Advertisement
ಕಾಮ ಕಾಮೇಶ್ವರಿ ದೇವಸ್ಥಾನ: ಅರಮನೆ ಮುಜರಾಯಿ ದೇವಸ್ಥಾನಗಳಲ್ಲಿ ಒಂದಾದ ರಾಮಾನುಜ ರಸ್ತೆಯಲ್ಲಿರುವ ಕಾಮ ಕಾಮೇಶ್ವರಿ ದೇವಾಲಯ, ಗುರುಕುಲ ದೇವಾಲಯ, ಚಾಮುಂಡಿ ಬೆಟ್ಟದ ಮಹಾಬಲೇಶ್ವರ ದೇವಸ್ಥಾನ, ಒಂಟಿ ಕೊಪ್ಪಲು ಮತ್ತು ಕೆ.ಜಿ.ಕೊಪ್ಪಲು ಹಾಗೂ ನಾರಾಯಣ ಶಾಸ್ತ್ರಿ ರಸ್ತೆಯ ಚಂದ್ರಮೌಳೇಶ್ವರ ದೇವಾಲಯ,
Related Articles
Advertisement
7ಕ್ಕೆ ಭಕ್ತರಿಂದ ಶಿವಲಿಂಗಕ್ಕೆ ಸಹಸ್ರ ಕಲಶಾಭಿಷೇಕ, ರಾತ್ರಿ 10ಕ್ಕೆ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ 11ಬಾರಿ ರುದ್ರಾಭಿಷೇಕ ಮತ್ತು ವಿವಿಧ ಅಲಂಕಾರ ನಡೆಯಿತು. ಬಳಿಕ ಜಾಗರಣೆ ಪ್ರಯುಕ್ತ ಮಲ್ಲಾದಿ ಸೂರಿಬಾಬು ಮತ್ತು ಮಲ್ಲಾದಿ ಸಹೋದರರಾದ ಶ್ರೀರಾಮ್ ಮತ್ತು ರವಿಕುಮಾರ್‌ರಿಂದ ಶಿವಸ್ಮರಣ ಕರ್ನಾಟಕ ಸಂಗೀತ ಗಾಯನ, ಅಮೃತ ವೆಂಕಟೇಶ್‌ರಿಂದ ಕರ್ನಾಟಕ ಸಂಗೀತ ಗಾಯನ ನಡೆದರೆ, ಮಧ್ಯರಾತ್ರಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಶಿವಭಜನೆ ನಡೆಯಿತು.
ಹುಲಿವಾಹನ, ಹಾಲ್ಹರವಿ: ಶ್ರೀಮಲೆ ಮಹದೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರ ವತಿಯಿಂದ 18ನೇ ಹುಲಿವಾಹನ ಹಾಗೂ ಹಾಲ್ಹರವಿ ಮೆರವಣಿಗೆ ನಡೆಯಿತು. ವೀರನಗೆರೆ ಸಮೀಪದ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಾಲ್ಹರವಿ ಕಲಶ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಹೊರ ಮೆರವಣಿಗೆ ಜರುಗಿದರೆ, ಸೇಂಟ್ ಮೇರಿಸ್ ರಸ್ತೆ ಮೂಲಕ ಮಂಗಳ ವಾದ್ಯದೊಡನೆ ಮಹದೇಶ್ವರ ಸ್ವಾಮಿ ಹುಲಿವಾಹನ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಬಿಗಿ ಬಂದೋಬಸ್ತ್: ದೇವಾಲಯಗಳಲ್ಲಿ ದರ್ಶನದ ವೇಳೆ ನೂಕುನುಗ್ಗಲು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ, ಬ್ಯಾರಿಕೇಡ್ ಅಳವಡಿಸಿ,ಮಹಿಳಾ ಪೊಲೀಸರನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಂಡಿದ್ದರು. ವಾಹನಗಳನ್ನು ನಿಲುಗಡೆಗೆ ದೊಡ್ಡಕೆರೆ ಮೈದಾನ, ಅಂಬಾವಿಲಾಸ ಪಾರ್ಕಿಂಗ್, ಕಾಡಾ ಕಚೇರಿ ಕಾಂಪೌಂಡ್, ವರಾಹದ್ವಾರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಪ್ರಸಾದ ವಿತರಣೆ: ಅರಮನೆ ವೀಕ್ಷಿಸಲು ಬಂದಿದ್ದ ಕೇರಳ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳ ಪ್ರವಾಸಿಗರು ಸಹ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆಯುತ್ತಿದ್ದದ್ದು ಕಂಡುಬಂತು. ದೇವರ ದರ್ಶನ ಪಡೆದು ಬಂದವರಿಗೆ ಪುಳಿಯೊಗರೆ ವಿತರಣೆ ಮಾಡಲಾಯಿತು.
ಬಿಲ್ವಪತ್ರೆಗೆ ಬೇಡಿಕೆ: ಮಹಾ ಶಿವರಾತ್ರಿಯಂದು ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಬಿಲ್ವಪತ್ರೆಗೆ ಭಾರೀ ಬೇಡಿಕೆ ಕಂಡುಬಂತು. ನಗರದ ದೇವರಾಜ ಮಾರುಕಟ್ಟೆ, ಸಯ್ನಾಜಿರಾವ್‌ರಸ್ತೆ, ಅಗ್ರಹಾರ ವೃತ್ತ, ದಿವಾನ್ಸ್‌ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಲ್ವಪತ್ರೆ ಮಾರಾಟ ಜೋರಾಗಿತ್ತು.
ಪ್ರಸಾದ ಪರಿಶೀಲನೆ: ಸುಳ್ವಾಡಿ ಕಿಚ್‌ಗುತ್ ಮಾರಮ್ಮ ದೇವಸ್ಥಾನದಲ್ಲಿನ ವಿಷಪ್ರಸಾದ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ಮಹಾ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕವಾಗಿ ಪ್ರಸಾದ ವಿತರಣೆಗೆ ತಯಾರಿ ನಡೆಸುವ ಸ್ಥಳದಲ್ಲಿ ಬಳಸುವ ನೀರು, ಗುಣಮಟ್ಟದ ಪದಾರ್ಥಗಳ ಉಪಯೋಗ ಸೇರಿದಂತೆ ಇತರ ಎಲ್ಲಾ ರೀತಿಯ ಸ್ವತ್ಛತೆಯನ್ನು ಪರಿಶೀಲನೆ ಮಾಡಲಾಯಿತು ಎಂದು ಮಹಾ ನಗರಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ತಿಳಿಸಿದರು.