Advertisement

ಸಾವಿನ ಪ್ರಮಾಣ ನಮ್ಮಲ್ಲೇ ಕಡಿಮೆ : ಬ್ರುಸೆಲ್ಸ್‌ನಲ್ಲಿ ಹೆಚ್ಚು; ಸಿಂಗಾಪುರದಲ್ಲಿ ಕಮ್ಮಿ

01:09 PM Apr 27, 2020 | sudhir |

ಹೊಸದಿಲ್ಲಿ: ಕೋವಿಡ್ ವೈರಸ್‌ ಜಗತ್ತನ್ನೇ ನಲುಗುವಂತೆ ಮಾಡಿದೆ. ಭಾರತದಲ್ಲಿ ಹಲವು ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಸಮಾಧಾನ ತರುವ ಅಂಶವೆಂದರೆ ಅಮೆರಿಕ, ಸ್ಪೇನ್‌, ಯು.ಕೆ., ಇಟಲಿಯ ಮಹಾನಗರಗಳಲ್ಲಿ ಉಂಟಾಗಿರುವಂಥ ಸಾವಿನ ಪ್ರಮಾಣ ಭಾರತದ ನಗರಗಳಲ್ಲಿ ಸಂಭವಿಸಿಲ್ಲ. ದೇಶದಲ್ಲಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ದೆಹಲಿ ಮೂರನೇ ಸ್ಥಾನದಲ್ಲಿದೆ. ಇದರ ಜೊತೆಯಲ್ಲೇ, ಕೋವಿಡ್ ಸಾವು ತೀರಾ ಕಡಿಮೆ ಇರುವ ವಿಶ್ವದ ಮಹಾನಗರಗಳ ಜೊತೆಗೆ ದಿಲ್ಲಿ ಗುರುತಿಸಿಕೊಂಡಿದೆ. ಅಲ್ಲಿ ಸೋಂಕಿತರ ಸಾವಿನ ಪ್ರಮಾಣ 2.1ರಷ್ಟಿರುವುದರ ಮೂಲಕ ಹೆಗ್ಗಳಿಕೆಯನ್ನು ನಗರಕ್ಕೆ ತಂದುಕೊಟ್ಟಿದೆ.

Advertisement

ಈ ಪಟ್ಟಿಯ ಟಾಪ್‌ 3 ಸ್ಥಾನಗಳಲ್ಲಿ ಸಿಂಗಾಪುರ (ಶೇ. 0.1), ಮಾಸ್ಕೋ (0.88), ಜರ್ಮನಿಯ ರಾಜಧಾನಿ ಬರ್ಲಿನ್‌ (ಶೇ. 2.05) ಇದೆ. ಸ್ವಿಜರ್ಲೆಂಡ್‌ನ‌ ಜ್ಯೂರಿಚ್‌ (ಶೇ. 2.41) ಐದನೇ ಸ್ಥಾನದಲ್ಲಿದೆ.

ಸಾವು ಹೆಚ್ಚಾಗಿರುವುದು: ಸಾವಿನ ಸಂಖ್ಯೆ ಅತಿ ಹೆಚ್ಚಾಗಿರುವ ನಗರಗಳಲ್ಲಿ ಬ್ರುಸೆಲ್ಸ್‌ (ಶೇ. 22.85) ಅಗ್ರಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಇಟಲಿಯಲ್ಲಿ (ಶೇ. 20.55) ಇದೆ. 3ನೇ ಸ್ಥಾನದಲ್ಲಿರುವ ಲಂಡನ್‌ನಲ್ಲಿ (ಶೇ. 18.89) ಶೇ. 65ರಷ್ಟು ಪುರುಷರು ಧೂಮಪಾನದ ದಾಸರು. ಜೊತೆಗೆ, ಇಲ್ಲಿ ಸೋಂಕು ಶಂಕಿತರನ್ನು ಪರೀಕ್ಷೆಗೊಳಪಡಿಸುವ ಕ್ರಮವನ್ನು ತೀರಾ ತಡವಾಗಿ ಜಾರಿಗೆ ತರಲಾಯಿತು. ಈ ಎರಡೂ ಕಾರಣಗಳಿಂದಾಗಿ ಇಲ್ಲಿನ ಸಾವಿನ ಪ್ರಮಾಣ ಹೆಚ್ಚಾಗಿಯೇ ಇದೆ. 4ನೇ ಮತ್ತು 5ನೇ ಸ್ಥಾನಗಳಲ್ಲಿರುವ ಬ್ಲಿಡಾ (ಶೇ. 14.53), ಮ್ಯಾಡ್ರಿಡ್‌ (ಶೇ. 12.70) ನಗರಗಳದ್ದೂ ಇದೇ ಕಥೆ.

ಜನಸಂಖ್ಯೆ ಹಾಗೂ ಸಾವಿನ ಅನುಪಾತ
ಅತಿ ಹೆಚ್ಚು ಸಾವುಗಳಿಗೆ ಸಾಕ್ಷಿಯಾದ ವಿಶ್ವದ ಟಾಪ್‌ 5 ನಗರಗಳೆಂದರೆ, ವುಹಾನ್‌, ಇಸ್ತಾಂಬುಲ್‌, ಮ್ಯಾಡ್ರಿಡ್‌, ಲಂಡನ್‌, ನ್ಯೂಯಾರ್ಕ್‌ ಸಿಟಿ. ವುಹಾನ್‌ನಲ್ಲಿ ಶೇ. 83.53ರಷ್ಟು ಜನರು ಸಾವಿಗೀಡಾಗಿದ್ದರೆ, ಇಸ್ತಾಂಬುಲ್‌ನಲ್ಲಿ ಶೇ. 60.02ರಷ್ಟು, ಮ್ಯಾಡ್ರಿಡ್‌ನ‌ಲ್ಲಿ ಶೇ. 34.11ರಷ್ಟು, ಲಂಡನ್‌ನಲ್ಲಿ ಶೇ. 22.95ರಷ್ಟು ಹಾಗೂ ನ್ಯೂಯಾರ್ಕ್‌ನಲ್ಲಿ ಶೇ. 20.43ರಷ್ಟು ಸಾವುಗಳು ಸಂಭವಿಸಿವೆ.

