Advertisement

ಶೀಘ್ರವೇ ಗ್ರಾಹಕರ ಕೈಸೇರಲಿದೆ ಜಿಯೊ ಫೋನ್‌

11:29 AM Sep 26, 2017 | Team Udayavani |

ಬೆಂಗಳೂರು: ದೇಶದ ನಾಗರಿಕರಿಗೆ ಉಚಿತ (1500 ರೂ. ಠೇವಣಿ) “ಜಿಯೊ ಫೋನ್‌’ ನೀಡುವುದಾಗಿ ಹೇಳಿದ್ದ ರಿಲಯನ್ಸ್‌ ಸಂಸ್ಥೆ, ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಒಂದೆರಡು ದಿನದಲ್ಲೇ ಫೋನ್‌ ನೀಡುವುದಾಗಿ ಸೋಮವಾರ ತಿಳಿಸಿದೆ.

Advertisement

“ಕರ್ನಾಟಕ ಸೇರಿದಂತೆ ದೇಶಾದ್ಯಂತ ಸುಮಾರು 60 ಲಕ್ಷ ಮಂದಿ ಜಿಯೊ ಫೋನ್‌ ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಮಾರುಕಟ್ಟೆಗೆ ಬಿಡುಗಡೆಯಾಗಿರುವ ಫೋನನ್ನು ರಾಜ್ಯದ ನರಗುಂದ ಮತ್ತು ಗದಗ ಜಿಲ್ಲೆಗಳಲ್ಲೀ ಈಗಾಗಲೇ ಗ್ರಾಹಕರಿಗೆ ವಿತರಿಸಲಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು ಮೊದಲಾದ ನಗರದಲ್ಲಿ ಒಂದೆರೆಡು ದಿನದಲ್ಲಿ ವಿತರಣೆ ಆರಂಭವಾಗಲಿದೆ,’ ಎಂದು ಸೆಂಸ್ಥೆ ಹೇಳಿದೆ.

ನೂತನ ಜಿಯೋ ಫೀಚರ್‌ ಫೋನ್‌, 2.4 ಇಂಚು ಡಿಸ್‌ಪ್ಲೇ ಹೊಂದಿದ್ದು, 15 ದಿನಗಳ ಬ್ಯಾಕ್‌ಅಪ್‌ ನೀಡುವಷ್ಟು ಸಮರ್ಥವಾಗಿರುವ ಬ್ಯಾಟರಿ ಇದರಲ್ಲಿರಲಿದೆ. ಇದರೊಂದಿಗೆ ಕನ್ನಡ, ಇಂಗ್ಲಿಷ್‌, ಹಿಂದಿ, ತೆಲಗು, ತಮಿಳು ಸೇರಿ ಒಟ್ಟು 22 ಭಾಷೆಗಳಿಗೆ ಫೋನ್‌ ಬೆಂಬಲ ನೀಡಲಿದೆ. 4 ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಸಾಮರ್ಥ್ಯವಿದ್ದು, ಇದನ್ನು 128 ಜಿ.ಬಿವರೆಗೆ ವಿಸ್ತರಿಸಬಹುದಾಗಿದೆ.

ಇದರೊಂದಿಗೆ 2 ಎಂಪಿ ರೇರ್‌ ಕ್ಯಾಮೆರಾ ಹಾಗೂ 0.3 ಎಂಪಿ ಫ್ರಂಟ್‌ ಕ್ಯಾಮೆರ ಒಳಗೊಂಡಿರುವ ಜಿಯೋ ಫೋನ್‌ನಲ್ಲಿ, ವೈ-ಫೈ, ಜಿಪಿಎಸ್‌ ಹಾಗೂ ಎನ್‌ಎಫ್ಸಿ ಬೆಂಬಲವಿದೆ. ರಾಜ್ಯದ 300ಕ್ಕೂ ಅಧಿಕ ಜಿಯೊ ಪಾಯಿಂಟ್‌ ಮತ್ತು ಡೀಲರ್‌ಗಳ ಮೂಲಕ ಫೋನ್‌ ವಿತರಣೇ ನಡೆಯಲಿದ್ದು, ದೀಪಾವಳಿ ಹಬ್ಬದೊಳಗೆ ಇನ್ನೊಮ್ಮೆ ಮುಂಗಡ ಬುಕ್ಕಿಂಗ್‌ ಆರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next