Advertisement

ಶಾಂತಿ ಕಾಪಾಡುವಂತೆ ಮೃತನ  ತಂದೆ ಮನವಿ

07:00 AM Mar 31, 2018 | |

ಅಸಾನ್‌ಸೋಲ್‌: ಪಶ್ಚಿಮ ಬಂಗಾಲದಲ್ಲಿ ರಾಮನವಮಿ ವೇಳೆ ನಡೆದ ಗಲಭೆಯಲ್ಲಿ ಪುತ್ರನನ್ನು ಕಳೆದುಕೊಂಡಿರುವ ಅಸಾನ್‌ಸೋಲ್‌ನ ಇಮಾಮ್‌ ಇಮªತುಲ್ಲಾ ರಶೀದ್‌ ಜನರು ಶಾಂತರಾಗಿರುವಂತೆ ಬೇಡಿಕೊಂಡಿದ್ದಾರೆ. ಈ ಹಿಂಸೆಯನ್ನು ಇಲ್ಲಿಗೇ ನಿಲ್ಲಿಸಿ. ನನ್ನ ಮಗನನ್ನು ನಾನು ಕಳೆದುಕೊಂಡರೂ, ಪೊಲೀಸರಿಗೆ ದೂರು ನೀಡಿಲ್ಲ. ಅದನ್ನು ಒಂದು ದೊಡ್ಡ ವಿಷಯವನ್ನಾಗಿ ಮಾಡಬೇಡಿ. ನನ್ನ ಮೇಲೆ ನಿಮಗೆ ಪ್ರೀತಿಯಿದ್ದರೆ ಶಾಂತಿಯಿಂದಿರಿ ಎಂದು ಮನವಿ ಮಾಡಿದ್ದಾರೆ.

Advertisement

ಗಲಭೆಯಲ್ಲಿ 16 ವರ್ಷದ ಪುತ್ರ ಹಫೀಜ್‌ ಸಬತುಲ್ಲಾ ಮಾರಣಾಂತಿಕವಾಗಿ ಗಾಯಗೊಂಡಿದ್ದ. ಬುಧವಾರ  ಸಾವನ್ನ ಪ್ಪಿದ್ದ. ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ. ಹಿಂಸಾಚಾರ ವರದಿಗೆ ಸಮಿತಿ: ರಾಣಿಗಂಜ್‌ನಲ್ಲಿ ರಾಮನವಮಿ ಆಚರಣೆ ಹಿಂಸಾಚಾರಕ್ಕೆ ತಿರುಗಿದ ಘಟನೆ ಕುರಿತು ವರದಿ ನೀಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮಂಗಳವಾರ ನಾಲ್ವರು ಸದಸ್ಯರ ಸಮಿತಿ ರಚಿಸಿದ್ದಾರೆ. ಇದರ ಸದಸ್ಯರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಮಿತ್‌ ಶಾಗೆ  ವರದಿ ನೀಡಲಿದ್ದಾರೆ. ಈ ಸಮಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಮ್‌ ಮಾಥುರ್‌, ವಕ್ತಾರ ಶಹನವಾಜ್‌ ಹುಸೇನ್‌, ಸಂಸದರಾದ ರೂಪಾ ಗಂಗೂಲಿ ಮತ್ತು ವಿ.ಡಿ. ರಾಮ್‌ ಇದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತ್‌ ಶಾ, ಇಂಥ ಘಟನೆಗಳು ಖಂಡನೀಯ. ಇದರಿಂದ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next