ಭಾರತದ ಟಾಪ್‌ 5 ರಾಜ್ಯಗಳ ಸ್ಥಿತಿಗತಿ
ಮಹಾರಾಷ್ಟ್ರ
ಇಲ್ಲಿ ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿದ್ದು ಅವರ ಸಂಖ್ಯೆ 7 ಸಾವಿರ ಗಡಿ ದಾಟಿದೆ. 1,000ಕ್ಕಿಂತಲೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. 320ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುಂಬೈ, ದೇಶದ ವಾಣಿಜ್ಯ ನಗರವಾಗಿರುವುದರಿಂದ ಅಲ್ಲಿಗೆ ವಿದೇಶದ ನಂಟು ಜಾಸ್ತಿ. ದೊಡ್ಡ ಕೊಳೆಗೇರಿಯಾಗಿರುವ ಧಾರಾವಿ 2. 1 ಚ.ಕಿ.ಮೀ ವ್ಯಾಪ್ತಿಯಲ್ಲಿದೆ. ಇದು ಚಿಕ್ಕಪುಟ್ಟ ಉದ್ಯಮಗಳಿವೆ. ಒಬ್ಬರು ಸೀನಿದರೆ 10 ಸೋಂಕು ಹತ್ತು ಮನೆಗಳಿಗೆ ಹರಡುವಷ್ಟು ಅಂಟಿಕೊಂಡಿರುವ ಮನೆಗಳು ಇಲ್ಲಿವೆ. ಸೋಂಕು ವ್ಯಾಪಕವಾಗಿ ಹರಡಲು ಇವೆಲ್ಲವೂ ಕಾರಣ.

Advertisement

ಗುಜರಾತ್‌
ಸೋಂಕಿತರ ಸಂಖ್ಯೆ 3 ಸಾವಿರ ಗಡಿ ದಾಟಿದೆ. ಅಸುನೀಗಿದವರ ಸಂಖ್ಯೆ 130ನ್ನು ಮೀರಿದೆ. ಗುಣಮುಖರಾದವರ ಸಂಖ್ಯೆ 280 ದಾಟಿದೆ. ದೆಹಲಿಯಲ್ಲಿ ನಡೆದ ನಿಜಾಮುದ್ದೀನ್‌ ಸಮಾವೇಶದಿಂದ ಬಂದವರು ತಮ್ಮ ಮನೆಗಳಲ್ಲಿ ಅಡಗಿದ್ದರಿಂದಲೇ ಇಲ್ಲಿ ಪ್ರಕರಣಗಳು ಅಗಾಧ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಅಹಮದಾಬಾದ್‌ ಅತಿ ಹೆಚ್ಚು ಸೋಂಕು ಪೀಡಿತರನ್ನು ಹೊಂದಿದೆ.

ಹೊಸದಿಲ್ಲಿ
ರಾಷ್ಟ್ರ ರಾಜಧಾನಿಯಾಗಿದ್ದರಿಂದಲೇ ಅಲ್ಲಿನ ರಾಜ್ಯ ಸರಕಾರ ಬಹು ಮುಂಚೆಯೇ ಸೋಂಕು ಹರಡದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಮಾರ್ಚ್‌ ಮಧ್ಯಭಾಗದಲ್ಲಿ ನಿಜಾಮುದ್ದೀನ್‌ ಸಮಾವೇಶ ನಡೆದು ಅಲ್ಲಿದ್ದವರೆಲ್ಲ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಇದು ಇಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಲು ಕಾರಣ.

ರಾಜಸ್ಥಾನ
ರಾಜಸ್ಥಾನದಲ್ಲಿ ಈಗ ಸೋಂಕಿತರ ಸಂಖ್ಯೆ, 2,100 ದಾಟಿದ್ದರೆ, ಗುಣಮುಖರಾದವರ ಸಂಖ್ಯೆ 510 ದಾಟಿದೆ ಹಾಗೂ ಸಾವಿಗೀಡಾವರ ಸಂಖ್ಯೆ 35 ಮೀರಿದೆ. ನಿಜಾಮುದ್ದೀನ್‌ ಸಮಾವೇಶವೇ ಈ ರಾಜ್ಯಕ್ಕೂ ಮಾರಕವಾಗಿ ಪರಿಣಮಿಸಿದೆ. ನಿಜಾಮುದ್ದೀನ್‌ ಸಮಾವೇಶಕ್ಕೆ ರಾಜ್ಯದ ಧೋಲ್‌ಪುರ್‌, ಭಾರತ್‌ಪುರ್‌, ಚಾರು, ಟಾಂಕ್‌ ಜಿಲ್ಲೆಗಳಿಂದ ಸಾಕಷ್ಟು ಜನರು ಹೋಗಿ ಬಂದಿದ್ದರಿಂದ ಇಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಪತ್ತೆಯಾದವು. ಅದರಲ್ಲೂ ಟಾಂಕ್‌ ನಗರವು, ಕೋವಿಡ್ ಸೋಂಕಿನ ಹಾಟ್‌ಬೆಡ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next