Advertisement

ಹುಟ್ಟೂರಿಗೆ ಬಂದ ಫ‌ುಟ್ಬಾಲಿಗ ಸಲಾ ಮೃತದೇಹ

12:30 AM Feb 16, 2019 | |

ಬ್ಯೂನಸ್‌ ಐರೆಸ್‌ (ಆರ್ಜೆಂಟೀನಾ): ವಿಮಾನ ದುರಂತದಲ್ಲಿ ಮಡಿದ ಆರ್ಜೆಂಟೀನಾದ ಫ‌ುಟ್ಬಾಲಿಗ ಎಮಿಲಿಯಾನೊ ಸಲಾ ಅವರ ಮೃತದೇಹವನ್ನು ಶುಕ್ರವಾರ ಸ್ವದೇಶಕ್ಕೆ ತರಲಾಯಿತು. ಶುಕ್ರವಾರ ಬೆಳಗ್ಗೆ ಬ್ಯೂನಸ್‌ ಐರೆಸ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾದ ಈ ಶವಪೆಟ್ಟಿಗೆಯನ್ನು ಬಳಿಕ ಸಲಾ ಅವರ ಹುಟ್ಟೂರಾದ ಪ್ರೊಗ್ರೆಸೊಗೆ ಸಾಗಿಸಲಾಯಿತು. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

Advertisement

“ಇದು ಪ್ರೊಗ್ರೆಸೊ ಪಾಲಿನ ದುಃಖದ ದಿನ. ನಾವು ಇದನ್ನು ಕಲ್ಪಿಸಿಯೂ ಇರಲಿಲ್ಲ. ಎಲ್ಲರೂ ಭಾರೀ ಆಘಾತಕ್ಕೆ ಒಳಗಾಗಿದ್ದಾರೆ’ ಎಂದು ಸ್ಯಾನ್‌ ಮಾರ್ಟಿನ್‌ ಡಿ ಪ್ರೊಗ್ರೆಸೊ ಕ್ಲಬ್‌ನ ಅಧ್ಯಕ್ಷ ಡೇನಿಯಲ್‌ ರಿಬೆರೊ ಹೇಳಿದರು. ಸಲಾ ಈ ಕ್ಲಬ್‌ ತಂಡವನ್ನು 10 ವರ್ಷಗಳ ಕಾಲ ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next