Advertisement

“ತುಳುನಾಡಿನ ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸುತ್ತದೆ’

08:08 PM Apr 14, 2019 | Team Udayavani |

ಬಜಪೆ: ಸಂಸ್ಕೃತಿಯ ಪ್ರಕಾರ ನಮಗೆ ಹೊಸ ವರ್ಷ ಬಿಸು ಹಬ್ಬವಾಗಿದೆ. ತುಳುನಾಡಿನ ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಹಿರಿಯಡ್ಕ ಸ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನಾ ಗಣನಾಥ ಶೆಟ್ಟಿ ಹೇಳಿದರು.

Advertisement

ಅವರು ಬಂಟರ ಸಂಘ ಬಜಪೆ ವಲಯ ಮಹಿಳಾ ವಿಭಾಗದ ಆಶ್ರಯದಲ್ಲಿ ಇಲ್ಲಿನ ಬಿ. ಸಂಜೀವ ಶೆಟ್ಟಿ ಸಭಾಗೃಹದಲ್ಲಿ ರವಿವಾರ ನಡೆದ “ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಬಿರ್ಸು ಪರ್ಬದ ವಿಶೇಷತೆ ಬಗ್ಗೆ ಉಪನ್ಯಾಸ ನೀಡಿದರು.

ತುಳುನಾಡಿನ ಸಂಸ್ಕೃತಿ ವಿದೇಶೀಯರನ್ನೂ ಆಕರ್ಷಿಸುತ್ತಿದೆ. ಅವರು ಇಲ್ಲಿನ ಭಾಷೆ, ಸಂಸ್ಕೃತಿ ಯನ್ನು ಕಲಿಯುತ್ತಿದ್ದಾರೆ. ಹಣ ಮಾಡುವ ಸಂಸ್ಕೃತಿ ನಮ್ಮದಲ್ಲ. ಮಾತೃ ಮೌಲ್ಯ ಹಾಗೂ ಬೆವರು ಸುರಿಸುವ ಸಂಸ್ಕೃತಿ ನಮ್ಮದಾಗಿದೆ. ಇಂದು ಜನಜನಗಳ ಮಧ್ಯೆ ಅಡ್ಡ ಗೋಡೆಯಾಗದೆ, ಎಲ್ಲರನ್ನು ಒಗ್ಗೂಡಿಸುವ,ಸಾಮರಸ್ಯ ತರುವ ಸಂಸ್ಕೃತಿ ನಮ್ಮ ದಾಗಬೇಕು. ಕಾಲ ಬದಲಾಗಿಲ್ಲ, ಆಚಾರ, ವಿಚಾರ ಸಂಸ್ಕೃತಿಯಲ್ಲಿ ಬದಲಾಗಿದೆ. ಜಾತಿ ವೈಯಕ್ತಿಕ, ನೀತಿ ಸಾರ್ವತ್ರಿಕ, ಅಂತರಂಗದಲ್ಲಿ ಕೊರಗಿದ್ದರೆ ಹಬ್ಬ ನಿರ್ಜೀವ. ಎಲ್ಲರ ಮೊಗದಲ್ಲಿ ಲವಲವಿಕೆಯ ನಗು ಇದ್ದಲ್ಲಿ ಅಲ್ಲಿ ಹಬ್ಬ ಇದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಮಿಜಾರು ಮುಂಡಬೆಟ್ಟು ಗುತ್ತು ಪ್ರೇಮಲತಾ ವಿಟuಲ ಶೆಟ್ಟಿ ಉದ್ಘಾಟಿಸಿದರು. ಬಿಸು ಕಣಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಮಂಗಳೂರು ಇದರ ಅಧ್ಯಕ್ಷ ಆಶಾಜ್ಯೋತಿ ರೈ ವಹಿಸಿದ್ದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈ ದಿರುವ ಬಂಟ ಮಹಿಳಾ ಸಾಧಕಿಯರಾದ ಅನುಸೂಯಾ ಕಾಜವ ಮತ್ತು ಪ್ರತಿಭಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಬಂಟರ ಸಂಘ ಬಜಪೆ ವಲಯದ ಅಧ್ಯಕ್ಷ ವಿಜಯನಾಥ ವಿಟuಲ ಶೆಟ್ಟಿ, ಬಂಟ ಯಾನೆ ನಾಡವರ ಮಾತೃಸಂಘ ಕಾರ್ಯಕಾರಿ ಸಮಿತಿಯ ಸದಸ್ಯೆ ಸಬೀತಾ ಶೆಟ್ಟಿ, ಜಿಲ್ಲಾ ಲಯನೆಸ್‌ನ ಮಾಜಿ ಸಂಯೋಜಕಿ ವಿಜಯಲಕ್ಷ್ಮೀ ಪ್ರಸಾದ್‌ ರೈ, ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಶೈಲಿನಿ ಭಾಸ್ಕರ್‌ ಸೇಮಿತ ಉಪಸ್ಥಿತರಿದ್ದರು.

ಬಂಟರ ಸಂಘ ಬಜಪೆ ವಲಯ ಮಹಿಳಾ ವಿಭಾಗದ ಅಧ್ಯಕ್ಷೆ ಮಲ್ಲಿಕಾ ವರಪ್ರಸಾದ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಪಾವತಿ ಮಾಣಾಸ್ವಾಗತಿಸಿದರು. ಶ್ರೇಯಾ ಶೆಟ್ಟಿ ಹಾಗೂ ದಿವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾವ್ಯಾ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next