ರಾಜ್ಯದಲ್ಲಿ 23 ಜಿಲ್ಲೆಗಳ 103 ತಾಲೂಕುಗಳಲ್ಲಿ ಭಾರೀ ಹಾನಿ
Advertisement
ಉಡುಪಿ: ರಾಜ್ಯ ಸರಕಾರ ತೋಟಗಾರಿಕೆ ಮತ್ತು ಕೃಷಿ ಪ್ರವಾಹ ಬೆಳೆ ಹಾನಿ ಸಂಬಂಧಿಸಿ ಎಸ್‌ಡಿಆರ್‌ಎಫ್ ಪರಿಹಾರ ಮಾರ್ಗಸೂಚಿ ಪರಿಷ್ಕರಿಸಿದ್ದು, ಪ್ರತಿ ಹೆಕ್ಟೆರಿಗೆ ಹೆಚ್ಚುವರಿ ಪರಿಹಾರ ಸಹಾಯಧನವನ್ನು (ಇನ್‌ಪುಟ್ ಸಬ್ಸಿಡಿಯನ್ನು ) 10,000 ರೂ.ಏರಿಕೆ ಮಾಡಿದೆ.
ರಾಜ್ಯ ಸರಕಾರ ಆಗಸ್ಟ್‌ನಲ್ಲಿ ಉಂಟಾದ ಅತಿವೃಷ್ಟಿ ಬೆಳೆಹಾನಿ ಪ್ರಕರಣಗಳಿಗೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಮಾರ್ಗ ಸೂಚಿಯಲ್ಲಿ ಸೂಚಿಸಿದ ಇನ್‌ಪುಟ್ ಸಬ್ಸಿಡಿ ಪಾವತಿಸಲು ನಿಗದಿಪಡಿಸಿರುವ ದರಗಳನ್ನು ಪರಿಷ್ಕರಿಸಿದೆ. ಅದರ ಅನ್ವಯ ದರವನ್ನು ವಾರ್ಷಿಕ ತೋಟಗಾರಿಕೆ ಮತ್ತು ಕೃಷಿ ಬೆಳೆ, ನೀರಾವರಿ ಬೆಳೆ, ಬಹುವಾರ್ಷಿಕ ಬೆಳೆ ಮೂರು ವರ್ಗದಲ್ಲಿ ಪರಿಷ್ಕೃತಗೊಳಿಸಿದೆ. ಈ ವೆಚ್ಚವನ್ನು ಎಸ್‌ಡಿಆರ್‌ಎಫ್ ನಿಧಿಯಡಿ ರಾಜ್ಯ ಸರಕಾರವೇ ಹೆಚ್ಚುವರಿ ಅನುದಾನವನ್ನು ಭರಿಸಲಿದೆ. 23 ಜಿಲ್ಲೆಯಲ್ಲಿ ಬೆಳೆ ಹಾನಿ
2019ರ ಆಗಸ್ಟ್‌ನಿಂದ ರಾಜ್ಯದಲ್ಲಿ 23 ಜಿಲ್ಲೆಗಳ 103 ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ ಅನಂತರ ಹಾನಿಗೆ ಸಂಬಂಧಿಸಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ತೋಟಗಾರಿಕೆ, ಕೃಷಿ ಹಾನಿ ಸಮೀಕ್ಷೆ ನಡೆಸಿ ವರದಿ ಸರಕಾರಕ್ಕೆ ಸಲ್ಲಿಸಿದೆ. ಕಂದಾಯ ಇಲಾಖೆ ಮೂಲಕ ಅರ್ಹ ರೈತರಿಗೆ ಹೆಚ್ಚುವರಿ ಪರಿಹಾರ ಮೊತ್ತ ಲಭಿಸಲಿದೆ.
Related Articles
ವಾರ್ಷಿಕ ತೋಟಗಾರಿಕೆ ಮತ್ತು ಕೃಷಿ ಬೆಳೆಗೆ ಸಂಬಂಧಿಸಿ ಈ ಹಿಂದೆಯಿದ್ದ ಪರಿಹಾರ 6,800 ರೂ., ಮೊತ್ತವನ್ನು 16,800 ರೂ.,ಗೆ ಏರಿಸಲಾಗಿದೆ. ನೀರಾವರಿ ಬೆಳೆಗೆ 13,500 ರೂ. ರಿಂದ 23,500 ರೂ.,ಗೆ ಏರಿಕೆ ಮಾಡಲಾಗಿದೆ. ಬಹುವಾರ್ಷಿಕ ಬೆಳೆಗಳಿಗೆ 18,000ರೂ. ನಿಂದ 28,000 ರೂ.,ಗೆ ಏರಿಕೆಯಾಗಿದೆ.
