Advertisement

ಇಬ್ಬರು ಮಾನಸಿಕ ಅಸ್ವಸ್ಥರ ದುರ್ಮರಣ

12:05 PM Apr 26, 2019 | pallavi |

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣ ಗಳಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರು ಮೃತಪಟ್ಟಿದ್ದಾರೆ. ಕಟ್ಟಡವೊಂದರ ಮೂರನೇ ಮಹಡಿಯಿಂದ ಬಿದ್ದು ಮಾನಸಿಕ ಅಸ್ವಸ್ಥ ಮೃತಪಟ್ಟ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯ ಸೀತಾ ಸರ್ಕಲ್ ಸಮೀಪ ಬುಧವಾರ ತಡರಾತ್ರಿ ನಡೆದಿದೆ. ಸುಮಾರು 30 ವರ್ಷದ ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಪೋಷಕರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

Advertisement

ಕಳೆದ ಕೆಲ ದಿನಗಳಿಂದ ಗಿರಿನಗರ ಸುತ್ತ-ಮುತ್ತ ಮಾನಸಿಕ ಅಸ್ವಸ್ಥನಂತೆ ಓಡಾಡುತ್ತಿದ್ದ ಯುವಕ, ನಡು ರಸ್ತೆಯಲ್ಲಿ ಅರೆ ಬೆತ್ತಲಾಗುವುದು, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಗಳ ಬಾಗಿಲು ಬಡಿದು ೕಡಿ ಹೋಗುವುದು, ಏಕಾಏಕಿ ಕೂಗಾಡುವುದು ಮಾಡುತ್ತಿದ್ದ. ಇತ್ತೀಚೆಗೆ ಗಿರಿನಗರ ಮುಖ್ಯರಸ್ತೆಯಲ್ಲಿ ಅಕ್ಕ-ಪಕ್ಕದ ಎರಡು ಮನೆಗಳ ಬಾಗಿಲು ಬಡಿದು ಓಡಿ ಹೋಗಿದ್ದ. ಇದರಿಂದ ಎರಡೂ ಮನೆಯವರು ಪರಸ್ಪರ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಪೊಲೀಸ್‌ ಠಾಣೆಯಲ್ಲಿ ರಾದ್ಧಾಂತ: ಬುಧವಾರ ರಾತ್ರಿ ಆ ಯುವಕ ಮನೆಗಳ ಬಾಗಿಲು ಬಡಿದು ಓಡಿ ಹೋಗುತ್ತಿದ್ದ. ಹೀಗಾಗಿ ಸ್ಥಳೀಯರು ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಆತ ಠಾಣೆಯಲ್ಲೇ ಕೂಗಾಡಿ, ಬಟ್ಟೆ ಬಿಚ್ಚಿ ವಿಚಿತ್ರವಾಗಿ ವರ್ತಿಸಿದ್ದ. ಹೀಗಾಗಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು.

ಈ ಮಧ್ಯೆ ತಡರಾತ್ರಿ 2.40ರ ಸುಮಾರಿಗೆ ಮತ್ತೆ ಮನೆಯೊಂದರ ಬಾಗಿಲು ಬಡಿದು ಪರಾರಿಯಾಗಿದ್ದಾನೆ. ಅನಂತರ ಸೀತಾ ಸರ್ಕಲ್ ಬಳಿ ಗೇಟ್ ತೆರೆದಿದ್ದ ಮನೆಯ ಮೂರನೇ ಮಹಡಿಗೆ ಹೋಗಿ ಅಲ್ಲಿಂದ್‌ ಶರ್ಟ್‌ ಬಿಚ್ಚಿ ಜಿಗಿದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಿರಿನಗರ ಪೊಲೀಸರು ಹೇಳಿದರು.

ಹೈಟೆನ್ಷನ್‌ ವೈರ್‌ ತಗುಲಿ ಸಾವು

Advertisement

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಲು ಹೋದ ಮಾನಸಿಕ ಅಸ್ವಸ್ಥ, ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಮೃತಪಟ್ಟ ಘಟನೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ(ಮೆಜೆಸ್ಟಿಕ್‌)ದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಮೂಲದ ಮೃತ ಯುವಕನಿಗೆ 25 ವರ್ಷ ವಯಸ್ಸಾಗಿದ್ದು, ಹೆಸರು, ವಿಳಾಸ ಪತ್ತೆಯಾಗಿಲ್ಲ. ಏ.19ರಂದು ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದಿದ್ದ ಯುವಕ, ಮಧ್ಯಾಹ್ನ 12 ಗಂಟೆ ಸುಮಾರಿಗೆ, ಅಲ್ಲಿ ನಿಂತಿದ್ದ ಬಸವ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಮೇಲೆ ಏರಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬೆದರಿಸಿದ್ದಾನೆ. ಆಗ ಸ್ಥಳದಲ್ಲಿದ್ದವರು ಎಷ್ಟೇ ಪ್ರಯತ್ನಿಸಿದರೂ ಆತನನ್ನು ಕೆಳಗಿಳಿಸಲು ಸಾಧ್ಯವಾಗಿಲ್ಲ. ಈ ವೇಳೆ ಯುವಕನ ಕೈಗೆ ಹೈಟೆನ್ಷನ್‌ ತಂತಿ ತಗುಲಿದ್ದು, ಬೆಂಕಿ ಹೊತ್ತಿಕೊಂಡು ಕೆಳಗೆ ಬಿದ್ದಿದ್ದಾನೆ. ಕೂಡಲೇ ರೈಲು ನಿಲ್ದಾಣದ ಅಧಿಕಾರಿಗಳು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫ‌ಲಕಾರಿಯಾಗದೆ ಏ.22ರಂದು ಮೃತಪಟ್ಟಿದ್ದಾನೆ. ಈ ಸಂಬಂಧ ಸಿಟಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನಿಗೆ ಬೆಂಕಿ ಹೊತ್ತಿಕೊಂಡ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next