Advertisement

“ಈಗಿನ ಮಾಧ್ಯಮ ಲಗಾಮು ಕಳೆದುಕೊಂಡಂತಾಗಿವೆ’

08:40 AM Nov 25, 2017 | |

ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ: ಸಾಹಿತ್ಯ ಸಮ್ಮೇಳನದ ಮೊದಲ ದಿನ ಬರೀ ಮಾತು, ಮಾತು, ಮಾತು. ಬೆಳಗ್ಗೆಯಿಂದ ಜನ ಭಾಷಣವನ್ನು ಕೇಳಿ ಕೇಳಿ ರೋಸಿಹೋಗಿದ್ದಿರಬಹುದು ಎಂಬ ಅನುಮಾನಗಳಿಗೆ ಕೆಲವು ಗೋಷ್ಠಿಗಳು ಪೂರಕವಾಗಿದ್ದವು. ಕಾರಣ ಆ ಗೋಷ್ಠಿಗಳಿಗೆ ಜನರೇ ಇರಲಿಲ್ಲ. ಇದರ ನಡುವೆ ರಾತ್ರಿ 7 ಗಂಟೆಗೆ ತಡವಾಗಿ “ಮಾಧ್ಯಮ- ಮುಂದಿರುವ ಸವಾಲುಗಳು’ ಎಂಬ ಗೋಷ್ಠಿ ಆರಂಭವಾದರೂ ಜನರು ಮಾತ್ರ ತುಂಬಿ ತುಳುಕುತ್ತಿದ್ದರು. ಬಹುತೇಕ ಉದ್ಘಾಟನಾ ಕಾರ್ಯಕ್ರಮದಲ್ಲಿದ್ದಷ್ಟೇ ಜನ
ಇದ್ದರು. ಕಾರಣ ಖಾಸಗಿ ಸುದ್ದಿ ವಾಹಿನಿಯ ಸಂಪಾದಕ ಎಚ್‌..ಆರ್‌.ರಂಗನಾಥ್‌. ಅವರು ವೇದಿಕೆ ಯಲ್ಲಿರುವರೆಗೆ ಚಪ್ಪಾಳೆ, ಸೀಟಿಗಳು ಕೇಳಿ ಬರುತ್ತಲೇ ಇದ್ದವು. ಮಾತನ್ನುಮುಂದುವರಿಸಿ ಎಂಬ ಒತ್ತಾಯಗಳೂ ಕೇಳಿ ಬಂದವು. ದಿಕ್ಸೂಚಿ ಭಾಷಣ ಮಾಡಿದ ರಂಗನಾಥ್‌ ಅವರು, ಮಾಧ್ಯಮದ ಮುಂದಿರುವ ಸವಾಲುಗಳನ್ನು ತೆರೆಯುತ್ತಾ ಹೋದರು. ಹಾಗೆಯೇ ಮಾಧ್ಯಮಗಳು ಸೃಷ್ಟಿಸುತ್ತಿರುವ ಸಮಸ್ಯೆಗಳನ್ನೂ ಬಿಚ್ಚಿಟ್ಟರು.

Advertisement

ಕನ್ನಡ ಕಲಿಯದವರಿಗೆ ಇಲ್ಲಿರುವ ಅಧಿಕಾರವಿಲ್ಲ: ಯಾರು ಏನೇ ಅಂದುಕೊಳ್ಳಲಿ ಈ ರಾಜ್ಯದ ಅನ್ನ, ನೀರು ಸೇವಿಸಿದ ಅನ್ಯರಾಜ್ಯದವರು ಇಲ್ಲಿನ ಭಾಷೆ ಕಲಿಯುವುದಿಲ್ಲ ಅಂದರೆ ಅವರು ಕರ್ನಾಟಕದಲ್ಲಿರಲು ಅರ್ಹರಲ್ಲ. ಒಂದು ವೇಳೆ ನಾನು ಭಾರತೀಯತೆ ವಿರೋಧಿ ಎಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರಂಗನಾಥ್‌ ಕಟುವಾಗಿ ನುಡಿದರು. ಕನ್ನಡ ಎಲ್ಲಿಯವರೆಗೆ ಮತಗಳಾಗಿ ಪರಿವರ್ತನೆ ಯಾಗುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಬದಲಾಗುವುದಿಲ್ಲ ಎಂದು ಕನ್ನಡ ಉಳಿಸಿ
ಕೊಳ್ಳುವ ಪರಿಹಾರವನ್ನೂ ಮುಂದಿಟ್ಟರು. 

