Advertisement

ಮೃತ ವ್ಯಕ್ತಿ ಕುಟುಂಬಸ್ಥರ ಕ್ಷಮೆಯಾಚಿಸಿದ ಆಯುಕ್ತ

05:28 AM Jul 05, 2020 | Team Udayavani |

ಬೆಂಗಳೂರು: ಕೋವಿಡ್‌ 19 ಸೋಂಕು ದೃಢಪಟ್ಟು ಸೂಕ್ತ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದ ಹನುಮಂತನಗರದ ಕೋವಿಡ್‌ 19 ಸೋಂಕಿತ ವ್ಯಕ್ತಿ ಮನೆಗೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಶನಿವಾರ ಭೇಟಿ ನೀಡಿದ್ದು, ಘಟನೆ ಸಂಬಂಧ ಕುಟುಂಬಸ್ಥರನ್ನು ಕೈ ಮುಗಿದು ಕ್ಷಮೆಯಾಚಿಸಿದ್ದಾರೆ.

Advertisement

ಹನುಮಂತನಗರದ (ಗವಿಪುರಂ)ನ ರಾಮಾಂಜ ನೇಯ ರಸ್ತೆಯ 7ನೇ ಕ್ರಾಸ್‌ ಬಳಿ ವ್ಯಕ್ತಿಯೊಬ್ಬರಿಗೆ  ಶುಕ್ರವಾರ ಸೋಂಕು ದೃಢಪಟ್ಟಿತ್ತು. ಸಕಾಲದಲ್ಲಿ ಆ್ಯಂಬು ಲೆನ್ಸ್‌ ಸಿಗದ ಹಿನ್ನೆಲೆಯಲ್ಲಿ ಅವರು ಮನೆ ಸಮೀಪವೇ ಮೃತಪಟ್ಟಿದ್ದರು. ಅಲ್ಲದೇ, ಮೃತಪಟ್ಟವರ ಶವ ಸಾಗಿಸಲು 3ಗಂಟೆಯಾದರೂ ಬಿಬಿಎಂಪಿಯ ಯಾವೊಬ್ಬ ಅಧಿಕಾರಿಯೂ ಸ್ಪಂದಿಸದ ಅಮಾನವೀಯ ಘಟನೆಗೆ ಬೆಂಗಳೂರು ಶುಕ್ರವಾರ ಸಾಕ್ಷಿಯಾಗಿತ್ತು.

ಈ ಘಟನೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಸಂಬಂಧ ಶನಿವಾರ ಕೋವಿಡ್‌ 19 ಸೋಂಕಿನಿಂದ ಮೃತಪಟ್ಟವರ  ಕುಟುಂಬಸ್ಥರನ್ನು ಭೇಟಿ ಮಾಡಿದ ಬಿಬಿಎಂಪಿ ಆಯುಕ್ತರು, ಇಂತಹ ಘಟನೆ ನಡೆಯ  ಬಾರದಾಗಿತ್ತು. ಬಿಬಿಎಂಪಿ ಅಧಿಕಾರಿಗಳ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಕೈಮುಗಿದು ಕುಟುಂಬಸ್ಥರ ಬಳಿ ಕ್ಷಮೆ ಕೋರಿದರು. ಇದೇ ವೇಳೆ  ಮೃತ ವ್ಯಕ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ: ಬಿಬಿಎಂಪಿ ಅಧಿಕಾರಿಗಳ ಪರವಾಗಿ ಬಿಬಿಎಂಪಿ ಆಯುಕ್ತರು ಕ್ಷಮೆ  ಯಾಚಿಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರಪ್ರತಿಕ್ರಿಯೆ  ವ್ಯಕ್ತವಾಗಿದೆ. ಹಲವು ಸಾರ್ವಜನಿಕರು ಆಯುಕ್ತರ ಕ್ರಮವನ್ನು ಸ್ವಾಗತಿಸಿದ್ದಾರೆ. ಇನ್ನು ಕೆಲವರು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯ ಕೊಡಿಸಿ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ  ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next