Advertisement

ಬಲಿಯೇಂದ್ರ ಭೂಮಿಗೆ ಬರುವ ದಿನ

10:42 PM Oct 25, 2019 | mahesh |

ಅಂದು ದೀಪಾವಳಿಯ ದಿನ. ತಿಮ್ಮಕ್ಕಜ್ಜಿಯು ತನ್ನ ಮೊಮ್ಮಕ್ಕಳಾದ ರಾಮು, ಸೋಮು, ಗೀತಾ, ಭವ್ಯಾ ಇವರನ್ನು ಕುಳ್ಳಿರಿಸಿಕೊಂಡು ಕಥೆ ಹೇಳಲು ಪ್ರಾರಂಭಿಸಿದರು.

Advertisement

ಬಲಿಯೇಂದ್ರನಲ್ಲಿಗೆ ನಾರಾಯಣ ದೇವರು ಬಂದರು. ಮೂರು ಹೆಜ್ಜೆ ಜಾಗ ಕೇಳಿದರು. ಬಲಿಯೇಂದ್ರನು “ಆಯ್ತು’ ಎಂದು ಒಪ್ಪಿಕೊಂಡನು. ನಾರಾಯಣ ದೇವರು “ಇಷ್ಟು ಜಾಗ ಎಲ್ಲುಂಟು?’ ಎಂದು ಕೇಳಿದರು. “ನನಗೆ ಧಾರಾಳ ಭೂಮಿ ಉಂಟು. ಮೂರು ಹೆಜ್ಜೆ ಜಾಗ ಕೊಡುವುದಕ್ಕೆ ನನಗೇನೂ ತೊಂದರೆ ಇಲ್ಲ’ ಎಂದು ಬಲಿಯೇಂದ್ರನು ಹೇಳಿದನು. ನಾರಾಯಣ ದೇವರು ಅವನ ಇಡೀ ಭೂಮಿಗೆ ಒಂದು ಹೆಜ್ಜೆ ಇಟ್ಟರು. ಮತ್ತೂಂದು ಹೆಜ್ಜೆಯನ್ನು ಅವನ ಮನೆಯ

ಹಿತ್ತಿಲಲ್ಲಿ ಇಟ್ಟರು. “ಮೂರನೇ ಹೆಜ್ಜೆ ಎಲ್ಲಿ ಇಡುವುದು?’ ಎಂದು ಕೇಳಿದರು. “ನನ್ನ ತಲೆ ಮೇಲೆ ಇಡಿ’ ಅಂತ ಬಲಿಯೇಂದ್ರನು ಹೇಳಿದ. ಅದರಂತೆ ನಾರಾಯಣ ದೇವರು ಮೂರನೇ ಹೆಜ್ಜೆಯನ್ನು ಬಲಿಯೇಂದ್ರನ ತಲೆಗೆ ಇಟ್ಟು ಅವನನ್ನು ಭೂಮಿ ಒಳಗೆ ತಳ್ಳಿದರು. ಆಗ ಬಲಿಯೇಂದ್ರನು, “ನಾನು ಯಾವಾಗ ಬರಬೇಕು?’ಎಂದು ಕೇಳಿದನು. “ನೀನು ವರ್ಷಕ್ಕೊಮ್ಮೆ ಅಮಾವಾಸ್ಯೆ ಪಾಡ್ಯದಂದು ಭೂಮಿಗೆ ಬರಬೇಕು’ ಎಂದು ದೇವರು ಉತ್ತರಿಸಿದರು.

ಆ ಪದ್ಧತಿಯಂತೆ ಬಲಿಯೇಂದ್ರನು ವರ್ಷಕ್ಕೊಮ್ಮೆ ಅಮಾವಾಸ್ಯೆ ಪಾಡ್ಯದಂದು ಭೂಮಿಗೆ ಬರುತ್ತಾನೆ. ಆ ದಿನವನ್ನೇ ನಾವು ಬಲಿಯೇಂದ್ರನನ್ನು ಪೂಜಿಸಿ ದೀಪಾವಳಿ ಆಚರಿಸುತ್ತೇವೆ. ಹಿರಿಯರು ಬಲಿಯೇಂದ್ರ ಮರವನ್ನು ಅಂಗಳದಲ್ಲಿ ನೆಟ್ಟು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಮಕ್ಕಳು ಮನೆಯಂಗಳದ ಎದುರು ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಜ್ಜಿಯು ಕಥೆ ಹೇಳಿ ಮುಗಿಸಿದರು.

ಕೀರ್ತಿ ಕೆ.ಬಿ., 7ನೇ ತರಗತಿ,
ಸ.ಉ.ಹಿ.ಪ್ರಾ.ಶಾಲೆ ಮುರುಳ್ಯ, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next