Advertisement

ಗೋವು ರಕ್ಷಣೆಗೆ ಮುಂದಾಗಿ

10:52 AM Feb 19, 2019 | Team Udayavani |

ಯಾದಗಿರಿ: ಭೂಲೋಕದ ಒಡೆಯ ಶಿವ ಪರಮಾತ್ಮನಿಗೆ ಪ್ರಿಯಾವಾದದು ಕಲ್ಪಭಸ್ಮ ತಯಾರಿಸಲು ಕಳೆದ ಒಂದು ವಾರದಿಂದ ಯಲ್ಹೇರಿ ವಾರಣಾಸಿ ಹಿರೇಮಠದ ತಪಸ್ವಿ ಗುರು ಗಂಗಾಧರ ಶ್ರೀಗಳು ಖಾಸಗಿ ಜಮೀನಿನಲ್ಲಿ ಲೋಕ ಕಲ್ಯಾಣಕ್ಕಾಗಿ ತಮ್ಮ ಶಿಷ್ಯ ಬಳಗ ಹಾಗೂ ಭಕ್ತರೊಂದಿಗೆ ಹಗಲಿರುಳು ಗೋವುಗಳೊಂದಿಗೆ ಜೀವನ ನಡೆಸುತ್ತಿದ್ದಾರೆ.

Advertisement

ಶ್ರೀಗಳು ಪಂಚವರ್ಣಗಳ ಒಟ್ಟು 25 ಗೋವುಗಳಿಗೆ ಸ್ನಾನ ಮಾಡಿಸಿ ವಿಶೇಷ ಪೂಜೆ ಕೈಂಕರ್ಯ ನೇರವೆರಿಸಿ, ಲಿಂಗ ಧಾರಣೆ ಮಾಡಿ ಮಂತ್ರೋಪದೇಶಗಳೊಂದಿಗೆ ಪೂಜೆ ಮಾಡಿ, ಗೋವುಗಳಿಗೆ ನಂದಾ, ಭದ್ರ, ಸುರಭಿ, ಸುಮನಾ, ಸುಶೀಲಾ ಎಂದು ನಾಮಕರಣ ಮಾಡಿ ಪ್ರತಿಯೊಂದು ವರ್ಣದ ಐದು ಗೋವುಗಳಂತೆ ತಂಡ ರಚಿಸಿದ್ದಾರೆ.

ನಿತ್ಯ ಶ್ರೀಗಳು ತಮ್ಮ ಶಿಷ್ಯ ಬಳಗ ಸ್ನಾನ ಮಾಡಿ ಗೋವುಗಳ ಗೋ ಮೂತ್ರ ಹಾಗೂ ಸಗಣಿಯನ್ನು ಭೂಮಿಗೆ ಸ್ಪರ್ಶವಾಗದಂತೆ ಮಂತ್ರೋಚ್ಯಾರದೊಂದಿಗೆ ತಮ್ಮ ಕೈಗಳಲ್ಲಿ ಸಂಗ್ರಹಿಸಿ ಪ್ರತ್ಯೇಕ ಹಾಸುಗೆ ಮೇಲೆ ಹಾಕಿ 16 ಬಾರಿ ತಟ್ಟಿ ಸಂಸ್ಕರಿಸಿ, ಕುಳ್ಳು ಮಾಡಿದ ನಂತರ ಒಣಗಿಸಲಾಗುತ್ತಿದೆ. ಈ ಪ್ರಕ್ರಿಯೆ 21 ದಿನಗಳ ಕಾಲ ನಡೆದು ಫೆ. 26ರಂದು ಮಂಗಲಗೊಳ್ಳಲಿದೆ ಎಂದರು.

ಮಂತ್ರ ಪಠಣದೊಂದಿಗೆ ಯಜ್ಞ ಕುಂಡದಲ್ಲಿ ಸಗಣಿ ಕುಳ್ಳುಗಳನ್ನು ಸುಟ್ಟ ನಂತರ ತೆಗೆದು ಈಶ್ಯಾನ ಮಂತ್ರದಿಂದ ಅದನ್ನು ಸೋಧಿಸಿ ತಾಮ್ರ, ಬೆಳ್ಳಿ, ಬಂಗಾರ ಪಾತ್ರೆಗಳಲ್ಲಿ ತುಂಬುವ ಮೂಲಕ ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡು ಐದು ಬಟ್ಟಲುಗಳಲ್ಲಿ ಕಲ್ಪ ಭಸ್ಮಹಾಕಿ ಪಾದೋದಕ ಮಿಶ್ರಣಮಾಡಿ ಜನತೆ ದಿನಾಲು ತಪ್ಪದೇ ಧರಿಸಿದಲ್ಲಿ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಗಂಗಾಧರ ಶ್ರೀಗಳು ಮಾಹಿತಿ ನೀಡಿದರು.
 
ಭಾರತ ಧರ್ಮ ಹಾಗೂ ಕೃಷಿ ಆಧಾರಿತ ದೇಶವಾಗಿದ್ದು, ಗೋ ಮಾತೆ ಇದರ ಮೂಲವಾಗಿದ್ದಾಳೆ. ಯುವ ಜನತೆ ಕೃಷಿ ಕಾರ್ಯದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ತೊರೆದು, ದೇಶಿ ಗೋವುಗಳನ್ನು ರಕ್ಷಿಸಿ ಅದರ ಲಾಭ ಎಲ್ಲರೂ ಪಡೆಯಬೇಕು ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಿರಿಯ
ಶ್ರೀಗಳು ಶಿವಯೋಗಿಸ್ವಾಮಿ ತಂಗಡಮಲ್ಲಿ ನೀಲಕಂಠರಾಯ ಯಲ್ಹೆರಿ, ಶರಣಗೌಡ ಮಾಲಿಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next