Advertisement

ಅವಳಿ ಮಕ್ಕಳೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮಹಿಳೆ ಸಾವು

12:30 AM Feb 05, 2019 | |

ಬೆಳ್ತಂಗಡಿ: ಉಜಿರೆ ಬೆಳಾಲು ರಸ್ತೆಯ ಓಡಲದ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾಯಿ ಸಾವಿಗೀಡಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ಸೋಮವಾರ ನಡೆದಿದೆ.

Advertisement

ಶಿವಮೊಗ್ಗ ಹೊಸನಗರ ಮೂಲದ ಮಹಿಳೆ ಬೇಬಿ (23) ಮೃತಪಟ್ಟವರು. ಅವರ ಅವಳಿ ಮಕ್ಕಳಾದ ಎರಡು ವರ್ಷ ಎಂಟು ತಿಂಗಳ ಪ್ರಾಯದ ಅಕ್ಷರ ಹಾಗೂ ಅಪ್ಸರಾ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಬೇಬಿ ಅವರ ಗಂಡ ಪ್ರವೀಣ್‌ ಉಜಿರೆಯ ಸೆಲೂನೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜೆ ಮನೆಗೆ ಬಂದಾಗ ಪತ್ನಿ ಹಾಗೂ ಮಕ್ಕಳು ನೇಣಿನಲ್ಲಿ ನೇತಾಡುತ್ತಿದ್ದರು. ತತ್‌ಕ್ಷಣ ಅವರು ಪತ್ನಿ ಹಾಗೂ ಮಕ್ಕಳನ್ನು ನೇಣಿನಿಂದ ಕೆಳಗಿಳಿಸಿದ್ದು, ಅದಾಗಲೇ ಬೇಬಿ ಕೊನೆಯುಸಿರೆಳೆದಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಗಂಡ ಈ ಹಿಂದೆ ಹೊಸನಗರದಲ್ಲಿ ಸೆಲೂನ್‌ ಹೊಂದಿದ್ದು, 2 ವರ್ಷಗಳ ಹಿಂದೆಯಷ್ಟೇ ಉಜಿರೆಗೆ ಬಂದಿದ್ದರು. ಮಹಿಳೆ ಮೊದಲು ಮಕ್ಕಳನ್ನು ನೇಣಿಗೇರಿಸಿ ಬಳಿಕ ತಾನು ಬಿಗಿದುಕೊಂಡಿರುವ ಸಾಧ್ಯತೆಯಿದ್ದು, ಯಾವುದನ್ನೂ ಸ್ಪಷ್ಟವಾಗಿ ಹೇಳುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಸಹೋದರನ ದೂರಿನಂತೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

4 ವರ್ಷ ಹಿಂದೆ ಮದುವೆ
ದಂಪತಿಗೆ 4 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಹೀಗಾಗಿ ಪ್ರಕರಣವನ್ನು ತಹಶೀಲ್ದಾರ್‌ ಅವರು ತನಿಖೆ ನಡೆಸಬೇಕಾಗುತ್ತದೆ. ಇಂಥ ಪ್ರಕರಣದಲ್ಲಿ ಮದುವೆಯಾದ 7 ವರ್ಷಗಳ ಬಳಿಕ ಮಾತ್ರ ನಮಗೆ ತನಿಖೆಗೆ ಅವಕಾಶವಿದೆ ಎಂದು ಎಸ್‌ಐ ರವಿ ಬಿ.ಎಸ್‌. ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next