Advertisement
ಚಿಂತಾಮಣಿ ತಾಲೂಕು ವಂಗಿಮಾಳ್ಳು ನಿವಾಸಿ ಶ್ರೀನಾಥ (25) ಮೃತ ಅಭಿಯಂತರ. ಬಾಗೇಪಲ್ಲಿ ತಾಲೂಕಿನ ಬಿಳ್ಳೂರು,ನಾರೇಮುದ್ದೇಪಲ್ಲಿ ಮತ್ತಿತರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಹೊರ ಗುತ್ತಿಗೆ ಆಧಾರದಲ್ಲಿ ಎಂಜಿಯರ್ ಆಗಿದ್ದರು. ತಮ್ಮ ತೋಟದಲ್ಲಿ ಟೊಮೆಟೋ ಕಟ್ಟಿಗೆಗಳ ರಾಶಿ ಮೇಲೆ ಮಲಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಸ್ವೀಕರಿಸುವ ವೇಳೆ ಎಸಿಬಿಗೆ ಸೆರೆಸಿಕ್ಕಿ ನ್ಯಾಯಾಂಗ ಬಂಧನಕ್ಕೊಳಗಾಗಿ ಕೆಲಸ ಕಳೆದು ಕೊಂಡಿದ್ದರು. ಲಂಚ ಪ್ರಕರಣದ ತೀರ್ಪು ಬುಧವಾರ ಇದ್ದುದರಿಂದ ಶ್ರೀನಾಥ ತಮಗೆ ಶಿಕ್ಷೆ ಆಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಶ್ರೀನಾಥ್ ಆತ್ಮಹತ್ಯೆಗೂ ಮುನ್ನ 9 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದು, ತಾನು ಕೆಲಸ ನಿರ್ವಹಿಸಿದ ಗ್ರಾಪಂಗಳ ವ್ಯಾಪ್ತಿಯಲ್ಲಿ ಪಿಡಿಒಗಳು ಹಾಗೂ ಗುತ್ತಿಗೆದಾರರ ನೀಡಿದ ಹಿಂಸೆ ಬಗ್ಗೆ ವಿವರಿಸಿದ್ದಾರೆ.