ಬ್ರಹ್ಮಾವರ: ಹಿಂದುಳಿದ ಸಮಾಜ ಮುಂದೆ ಬಂದಾಗ ಹಿಂದೂ
ಸಮಾಜ ಬಲಿಷ್ಠವಾಗುತ್ತದೆ. ಹಿಂದೂ ಸಮಾಜದೊಂದಿಗೆ ದೇಶ ಬಲಿಷ್ಠ ವಾಗಲಿ ಎಂದು ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ಬುಧವಾರ ಬಾರಕೂರು ಮೂಡುಕೇರಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀಕೃಷ್ಣನ ಅಭಯ ಶ್ರೀಕೃಷ್ಣನು ಕಲಿಯುಗದಲ್ಲಿ ಎಲ್ಲರನ್ನು ಅನುಗ್ರಹಿಸಲು ಗೋಪಾಲಕೃಷ್ಣ ನಾಗಿ ಇಂದಿಗೂ ನೆಲೆಸಿದ್ದಾನೆ. ಇಂತಹ ವೇಣುಗೋಪಾಲಕೃಷ್ಣನ ಕುಲದೇವರ ನ್ನಾಗಿ ಮಾಡಿಕೊಂಡಿರುವ ಗಾಣಿಗ ಸಮಾಜಕ್ಕೆ ಶ್ರೀಕೃಷ್ಣನ ಅಭಯ ಇದೆ ಎಂದ ಅವರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾದ ವ್ಯಾಸ ಗುರುಗಳ ಶಿಷ್ಯರಾದವರು ಗಾಣಿಗ ಸಮಾಜದವರು ಎಂದರು.
ಧಾರ್ಮಿಕ ಪ್ರವಚನ ನೀಡಿದ ಪಂಜ ಭಾಸ್ಕರ್ ಭಟ್ ಅವರು, ನಾಗಾರಾಧನೆ ಎನ್ನುವುದು ಕೃತಜ್ಞತೆಗಾಗಿ ಮಾಡುವ ಆರಾಧನೆ. ಅದು ಕರ್ನಾಟಕದಿಂದ ಕನ್ಯಾಕುಮಾರಿವರೆಗೆ ವಿವಿಧ ರೀತಿ ಯಲ್ಲಿರುತ್ತದೆ. ನಾಗಾರಾಧನೆಯಲ್ಲಿ ಅನ್ನದಾನವೆನ್ನುವುದು ಬಹಳ ಶ್ರೇಷ್ಠ ಎಂದರು.
ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಕೆ. ಗೋಪಾಲ ಅಧ್ಯಕ್ಷತೆ ವಹಿಸಿದ್ದರು. ತಂತ್ರಿಗಳಾದ ಬಿ. ಶ್ರೀಕಾಂತ್ ಸಾಮಗ, ಬಿ. ಶಾಂತಾರಾಮ್ ಶೆಟ್ಟಿ, ಪ್ರಮುಖರಾದ ಬಿ.ಎಸ್ ಮಂಜುನಾಥ್, ಕೆ. ರಮೇಶ್ ಗಾಣಿಗ, ಬಿ.ಎ. ನರಸಿಂಹಮೂರ್ತಿ, ಸಂಜೀವ್ ರಾವ್, ರತ್ನಾಕರ್ ಶೆಟ್ಟಿ ಮಣಿಪುರ, ಸುಧೀರ್ ಪಂಡಿತ್, ಗೋಪಾಲ ಗಾಣಿಗ ಚಲ್ಲೆಮಕ್ಕಿ, ಎಚ್.ಟಿ. ನರಸಿಂಹ, ಕೆ. ಎಂ. ಲಕ್ಷ ¾ಣ, ಬಾರಕೂರಿನ ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಉಪಸ್ಥಿತರಿದ್ದರು.ಯು. ಬಾಲಚಂದ್ರ ಕಟಪಾಡಿ ಸ್ವಾಗತಿಸಿ, ಗಣೇಶ್ ಜಿ. ಕಾರ್ಯಕ್ರಮ ನಿರೂಪಿಸಿದರು.