Advertisement

ದೇಶದ ಗಡಿ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ

08:57 PM Aug 05, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಭಾಷೆ, ನೆಲ, ಜಲ ಮತ್ತು ಗಡಿಯ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದು,ª ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಪೋಷಣೆಗಾಗಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಸಕ್ತಿಯಿಂದ ಸ್ಥಾಪಿತವಾದ ಕಸಾಪ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಯುವ ಲೇಖಕ ನಾಗೇಂದ್ರಸಿಂಹ ತಿಳಿಸಿದರು.

Advertisement

ತಾಲೂಕು ಕಸಾಪ ವತಿಯಿಂದ ಭಾನುವಾರ ನಗರದ ಪ್ರಶಾಂತ ನಗರದ ಪೊಲೀಸ್‌ ಪೇದೆ ಅಶ್ವತ್ಥ್ ರಾಜು ನಿವಾಸದಲ್ಲಿ ಆಯೋಜಿಸಲಾಗಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಇರುವ ಸಾವಿರಾರು ವರ್ಷಗಳ ಇತಿಹಾಸ ಮತ್ತೂಂದು ಭಾಷೆಗಿಲ್ಲ ಎಂದರು.

ಮರು ನಾಮಕರಣ: ಸಾಹಿತ್ಯ ಪರಿಷತ್‌ 1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರ ಆಸಕ್ತಿ ಮತ್ತು ಜಿಲ್ಲೆಯವರೇ ಆದ ಭಾರತ ರತ್ನ ಸರ್‌ ಎಂ ವಿಶ್ವೇಶ್ವರಯ್ಯ ನವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ವೇಳೆ ಅವರ ಕನಸಿನ ಕೂಸಾದ ಪರಿಷತ್‌ ಮೊದಲ ಹೆಸರು ಕರ್ನಾಟಕ ಸಾಹಿತ್ಯ ಪರಿಷತ್‌ ಆಗಿತ್ತು. ನಂತರ 1,938 ರಲ್ಲಿ ಬಳ್ಳಾರಿಯಲ್ಲಿ ನಡೆದ 23ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಎಂದು ಮರು ನಾಮಕರಣ ಮಾಡಿದರು ಎಂದು ತಿಳಿಸಿದರು.

ಇತರೆ ಭಾಷೆ ಕಲಿಯಿರಿ: ಕನ್ನಡ ಸಾಹಿತ್ಯ ಪರಿಷತ್‌ ತಮ್ಮ ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಆಂಧ್ರದ ಗಡಿಯಲ್ಲಿರುವ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇಂದಿನ ವಿದ್ಯಾರ್ಥಿ ಯುವ ಪೀಳಿಗೆಯು ಕನ್ನಡ ಭಾಷೆಗೆ ಮೊದಲ ಆದ್ಯತೆಯಾಗಿ ಇತರೆ ಭಾಷೆಗಳನ್ನು ಕಲಿಯಬೇಕಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲಭಾಷೆ ಕೂಡ ಮುಖ್ಯ. ಆದರೆ ಮಾತೃಭಾಷೆಯಲ್ಲಿ ಆಗುವಷ್ಟು ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮತ್ತೂಂದು ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಸಾಪ ತಾಲೂಕು ಅಧ್ಯಕ್ಷ ಮೆಹಬೂಬ್‌ ಪಾಷ ಮಾತನಾಡಿ, ಈ ಬಾರಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ದಿಸೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಜಿಲ್ಲಾ ಕೇಂದ್ರದಲ್ಲಿ ಇದೇ ತಿಂಗಳಲ್ಲಿಯೇ ಒಂದು ದಿನದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು ಎಂದರು. ಕಸಪಾ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ, ಯುವ ಮುಖಂಡ ಎಸ್‌.ಪಿ.ಶ್ರೀನಿವಾಸ್‌, ಕಸಾಪ ಕೋಶಾಧ್ಯಕ್ಷ ಬಾಬಾಜಾನ್‌, ಪದಾಧಿಕಾರಿಗಳಾದ ನಾಯ್ಡು, ಚರಣ್, ಗಂಗಾಧರ ಮೂರ್ತಿ, ವೆಂಕಟೇಶ್‌, ಸರಸ್ವತಿ, ವೆಂಕಟೇಶ್‌ ಇದ್ದರು.

Advertisement

ಕನ್ನಡದಲ್ಲಿ 125 ಅಂಕ ಪಡೆದ ಪ್ರಿಯಾಂಕಗೆ ಸನ್ಮಾನ: ಕಸಾಪ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅಶ್ವತ್ಥರಾಜುರವರ ಪುತ್ರಿ ಪ್ರಿಯಾಂಕ ನಗರದ ಹೊರ ವಲಯದ ಅಗಲಗುರ್ಕಿ ಬಿಜಿಎಸ್‌ ಶಾಲೆಯಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಹಿನ್ನೆಲೆಯಲ್ಲಿ ಕಸಾಪ ಪದಾಧಿಕಾರಿಗಳು ವಿದ್ಯಾರ್ಥಿನಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next