Advertisement

IT ಇಲಾಖೆ ಆದೇಶ: ಇಂದು ಕಾಂಗ್ರೆಸ್‌ ಮನವಿ ಆಲಿಸಲು ಒಪ್ಪಿದ ದಿಲ್ಲಿ ಹೈಕೋರ್ಟ್‌

08:36 AM Mar 20, 2024 | Team Udayavani |

ಹೊಸದಿಲ್ಲಿ: ತೆರಿಗೆ ರಿಟರ್ನ್ಸ್ಗಳ ಮರು ಪರಿ ಶೀಲನೆಗೆ ಆದೇಶಿಸಿರುವ ಆದಾಯ ತೆರಿಗೆ ಇಲಾ ಖೆಯ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದೆ. ಜತೆಗೆ ಈ ಪ್ರಕರ ಣದ ತ್ವರಿತ ವಿಚಾರಣೆಗೆ ಕೋರ್ಟ್‌ ಒಪ್ಪಿದೆ.

Advertisement

ಕಾಂಗ್ರೆಸ್‌ ಪರ ನ್ಯಾಯವಾದಿ ಪ್ರಸನ್ನ ಎಸ್‌. ಅವರು, ಆದಾಯ ತೆರಿಗೆ ಇಲಾಖೆ ಪಕ್ಷದ ವಿರುದ್ಧ 3 ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.

ವಿಶೇಷ ಎಂದರೆ, 105 ಕೋಟಿ ರೂ. ವಸೂಲಾತಿಗೆ ನೀಡಿದ್ದ ಡಿಮ್ಯಾಂಡ್‌ ನೋಟಿಸ್‌ಗೆ ತಡೆಯಾಜ್ಞೆ ನೀಡುವ ಮನವಿಯನ್ನು ತಿರಸ್ಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶ ವಿರುದ್ಧ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ಮಾ.13ರಂದು ತಿರಸ್ಕರಿಸಿತ್ತು.

ಇದನ್ನೂ ಓದಿ: Tragedy: ಕೊಡಲಿಯಿಂದ ಕೊಚ್ಚಿ 2 ಮಕ್ಕಳ ಹತ್ಯೆ ಮಾಡಿದ ಕ್ಷೌರಿಕ ಎನ್​ಕೌಂಟರ್​ನಲ್ಲಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next