Advertisement

ಕೊರೊನಾ ಬಿಕ್ಕಟ್ಟು : ಆನ್‌ಲೈನ್‌ ತರಗತಿಗಳಿಗೂ ಕುತ್ತು

10:52 AM Aug 24, 2020 | Nagendra Trasi |

ಸ್ಯಾನ್‌ಫ್ರಾನ್ಸಿಸ್ಕೊ: ಕೊರೊನಾ ಸೋಂಕು ಶೈಕ್ಷಣಿಕ ಕ್ಷೇತ್ರದ ಮೇಲೂ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿದೆ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್‌ ಶಿಕ್ಷಣ ನಡೆಯುತ್ತಿವೆ. ಆದರೆ ಇದೀಗ ವರ್ಚುವಲ್‌ ತರಗತಿಗಳು ನಡೆಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆ ಕಂಪ್ಯೂಟರ್‌ ಕೊರತೆ ಎದುರಾಗಿದೆ.

Advertisement

ಅಸೋಸಿಯೇಟೆಡ್‌ ಪ್ರಸ್‌ ಸುದ್ದಿ ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಈ ಮಾಹಿತಿ ಬಹಿರಂಗಗೊಂಡಿದ್ದು, ಡಿಜಿಟಲ್‌ ಉಪಕರಣಗಳ ಕೊರತೆಯಿಂದಾಗಿ ಅಮೆರಿಕದಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸಲು ತುಂಬಾ ಕಷ್ಟವಾಗುತ್ತಿದೆ ಎಂದು ಶಾಲೆಗಳ ಆಡಳಿತ ಮಂಡಳಿಯವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಕೆಲವು ತಿಂಗಳುಗಳ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ತಜ್ಞರು ಹೇಳಿದ್ದು, ಈ ಬೆಳವಣಿಗೆಯಿಂದಾಗಿ ವಿದ್ಯಾರ್ಥಿಗಳ ಮಧ್ಯೆ ಅಸಮಾನತೆಯ ಸಮಸ್ಯೆ ಉಂಟಾಗುತ್ತಿದೆ. ಪರಿಣಾಮ ಶಿಕ್ಷಕರು ಮತ್ತು ಪೋಷಕರಿಗೆ ದೊಡ್ಡ ತಲೆನೋವಾಗಿದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ.

ಚೀನದಿಂದ ಕಂಪ್ಯೂಟರ್‌ ಪೂರೈಸುವ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಪರಿಣಾಮವೂ ಲ್ಯಾಪ್‌ ಟಾಪ್‌ಗಳ ಕೊರತೆಗೆ ಕಾರಣ ಎಂದು ಅಮೆರಿಕದ ಹದಿನೈದು ರಾಜ್ಯಗಳ 24 ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷರು, ಕಂಪ್ಯೂಟರ್‌ ಕಂಪನಿಗಳು,ಉದ್ಯಮಗಾರರು ಸಮೀಕ್ಷೆ ವೇಳೆ

ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಅಸಮಾಧನ ಹೊರ ಹಾಕಿರುವ ಕ್ಯಾಲಿಫೋರ್ನಿಯಾದ ಮೊಜವೆ ಡೆಸರ್ಟನ್‌ ಮೊರೊನೊ ಕೌಂಟಿ ಶಾಲೆಯ ಸೂಪರಿಂಟೆಂಡ್‌ ಟಾಮ್‌ ಬೌಮಾರ್ಟನ್‌ ಕಂಪ್ಯೂಟರ್‌ ಇಲ್ಲದೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡುವುದು ಅಸಾಧ್ಯ. ಈ ಶಾಲೆಯಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದಿದ್ದಾರೆ.

Advertisement

ಕೋವಿಡ್‌ನಿಂದ ಇತರ ವೈರಸ್‌ ಪತ್ತೆಗೆ ವೇಗ

ಇಡೀ ಜಗತ್ತನ್ನೇ ಆವರಿಸಿರುವ ಕೊರೊನಾ ಮುಂಬರುವ ದಿನಗಳಲ್ಲಿ ಹಲವು ವೈರಸ್‌ಗಳ ಪತ್ತೆಗೆ ಕಾರಣವಾಗಲಿದೆ. ಕಳೆದ ವರ್ಷ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮೇರಿ ಫೈಸ್ಟೋìನ್‌ ಮತ್ತು ಅವರ ಸಹೋದ್ಯೋಗಿಗಳು ಹುಲ್ಲುಗಾವಲು ಪ್ರದೇಶಗಳಲ್ಲಿ 3,884 ಹೊಸ ಜಾತಿಯ ವೈರಸ್‌ಗಳನ್ನು ಪತ್ತೆ ಮಾಡಿದ್ದಾರೆ.

2010ರಲ್ಲಿ ಪ್ರಾಜೆಕ್ಟ್-ಪ್ರಿಡಿಕ್ಟ್ ಮೂಲಕ 949 ಹೊಸ ವೈರಸ್‌ಗಳನ್ನು ಅಮೆರಿಕ ಸರಕಾರ ಕಂಡುಹಿಡಿದಿದೆ. ಇವು ಮಾನವರ ಅಂಗಾಂಶ ಮಾದರಿಗಳಲ್ಲಿ ಮತ್ತು 35 ದೇಶಗಳಲ್ಲಿ ಒಂದು ಲಕ್ಷ 60 ಸಾವಿರ ಪ್ರಾಣಿಗಳಲ್ಲಿ ಕಂಡುಬಂದಿವೆ. ಮುಂಬರುವ ವರ್ಷಗಳಲ್ಲಿ ವಿಶ್ವದ ಎಲ್ಲ 7,400 ಜಾತಿಯ ಸಸ್ತನಿಗಳ ವೈರಸ್‌ಗಳನ್ನು ಕಂಡುಹಿಡಿಯಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಇವರು ಸುಮಾರು 15.5 ಮಿಲಿಯನ್‌ ವೈರಸ್‌ಗಳನ್ನು ಕಂಡುಹಿಡಿಯುವ ಭರವಸೆ ಹೊಂದಿದ್ದಾರೆ. ಇವುಗಳಲ್ಲಿ ಏಳು ಲಕ್ಷ ವೈರಸ್‌ಗಳು ಮನುಷ್ಯರಿಗೆ ಸೋಂಕನ್ನು ಹರಡುವಂತವುಗಳಾಗಿವೆ. ಹತ್ತು ವರ್ಷಗಳ ಯೋಜನೆಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next