Advertisement

ಕೋವಿಡ್‌ 3ನೇ ಅಲೆ ಭೀಕರವಾಗಿರದು

12:33 AM Oct 23, 2021 | Team Udayavani |

ಹೊಸದಿಲ್ಲಿ: ಎರಡನೇ ಅಲೆಯಷ್ಟು ಭೀಕರವಾದ ಕೋವಿಡ್‌ ಅಲೆ ಇನ್ನು ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಆದರೆ ಈಗ ಸೋಂಕು ಪ್ರಕರಣ ಕಡಿಮೆಯಾಗಿದೆ ಎಂಬ ಮಾತ್ರಕ್ಕೆ ಸಾಂಕ್ರಾಮಿಕವು “ಸಾಮಾನ್ಯ ಸೋಂಕು'(ಎಂಡೆಮಿಕ್‌) ಆಗಿ ಪರಿವರ್ತನೆಯಾಗಿದೆ ಎಂದರ್ಥವಲ್ಲ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ದೀಪಾವಳಿ ಹಬ್ಬವು ಸಮೀಪಿಸುತ್ತಿದ್ದಂತೆ, ತಜ್ಞರಿಂದ ಇಂಥ ಹೇಳಿಕೆ ಹೊರಬಿದ್ದಿದೆ. ಗಂಭೀರವಾದ ಅಲೆಯು ಅಪ್ಪಳಿಸುವ ಸಾಧ್ಯತೆಯಿಲ್ಲ ಎನ್ನುವ ಮೂಲಕ ಸಮಾಧಾನದ ಸುದ್ದಿ ನೀಡಿದರೂ, ಹಬ್ಬಗಳ ವೇಳೆ ಮೈಮರೆಯಬಾರದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಶೇ.90 ಪರಿಣಾಮಕಾರಿ: ಫೈಜರ್‌ ಲಸಿಕೆಯು ಮಕ್ಕಳ ಮೇಲೆ ಶೇ.90ರಷ್ಟು ಪರಿಣಾಮಕಾರಿ ಎಂದು ಅಧ್ಯಯನ ವರದಿ ಹೇಳಿದೆ. 5-11ರ ವಯೋಮಾನದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಿಂದ ಈ ವಿಚಾರ ತಿಳಿದುಬಂದಿದ್ದು, ಸೋಂಕು ತಡೆಯುವಲ್ಲಿ ಇದು ಶೇ.91ರಷ್ಟು ಪರಿಣಾಮಕತ್ವ ಹೊಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಚೀನದಲ್ಲಿ ಮತ್ತೆ ಕೋವಿಡ್‌ ಆತಂಕ
ಚೀನದಲ್ಲಿ ಮತ್ತೊಮ್ಮೆ ಕೋವಿಡ್‌ ಸೋಂಕು ಅಬ್ಬರಿಸತೊಡಗಿದೆ. ಸತತ 5 ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಚೀನ ಸರಕಾರ ಹಲವು ವಿಮಾನಗಳ ಸಂಚಾರವನ್ನು ರದ್ದು ಮಾಡಿದೆ. ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಜತೆಗೆ ಸಾಮೂಹಿಕ ಕೋವಿಡ್‌ ಪರೀಕ್ಷೆ ಆರಂಭಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next