ಮುಂಡರಗಿ: ರಾಯಚೂರ ಜಿಲ್ಲಾ ವಕೀಲರ ಸಂಘದ ಸದಸ್ಯ ಪಿ.ಎಸ್. ವೀರಯ್ಯ ವಕೀಲರ ಮೇಲೆ ರಾಯಚೂರ ನಗರದ ಪಶ್ಚಿಮ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ ಮೇಕಾ ದೌರ್ಜನ್ಯ ಎಸಗಿರುವುದನ್ನು ಹಾಗೂ ದೇಶದ ವಕೀಲರ ಸಂಘಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಇಲ್ಲಿನ ವಕೀಲರ ಸಂಘವು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿಯಿತು.
ಪಿಎಸ್‌ಐ ನಾಗರಾಜ ಅವರ ಕ್ರಮ ಖಂಡಿಸಿ ಮುಂಡರಗಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ವಕೀಲರ ಮೇಲೆ ಇಂತಹ ಕಿರುಕುಳ ದೌರ್ಜನ್ಯ ನಿಲ್ಲಬೇಕು. ಪಿಎಸ್‌ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿತು.
ಸಂಘದ ಉಪಾಧ್ಯಕ್ಷ ನಾಗಭೂಷಣ ವಿ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪಾಟೀಲ ಕೋಶಾಧಿಕಾರಿ ಎಂ.ಎನ್. ಬೆಳಗಟ್ಟಿ, ವಕೀಲರಾದ ವೈ.ಬಿ. ಗೊಡೂರ, ಪಿ.ಜಿ. ಹಿರೇಮಠ, ಎಂ.ವಿ. ಅರಳಿ, ಕುಮಾರಿ ರಚನಾ ಗದಗ, ಎಂ.ಎಫ್. ಬನ್ನಿಕೊಪ್ಪ, ಶೋಭಾ ಈಳಗೇರ, ಜೆ.ಬಿ. ಹಟ್ಟಿ, ಹರ್ಷವರ್ಧನಗೌಡ, ಬಿ.ಎಚ್. ರಾಟಿ, ಶಿವು ನಾಡಗೌಡ, ಎಸ್.ಐ. ಉಳ್ಳಾಗಟ್ಟಿ, ಅಶೋಕ ಸಿ. ಉಳ್ಳಾಗಡ್ಡಿ, ಕೃಷ್ಣಾ ಗಡಾದ, ವಿ.ವಿ. ಬ್ಯಾಲಿಹಾಳ, ರವಿ ಗೊಡರಳ್ಳಿ,ಉಮೇಶ ಹಿರೇಗೌಡರ, ಕೆ.ಕೆ. ಕಮ್ಮಾರ, ಇನ್ನಿತರ ವಕೀಲರು ಭಾಗವಹಿಸಿ ಘಟನೆಯನ್ನು ಖಂಡಿಸಿದರು.
Advertisement
ವಕೀಲರ ಸಂಘದ ಅಧ್ಯಕ್ಷ ಗುರುರಾಜ ಈಳಗೇರ, ಪಿಎಸ್‌ಐ ನಾಗರಾಜ ಮಾಡಿದ ದೌರ್ಜನ್ಯ ಖಂಡಿಸಿದರು. ವಕೀಲರ ಮೇಲೆ ನಡೆದ ದೌರ್ಜನ್ಯ ಖಂಡನೀಯ ಎಂದರು.