Advertisement

ಕೆರೆಯಲ್ಲಿ ತೇಲುತ್ತಿದ್ದ ಜಿಂಕೆ ಶವ ಹೊರಕ್ಕೆ

07:25 AM Feb 12, 2019 | |

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ತಪ್ಪಲಿನ ಕೃಷ್ಣಯ್ಯನಕಟ್ಟೆಯ ನೀರಿನಲ್ಲಿ ತೇಲುತ್ತಿದ್ದ ಜಿಂಕೆಯ ಕಳೇಬರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮುಕ್ತಿ ನೀಡಿದರು.

Advertisement

ಕಳೆದ ನಾಲ್ಕು ದಿನಗಳಿಂದಲೂ ಕೃಷ್ಣಯ್ಯನಕಟ್ಟೆಯ ನೀರಿನಲ್ಲಿ ಜಿಂಕೆ ಶವ ತೇಲುತ್ತಿತ್ತು. ಆದರೆ, ಅರಣ್ಯ ಇಲಾಖೆಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಈ ಕುರಿತು ‘ಉದಯವಾಣಿ’ಯಲ್ಲಿ ಫೆ.10ರಂದು ‘ಕೃಷ್ಣಯ್ಯನಕಟ್ಟೆಯಲ್ಲಿ ತೇಲುತ್ತಿರುವ ಜಿಂಕೆ ಕಳೇಬರ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಸಿಬ್ಬಂದಿ, ಸೋಮವಾರ ಬೆಳಗ್ಗೆ ಕೃಷ್ಣಯ್ಯನಕಟ್ಟೆಗೆ ಧಾವಿಸಿ ನೀರಿನಲ್ಲಿ ತೇಲುತ್ತಿದ್ದ ಜಿಂಕೆಯ ಕಳೇಬರವನ್ನು ಹೊರ ತೆಗೆದರು. ನಂತರ ಪಶು ವೈದ್ಯ ಡಾ. ರಾಘವೇಂದ್ರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಈ ಭಾಗದಲ್ಲಿ ಸೀಳುನಾಯಿಗಳು ಹೆಚ್ಚಾಗಿವೆ. ಅವು ಗುಂಪುಗುಂಪಾಗಿ ಜಿಂಕೆಗಳ ಮೇಲೆ ದಾಳಿ ನಡೆಸುತ್ತವೆ. ಹೀಗಾಗಿ ಸೀಳುನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಜಿಂಕೆ ನೀರಿಗಿಳಿದರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಮರಣೋತ್ತರ ವರದಿ ಬಂದ ಮೇಲೆ ಖಚಿತವಾಗಿ ಏನಾಗಿದೆ ಎಂಬುದು ತಿಳಿಯಲಿದೆ. ಈಗ ಕಳೇಬರವನ್ನು ಸುಟ್ಟು ಹಾಕಲಾಗಿದೆ ಎಂದು ಅರಣ್ಯ ಇಲಾಖೆಯ ರಘುರಾಮ್‌ ತಿಳಿಸಿದ್ದಾರೆ.

ಬಿಆರ್‌ಟಿ ಅರಣ್ಯ ಧಾಮವು ರಾಜ್ಯದಲ್ಲಿ ವಿಶಿಷ್ಟ ಕಾಡು ಪ್ರಭೇಧವನ್ನು ಒಳಗೊಂಡಿದೆ. ಈಗ ಬೇಸಿಗೆ ಕಾಲವಾಗಿದೆ. ಈಗಾಗಲೇ ಬೆಂಕಿರೇಖೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಿರ್ಮಿಸಿದ್ದಾರೆ. ಆದರೂ ಬೆಂಕಿ ಅವಘಡಗಳನ್ನು ಸಂಭವಿಸದಂತೆ ಕಾಯ್ದುಕೊಳ್ಳಲು ಕಟ್ಟೆಚ್ಚರ ವಹಿಸಬೇಕಿದೆ. ಆದರೂ ಅಲ್ಲಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತದೆ. ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇರುವ ನೀರನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಪರಿಸರಪ್ರಿಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next