಿ ಸನಾತನಿಗಳ ಕೆಂಗಣ್ಣಿಗೆ ಗುರಿಯಾದರು ಎಂದು ದೂರಿದರು.

ಕಲಬುರ್ಗಿ ಕೊಲೆಯಾದ ಮಾತ್ರಕ್ಕೆ ಅವರ ವಿಚಾರ ಕೊಲೆ ಆಗಿಲ್ಲ. ಹೋರಾಟವು ನಿಂತ್ತಿಲ್ಲ. ಅವರ ವಿಚಾರಗಳಿಂದ ಪ್ರಭಾವಿತರಾದ ಸಾವಿರಾರು ಯುವಕರು ಇವತ್ತು ಬೀದಿಗಿಳಿದು ಹೋರಾಟ
ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಗುರುಮಿಠಕಲ್‌ ಖಾಸಾಮಠದ
ಶಾಂತವೀರ ಮುರಘರಾಜೇಂದ್ರ ಸ್ವಾಮಿಗಳು ಮಾತನಾಡಿ. ಕಲಬುರ್ಗಿ ಅವರ ಕೊಲೆ ತನಿಖೆಯನ್ನು
ಸಮಾಜದ ತಾಳ್ಮೆಯನ್ನು ಪರೀಕ್ಷಿಸದೆ ಸರಕಾರ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು. ತನಿಖೆಗೆ ವೇಗ
ಹೆಚ್ಚಿಸಿ ಆರೋಪಿಗಳನ್ನು ಬೇಗನೆ ಸರೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಚಿತಂಕ ಶಿವಣ್ಣ ಇಜೇರಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವಪ್ಪ ಗಾಳೆನವರ್‌. ಮಲ್ಲಿಕಾರ್ಜುನ ಗುಂಡಾನವರ್‌ ವಚನಗಾಯನ ಮಾಡಿದರು. ರಾಜೂ ಕುಂಬಾರ ಸ್ವಾಗತಿಸಿದರು. ಶಿವುರುದ್ರುಳ್ಳಿ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next