ಪ್ರಾದೇಶಿಕ ಭಾಷೆಗಳಿಗೆ ಧಕ್ಕೆ: ತ್ರಿಭಾಷಾ ಸೂತ್ರ ಈಗ ಜಾರಿಯಲ್ಲಿದೆ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳು ಈಗ ಕನ್ನಡಕ್ಕೆ ಮಾತ್ರ ಅಪಾಯವಾಗಿ ಪರಿಣಮಿಸಿದ್ದರೂ ಮುಂದಿನ ದಿನಗಳಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳೂ ಅಪಾಯಕ್ಕೆ ಸಿಲುಕುವುದು ಖಚಿತ. ತ್ರಿಭಾಷಾ ಸೂತ್ರ ಯಾಕೆ ಬೇಕು ಎಂದು ಅವರು ಆಕ್ಷೇಪಿಸಿದರು. ಇತ್ತೀಚೆಗೆ ಕನ್ನಡ ಸರಿಯಾಗಿ ಬರೆಯಲು ಬರುವ ಹುಡುಗರೇ ಕಡಿಮೆಯಾಗಿ¨ªಾರೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಮುಂದಿನ 12 ವರ್ಷಗಳಲ್ಲಿ ಕನ್ನಡ ಉತ್ತಮವಾಗಿ ಬರೆಯುವ ವ್ಯಕ್ತಿಗಳೇ ಸಿಕ್ಕುವುದು ಅನುಮಾನ ಎಂಬ ಆತಂಕ ಅವರ ಮಾತಿನಲ್ಲಿ ಸುಳಿಯಿತು. ಜನ ಕನ್ನಡದಿಂದ ದೂರವಾಗುತ್ತಿರುವುದು ನೇರ ಮಾಧ್ಯಮಗಳಿಗೆ ಅಪಾಯಕಾರಿಯಾಗಿದೆ ಎನ್ನುವುದು ಅವರ ವಿಶ್ಲೇಷಣೆ.

ಮಾಧ್ಯಮಕ್ಕೆ ಲಗಾಮಿಲ್ಲ: ಈಗಿನ ಮಾಧ್ಯಮ ಲಗಾಮು ಕಳೆದುಕೊಂಡಂತಾಗಿವೆ. ನಮ್ಮಲ್ಲಿ ರುವ ಅಹಂ ನಮ್ಮನ್ನು ಪ್ರಶ್ನಾತೀತರನ್ನಾಗಿ ಮಾಡಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬ ಅನು ಮಾನವೂ ಇದೆ. ಪತ್ರಕರ್ತ ವೃತ್ತಿಲಕ್ಷಣದೊಂದಿಗೆ, ಜೀವನ ಲಕ್ಷಣವನ್ನೂ ಹೊಂದಿರಬೇಕು. ಪತ್ರಕರ್ತರಲ್ಲೂ ದುರಾಸೆಯಿದೆ ಜೊತೆಗೆ ಅದಕ್ಕೆ ಪೂರಕ ವಾತಾವರಣವಿದೆ. ಇದು ಇಂದಿನ ದುರಂತ ಎಂದು ಮಾಧ್ಯಮದ ಸಂಕಟಗಳನ್ನು ತೋಡಿಕೊಂಡರು. 

2ನೇ ಗೋಷ್ಠಿಗೇ ನಿರಾಸಕ್ತಿ!
ಮೈಸೂರು: ಸಂಘಟಕರಲ್ಲಿನ ಸಮಯ ಪ್ರಜ್ಞೆಯ ಕೊರತೆಯಿಂದಾಗಿ ಸಾಹಿತ್ಯ ಸಮ್ಮೇಳನದಲ್ಲಿನ ಮೊದಲ ದಿನದ ಎರಡನೇ ಗೋಷ್ಠಿಯೇ ಜನರಿಲ್ಲದೆ ನೀರಸವಾಗಿತ್ತು. ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 3.30ರಿಂದ 5ಗಂಟೆವರೆಗೆ ನಡೆಯಬೇಕಿದ್ದ ದಲಿತ ಲೋಕ ದೃಷ್ಟಿ ವಿಚಾರಗೋಷ್ಠಿ ಆರಂಭವಾಗಿದ್ದೇ ಸಂಜೆ 6 ಗಂಟೆ ನಂತರ. ಹೀಗಾಗಿ ಉದ್ಘಾಟನಾ ಸಮಾರಂಭದ ನಂತರ ಬಹುಪಾಲು ಜನರು ಖಾಲಿಯಾಗಿದ್ದ ಸಭಾಂಗಣದಲ್ಲಿ ಇನ್ನಷ್ಟು ಜನರು ಖಾಲಿಯಾಗಿದ್ದರು. 

Advertisement

“ದಲಿತ ಚಳವಳಿ:
ಸಮಕಾಲೀನ ಸವಾಲುಗಳು’ ವಿಚಾರ ಕುರಿತು ಡಾ.ಎಚ್‌.ದಂಡಪ್ಪ, “ಹಿಂಸೆ ಮತ್ತು ಅಪಮಾನದ ನಿರ್ವಹಣೆ’ ಕುರಿತು ಆರ್‌.ಬಿ. ಅಗವಾನೆ, ಅಸ್ಪಶ್ಯತೆಯ ಹೊಸ ರೂಪಗಳು ಕುರಿತ ವಿಚಾರವನ್ನು ಮಂಡಿಸಿದ ಡಾ.ಶಿವರುದ್ರ ಕಲ್ಲೋಳಿಕರ ಅವರು ಸಮಯದ
ಅಭಾವದಿಂದಾಗಿ ಹೇಳಲೇ ಬೇಕಾದ್ದನ್ನು ಹೇಳಲಾಗದೆ ವೇಗವಾಗಿ ತಮ್ಮ ವಿಚಾರವನ್ನು ಮಂಡಿಸುವ ಕೆಲಸ ಮಾಡಿದರು. 

ಭಾಗವಹಿಸಿದ್ದವರ ಅಂದಾಜು ಸಂಖ್ಯೆ 5,000

Advertisement

Udayavani is now on Telegram. Click here to join our channel and stay updated with the latest news.

Next