Advertisement

ಕನಕ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

04:01 PM Nov 09, 2019 | Suhan S |

ಹೊಳೆನರಸೀಪುರ: ನ.15ರಂದು ಕನಕ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲು ತಾಲೂಕುದಿಂದ ತೀಮಾನಿಸಲಾಯಿತು.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಪಂ ಇಒ ಕೆ.ಯೋಗೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15ರಂದು ಪಟ್ಟಣದ ಕನಕಭವನದಿಂದ ಮೆರವಣಿಗೆ ಯಲ್ಲಿ ಕನಕರ ಭವ್ಯ ಚಿತ್ರವನ್ನು ತೆರೆದ ವಾಹನದಲ್ಲಿ ಅಂಬೇಡ್ಕರ್‌ ವೃತ್ತ, ಕೆಂಪೇಗೌಡ ವೃತ್ತ, ಚನ್ನಾಂಬಿಕಾ ವೃತ್ತ, ಮುಖ್ಯ ರಸ್ತೆ, ಸುಭಾಷ್‌ ವೃತ್ತದ ಮೂಲಕ ಜಯಚಾಮರಾಜೇಂದ್ರ ವೃತ್ತದ ಮೂಲಕ ವೇದಿಕೆಗೆ ಕರೆತರಲು ತಿರ್ಮಾನಿಸಲಾಯಿತು.

ಪ್ರಮುಖ ಭಾಷಣಕಾರರಾಗಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಲಲಿತಾಭಾಯಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ಮಧ್ಯಾಹ್ನ ಲಘು ಉಪಾಹಾರ ಆಯೋಜಿಸಲು ತಾಲೂಕು ಕುರುಬರ ಸಂಘಕ್ಕೆ ಜವಾಬ್ದಾರಿ ನೀಡಲಾಯಿತು. ಸಭೆಯಲ್ಲಿ ಹಾಜರಿರಬೇಕಾಗಿದ್ದ ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಬಾರದೆ ಇರುವುದಕ್ಕೆ ಸಭೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳು ವಂತೆ ಒತ್ತಾಯಿಸಲಾಯಿತು.

ಕನಕ ಜಯಂತಿ ಪ್ರಯುಕ್ತ ತಾಲೂಕು ಕುರುಬರ ಸಂಘದಿಂದ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆ ಯಲ್ಲಿ ಭಾಗವಹಿಸಲು ತಿರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎರಡು ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲು ಮತ್ತು ವೇದಿಕೆ ನಿರ್ಮಾಣವನ್ನು ಪಟ್ಟಣದ ಪುರಸಭೆಗೆ ಹೊಣೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಇಒ ಲೋಕೇಶ್‌, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ತಾಲೂಕು ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರೆಹಮಾನ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಷ್ಪಲತಾ, ಬಿಆರ್‌ಸಿ ಸೌಭಾಗ್ಯ, ಕಾರ್ಮಿಕ ನಿರೀಕ್ಷಕಿ ಮಂಗಳಗೌರಿ, ದೈಹಿಕ ಪರಿವೀಕ್ಷಕ ಎಸ್‌.ಎನ್‌.ನಾಗರಾಜು, ತಾಲೂಕು ಜೆಡಿಎಸ್‌ ಅಧ್ಯಕ್ಷ ಪುಟ್ಟಸೋಮಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಕೆ.ಕುಮಾರಯ್ಯ, ನಗರಠಾಣೆ ಪಿಎಸ್‌ಐ ಕುಮಾರ್‌, ಬಿಸಿಎಂ ಅಧಿಕಾರಿ ಮಂಜುನಾಥ್‌, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂಗು, ಸಾಮಾಜಿಕ ಅರಣ್ಯಾಧಿಕಾರಿ ಶಿವಣ್ಣ ಇತರರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next