ಮಣಿಪಾಲ: ಕೋವಿಡ್ ಸೋಂಕು ದೇಶಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲೇ ದೇಶೀ ವಿಮಾನ ಯಾನ ಹಾಗೂ ಪೂರ್ಣ ಪ್ರಮಾಣದ ರೈಲು ಯಾನ ಪ್ರಾರಂಭಿಸುವ ಸರಕಾರದ ನಿರ್ಧಾರ ಮತ್ತಷ್ಟು ಅಪಾಯಕಾರಿಯಾಗಬಹುದೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಸಂಜಯ್ ಪಾಟೀಲ್: ಇಷ್ಟು ದಿನ ವಿದೇಶದಿಂದ ಬರುವ ಪ್ರಯಾಣಿಕರ ಮೂಲಕ ಕೋವಿಡ್-19 ಹರಡಿತು ಈಗ ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಂದ ಹರಡುತ್ತದೆ. ಮುಂದೆ ಜಿಲ್ಲೆಯಿಂದ ಜಿಲ್ಲೆ.
ರಾಧಿಕ ಮಲ್ಯ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಕೋವಿಡ್-19 ಜೊತೆ ಜೀವಿಸಲು ಕಲಿಯಬೇಕು ಎಂದು. ಅದರಂತೆ ಸರ್ಕಾರ ಹೆಜ್ಜೆ ಇಡುತ್ತಿದೆ. ಪ್ರತಿಯೊಂದು ಸಂಸ್ಥೆಯಲ್ಲಿ ಅದನ್ನು ನಂಬಿ ಜೀವನ ನಡೆಸುವವರಿದ್ದಾರೆ ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವೇ? ಸರ್ಕಾರ ಜನರಿಗೆ ಅರಿವು ಮೂಡಿಸಿದೆ ಮತ್ತೆ ಚಿಕಿತ್ಸೆಯ ವ್ಯವಸ್ಥೆ ಮಾಡಿದೆ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ .
ಚಿ. ಮ. ವಿನೋದ್ ಕುಮಾರ್: ಖಂಡಿತ ವಾಗಿಯೂ ಇದರಿಂ ಮತ್ತಷ್ಟು ಕೋವಿಡ್-19 ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತದೆ. ಇದೊಂದು ಅಪಾಯಕಾರಿ ನಿರ್ಧಾರ
ಸದಾಶಿವ್ ಸದಾಶಿವ್: ಸಡಿಲಿಕೆ ಅನಿವಾರ್ಯ, ಇದನ್ನು ಸದುಪಯೋಗ ಅರ್ಥಾತ್ ಕೇವಲ ಅಗತ್ಯವಿದ್ದರೆ ಮಾತ್ರವೇ ಪ್ರಯಾಣ ನ ಮಾಡುವುದು ಒಳಿತು. ನಮ್ಮ ಸುರಕ್ಷೆ ಮ್ಮ ಕೈಯಲ್ಲಿ ವಿನಃ ಸರಕಾರದ ಅಥವಾ ಅಧಿಕಾರಿಗಳು ಕೈಯಲ್ಲಿ ಅಲ್ಲ. ನಾವೇ ಜವಬ್ದಾರಿ ಇಲ್ಲದೆ ವರ್ತಿಸಿ ಮತ್ತೆ ಸರಕಾರ, ಅಧಿಕಾರಿಗಳನ್ನು ದೂರಿ ಅವರಲ್ಲಿ ತಪ್ಪು ಕಂಡುಹಿಡಿಯುವ ಪರಿ ಸಲ್ಲದು.
ದಯಾನಂದ ಕೊಯಿಲಾ: ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯ ಪಾಲಿಸುವುದರೊಂದಿಗೆ ಯಥಾಸ್ಥಿತಿಯನ್ನು ಮಾಮೂಲಿಗೊಳಿಸುವುದರಿಂದ ಬಿಗಡಾಯಿಸಿದ ಸ್ಥಿತಿ ಸುಧಾರಣೆ ಮಾಡಬಹುದು ಜಾಗೃತರಾಗಬೇಕಾದುದು ಜನತೆ.