Advertisement
ನಿಯಮದಂತೆ, ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನ ಗಳಿಸಿದ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ. ಉಳಿದ 4 ತಂಡಗಳಾದ ಬುಲ್ಸ್-ಯುಪಿ ಯೋಧಾ, ಯು ಮುಂಬಾ-ಹರ್ಯಾಣ ಅಹ್ಮದಾಬಾದ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ.
ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಸೆಣಸಲಿದೆ. ಬುಲ್ಸ್‌ಗೆ ನಾಯಕ ರೋಹಿತ್ ಕುಮಾರ್ ಅನುಪಸ್ಥಿತಿ ಕಾಡುತ್ತಿದ್ದು, ತಂಡದ ಸಂಪೂರ್ಣ ಜವಾಬ್ದಾರಿ ಪವನ್ ಸೆಹ್ರಾವತ್ ಮೇಲಿದೆ. ತಂಡದ ಅಷ್ಟೂ ನಿರ್ವಹಣೆ ಸೆಹ್ರಾವತ್ ಆಟವನ್ನೇ ಅವಲಂಬಿಸಿದೆ. ಅವರ ಏಕಾಂಗಿ ಹೋರಾಟದಿಂದಲೇ ತಂಡ ಪ್ಲೇ-ಆಫ್ ಹಂತದ ವರೆಗೆ ತಲುಪಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಎಲಿಮಿನೇಟರ್ ಸ್ಪರ್ಧೆ ಬೇರೆಯೇ ಜೋಶ್ ಹೊಂದಿರುತ್ತದೆ. ಸಾಂ ಕವಾಗಿ ಆಡಿದರಷ್ಟೇ ಬುಲ್ಸ್ ಓಟ ಮುಂದುವರಿದೀತು. ಯುಪಿ ಯೋಧಾ ಎದುರಿನ ಕೊನೆಯ ಲೀಗ್ ಪಂದ್ಯದಲ್ಲಿ ಬುಲ್ಸ್ ಎಡವಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ. ಒಂದು ವೇಳೆ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಬುಲ್ಸ್ ಸೆಮಿಫೈನಲ್‌ಗೇರಿದರೂ ಅಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ಸವಾಲು ಎದುರಾಗಲಿದೆ. ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಡೆಲ್ಲಿ ವಿರುದ್ಧ ಸೆಣಸುವುದು ಸುಲಭವಲ್ಲ.
Related Articles
ಬುಲ್ಸ್‌ಗೆ ಹೋಲಿಸಿದರೆ ಯುಪಿ ಯೋಧಾ ರೈಡಿಂಗ್ ಹಾಗೂ ಟ್ಯಾಕಲ್ ವಿಭಾಗಗಳೆರ ಡರಲ್ಲೂ ಬಲಿಷ್ಠವಾಗಿದೆ. ಇದೊಂದು ಸಶಕ್ತ ಹಾಗೂ ಪರಿಪೂರ್ಣ ತಂಡ. ಕನ್ನಡಿಗ ರಿಷಾಂಕ್ ಅವರ ಆಲ್‌ರೌಂಡ್ ಆಟ; ಶ್ರೀಕಾಂತ್, ಮೋನು ಗೋಯತ್ ಅವರ ಅಮೋಘ ರೈಡಿಂಗ್, ನಾಯಕ ನಿತೇಶ್ ಕುಮಾರ್ ಅವರ ಟ್ಯಾಕಲ್ ಎದುರಾಳಿಗೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
Advertisement
ಮುಂಬಾ-ಹರ್ಯಾಣ ಸಮಬಲ ಯು ಮುಂಬಾ ಮತ್ತು ಹರ್ಯಾಣ ಸ್ಟೀಲರ್ ನಡುವಿನ 2ನೇ ಎಲಿಮಿನೇಟರ್ ಪಂದ್ಯ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ತಂಡಗಳು ಸಮಾನ ಸಾಮರ್ಥ್ಯದೊಂದಿಗೆ ಬಲಿಷ್ಠವಾಗಿರುವುದೇ ಇದಕ್ಕೆ ಕಾರಣ.