ಬೆಂಗಳೂರು: ಆರು ದಿನಗಳ ಹಿಂದಷ್ಟೇ ನಾಪತ್ತೆಯಾ ಗಿದ್ದ ಮಡಿವಾಳ ಠಾಣೆಯ ಕಾನ್‌ಸ್ಟೇಬಲ್ ಶಿವರಾಜ್ (30) ಅವರ ಮೃತದೇಹ ಜ್ಞಾನಭಾರತಿ ಕ್ಯಾಂಪಸ್‌ನ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ರಾಯಚೂರಿನ ದೇವ ದುರ್ಗ ಮೂಲದ ಶಿವ ರಾಜ್, 2020ನೇ ಬ್ಯಾಚ್‌ನ ಪೊಲೀಸ್ ಕಾನ್‌ಸ್ಟೆàಬಲ್. ಕಳೆದ 4 ವರ್ಷಗಳಿಂದ ಮಡಿ ವಾಳ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಬ್ರ ಹ್ಮಣ್ಯಪುರ ಠಾಣೆ ವ್ಯಾಪ್ತಿಯ ಮನೆಯಲ್ಲಿ ವಾಸವಾಗಿ ದ್ದರು. ಈ ಮಧ್ಯೆ ಜೂನ್ 25ರಂದು ಕರ್ತವ್ಯಕ್ಕೆ ಹೋಗುವುದಾಗಿ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಯಿಂದ ತೆರಳಿದ ಶಿವರಾಜ್ ಒಂದೆರಡು ದಿನಗಳಾದರೂ ಮನೆಗೆ ವಾಪಸ್ ಬಂದಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಕೂಡ ಆಗಿತ್ತು. ಹೀಗಾಗಿ ಅವರ ತಂದೆ ಬಾಲಪ್ಪ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಶಿವರಾಜ್‌ಗಾಗಿ ಶೋಧ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಸಿಸಿ ಕ್ಯಾಮೆರಾದಲ್ಲಿ ಶಿವರಾಜ್ ಪತ್ತೆ: ನಂತರ ನಗರದ ನಾನಾ ಪೊಲೀಸ್ ಠಾಣೆಗಳಿಗೆ ಶಿವರಾಜ್ ಬಗ್ಗೆ ಮಾಹಿತಿ ನೀಡಿ, ಶೋಧ ಕಾರ್ಯಕ್ಕೆ ಸಹಾಯ ಕೋರಿ ದ್ದರು. ಮೂರು ದಿನಗಳ ಹಿಂದೆ ಜಯನಗರದಲ್ಲಿ ಶಿವರಾಜ್ ಬೈಕ್‌ನಲ್ಲಿ ಚಲಿಸುತ್ತಿರುವುದು ಪತ್ತೆಯಾಗಿತ್ತು. ಬಳಿಕ ಆ ಬೈಕ್‌ನಲ್ಲಿ ಎಲ್ಲೆಲ್ಲಿ ಹೋಗಲಾಗಿದೆ ಎಂಬುದುನ್ನು ಪರಿಶೀಲಿಸುತ್ತಿರುವಾಗ ಸೋಮವಾರ ಬೆಳಗ್ಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ವಾಹನಗಳ ಪಾರ್ಕಿಂಗ್‌ನಲ್ಲಿ ಶಿವರಾಜ್ ಬೈಕ್ ಪತ್ತೆಯಾಗಿತ್ತು. ಬಳಿಕ ಪೊಲೀಸರು ಮೃತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲಿಸಿದಾಗ, ಪತ್ತೆಯಾದ ಬೈಕ್ ಶಿವರಾಜ್‌ದು ಎಂಬುದವನ್ನು ಖಾತ್ರಿ ಪಡಿಸಿದ್ದಾರೆ. ನಂತರ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಜ್ಞಾನಭಾರತಿ ಕ್ಯಾಂಪಸ್‌ನ ಒಳಗಡೆ ಹೋಗಿರುವುದು ಗೊತ್ತಾಗಿ, ಎಲ್ಲೆಡೆ ಶೋಧಿಸುವಾಗ, ಕ್ಯಾಂಪಸ್‌ನ ಮಧ್ಯ ಭಾಗದಲ್ಲಿದ್ದ ಪಾಳು ಬಿದ್ದ ಮನೆ ಪಕ್ಕದಲ್ಲಿದ್ದ ಬಾವಿಯಲ್ಲಿ ಶಿವರಾಜ್‌ನ ಅರೆ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾವಿ ಮೇಲ್ಭಾಗದಲ್ಲಿ ಮೃತನ ಚಪ್ಪಲಿ ಹಾಗೂ ಕೆಲವೊಂದು ಕುರುಹುಗಳು ಪತ್ತೆಯಾಗಿದ್ದು, ಆತನೇ ಶಿವರಾಜ್ ಎಂದು ಕುಟುಂಬ ಸದಸ್ಯರು ಖಾತ್ರಿ ಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸೋದರನ ಸೊಸೆ, ಕುಟುಂಬದಿಂದ ಕಿರುಕುಳಕೆ ಆತ್ಕ ಹತೆ¾ Â? ಮೂರು ತಿಂಗಳ ಹಿಂದಷ್ಟೇ ಶಿವರಾಜ್‌ಗೆ ಮದುವೆಯಾಗಿದ್ದು, ಕುಟುಂಬ ಜತೆ ಚೆನ್ನಾಗಿದ್ದರು. ಈ ಮಧ್ಯೆ ಕೆಲ ತಿಂಗಳ ಹಿಂದೆ ಶಿವರಾಜ್ ಸಹೋದರನ ಪುತ್ರನ ಪತ್ನಿ ವಾಣಿ, ವರದಕ್ಷಿಣಿ ಹಾಗೂ ದೌರ್ಜನ್ಯದ ಆರೋಪದಡಿ ತನ್ನ ಪತಿ, ಶಿವರಾಜ್ ಸೇರಿ 16 ಮಂದಿಯ ವಿರುದ್ಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜತೆಗೆ ಇಡೀ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಎಲ್ಲಾ ವಿಚಾರಗಳಿಗೆ ಬೇಸತ್ತ ಶಿವರಾಜ್ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಅಲ್ಲದೆ, ಶಿವರಾಜ್ ತಂದೆ ಬಾಲಪ್ಪ, ತಮ್ಮ ಹಿರಿಯ ಪುತ್ರನ ಸೊಸೆ ವಾಣಿ ಮತ್ತು ಆಕೆಯ ಕುಟಂಬ ಸದಸ್ಯರ ಕಿರುಕುಳದಿಂದಲೇ ಪುತ್ರ ಶಿವರಾಜ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.