Advertisement
ಯಾವೆಲ್ಲ ಜಿಲ್ಲೆಗಳಿಗೆ ಲಾಭ?ಬೆಳಗಾವಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಯಾದಗಿರಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ಕಲಬುರಗಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜ ನಗರ, ಮಂಡ್ಯ ಜಿಲ್ಲೆಯ 103 ತಾಲೂಕಿನ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಉಡುಪಿಯಲ್ಲಿ ಎಷ್ಟು ಹಾನಿ ?
ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಹಾಗೂ ಕೃಷಿಯಲ್ಲಿ ಭತ್ತ ಬೆಳೆಗೆ ಹೆಚ್ಚು ಹಾನಿಯಾಗಿದೆ. ಉಡುಪಿಯಲ್ಲಿ ಆಗಸ್ಟ್‌ನಲ್ಲಿ 264.98 ಹೆಕ್ಟೆರ್ ಭತ್ತ ಬೆಳೆ ಹಾನಿಯಾಗಿದೆ. ಉಡುಪಿ 98.06 ಹೆಕ್ಟೆರ್, ಕಾರ್ಕಳ 27.81 ಹೆಕ್ಟೆರ್, ಕುಂದಾಪುರ 139.11 ಹೆಕ್ಟೆರ್ ಭತ್ತ ಬೆಳೆಗೆ ಹಾನಿ ಸಂಭವಿಸಿದೆ. 713 ಮಂದಿ ಭತ್ತ ಬೆಳೆಗಾರರು ಬೆಳೆಹಾನಿ ಸಂತ್ರಸ್ತರಿದ್ದಾರೆ. 24 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 265 ಮಂದಿ ರೈತರು ತೋಟಗಾರಿಕೆ ಬೆಳೆಹಾನಿ ಸಂತ್ರಸ್ತರಿದ್ದಾªರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಹಾಗೂ ಕೃಷಿಯಲ್ಲಿ ಭತ್ತ ಬೆಳೆಗೆ ಹೆಚ್ಚು ಹಾನಿಯಾಗಿದೆ. ಉಡುಪಿಯಲ್ಲಿ ಆಗಸ್ಟ್‌ನಲ್ಲಿ 264.98 ಹೆಕ್ಟೆರ್ ಭತ್ತ ಬೆಳೆ ಹಾನಿಯಾಗಿದೆ. ಉಡುಪಿ 98.06 ಹೆಕ್ಟೆರ್, ಕಾರ್ಕಳ 27.81 ಹೆಕ್ಟೆರ್, ಕುಂದಾಪುರ 139.11 ಹೆಕ್ಟೆರ್ ಭತ್ತ ಬೆಳೆಗೆ ಹಾನಿ ಸಂಭವಿಸಿದೆ. 713 ಮಂದಿ ಭತ್ತ ಬೆಳೆಗಾರರು ಬೆಳೆಹಾನಿ ಸಂತ್ರಸ್ತರಿದ್ದಾರೆ. 24 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 265 ಮಂದಿ ರೈತರು ತೋಟಗಾರಿಕೆ ಬೆಳೆಹಾನಿ ಸಂತ್ರಸ್ತರಿದ್ದಾªರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವರದಿ ಸಲ್ಲಿಸಿದೆ
ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟರ್‌ಗೆ 10,000 ರೂ. ಹೆಚ್ಚುವರಿ ಪರಿಹಾರ ಮೊತ್ತ ಸಿಗಲಿದೆ. ಈಗಾಗಲೇ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ತೋಟಗಾರಿಕೆ, ಕೃಷಿ ಹಾನಿ ಸಮೀಕ್ಷೆ ನಡೆಸಿ ವರದಿ ಸರಕಾರಕ್ಕೆ ಸಲ್ಲಿಸಿದೆ.
-ಜಿ. ಜಗದೀಶ್, ಜಿಲ್ಲಾಧಿಕಾರಿ ಉಡುಪಿ