Advertisement

“ಮೋದಿ ಆಡಳಿತದಲ್ಲಿ ದೇಶ ಸುಭದ್ರ’

09:35 PM Apr 10, 2019 | sudhir |

ಉಡುಪಿ: ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಯಾವುದೇ ತರಹದ ಕೋಮು ಗಲಭೆಗಳು, ನಾಗರಿಕರಿಗೆ ತೊಂದರೆಯಾಗುವಂತಹ ಘಟನೆಗಳು, ಬಾಂಬ್‌ ನ್ಪೋಟದಂತಹ ದುಷ್ಕೃತ್ಯಗಳು ಸಂಭವಿಸದೇ ಆಂತರಿಕವಾಗಿ ಸುಭದ್ರ ಸ್ಥಿತಿ ನೆಲೆಸಿದೆಎಂದು ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದರು.

Advertisement

ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರಿನಲ್ಲಿ ಮಂಗಳವಾರ ಜರಗಿದ ಬಿಜೆಪಿ ಕಾರ್ಯಕರ್ತರು, ಹಿತೈಷಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪೆರ್ಡೂರು ಗ್ರಾ.ಪಂ. ಉಪಾಧ್ಯಕ್ಷ ಸುರೇಶ್‌ ಶೇರಿಗಾರ್‌, ಪಕ್ಷದ ಮುಂದಾಳುಗಳಾದ ಜಿಯಾನಂದ ಹೆಗ್ಡೆ ಭೈರಂಪಳ್ಳಿ, ಸ್ಥಾನೀಯ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯರಾದ ಸುಭಾಷ್‌ ನಾಯ್ಕ, ಆನಂದ ಕುಲಾಲ್‌, ಪ್ರಸಾದ್‌ ಮಲ್ಯ ಸಾಂತಾರು, ಸುಮಾಲಿನಿ, ಪೆರ್ಡೂರು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next