Advertisement
ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ವಿವಿಧ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 30 ವರ್ಷಕ್ಕೂ ಮಿಕ್ಕಿ “ಉದಯವಾಣಿ’ ಪತ್ರಿಕೆಯ ವಿತರಕರಾಗಿ, ಸ್ಥಳೀಯ ಶಾಲೆ, ಮೊದಲಾದ ಸಂಘ ಸಂಸ್ಥೆಗಳಿಗೆ ದಾನಿಯಾಗಿದ್ದರು.
ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇದ್ದ ಅವರು ಹಲವಾರು ಕಥೆ, ಕವನಗಳನ್ನು ಬರೆಯುತ್ತಿದ್ದರು. ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಅವರ ಜೋಮ್ಲ ಕಾಶಿ ಎನ್ನುವ ಲೇಖನವು ಬಹಳ ಪ್ರಸಿದ್ಧಿ ಪಡೆದಿತ್ತು. ಇದು ತರಂಗದ ಅಂದಿನ ಮುಖಪುಟದ ಲೇಖನವಾಗಿ ಹೊರಬಂದಿತ್ತು.