Advertisement
ಕೊಯಮತ್ತೂರು ಮತ್ತು ಈರೋಡ್‌ನ ಕಾಲೇಜು ವಿದ್ಯಾರ್ಥಿಗಳು, ಚೆನ್ನೈಯಿಂದ ಆಗಮಿಸಿದ ಮಹಿಳೆಯರು ರವಿವಾರ ಕುರಂಗಣಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದಾರೆ. ಮೂಲಗಳ ಪ್ರಕಾರ ಅವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಒಟ್ಟು ಮೂವತ್ತೇಳು ಮಂದಿ ಪರ್ವತ ಪ್ರದೇಶದಲ್ಲಿ ಇದ್ದಾರೆ. ಕೊಯಮತ್ತೂರಿನಲ್ಲಿರುವ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ಗಳನ್ನು ರಕ್ಷಣೆಗೆ ನಿಯೋಜಿಸಲಾಗಿದೆ. ಇದೇ ವೇಳೆ 27 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಳ್ಗಿಚ್ಚು ಉಂಟಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಐಎಎಫ್ನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರಿಗೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ್ದ ರಕ್ಷಣಾ ಸಚಿವರು ಕೊಯಮತ್ತೂರಿನಲ್ಲಿರುವ ಏರ್‌ಬೇಸ್‌ಗೆ ನೆರವಾಗುವಂತೆ ಸೂಚಿಸಿದ್ದರು.