Advertisement
ಸರ್ವಜ್ಞ, ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜುಗಳ ಸಹಯೋಗದಲ್ಲಿ ಬುಧವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನ್ಯಾ| ಶಿವರಾಜ ಪಾಟೀಲ ಪ್ರತಿಷ್ಠಾನದ ಉದ್ಘಾಟನೆ, “ಗುಡ್ ಮಾರ್ನಿಂಗ್ 365′ ಪುಸ್ತಕ ಬಿಡುಗಡೆ, ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.
ಎಂಬ ನಿಯಮಗಳಿವೆ. ಆದರೆ, ನಮ್ಮಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಸಿಖ್ ಸಮುದಾಯದವರು ಪ್ರಧಾನಿಯಾಗಿದ್ದರು. ಅಲ್ಪಸಂಖ್ಯಾತರು ರಾಷ್ಟ್ರಪತಿಗಳಾಗಿದ್ದರು. ಅದಕ್ಕೆ ಸಂವಿಧಾನವೇ ಕಾರಣ. ದೇಶದಲ್ಲಿ ನಾಯಾಂಗ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿದೆ.
ಕಾರ್ಯಾಂಗ, ಶಾಸಕಾಂಗ ತಪ್ಪು ಮಾಡಿದಾಗ ನ್ಯಾಯಾಂಗ ತಿದ್ದಿ ಸರಿಪಡಿಸುವ ಗುರುತರ ಹೊಣೆ ಹೊತ್ತಿದೆ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಜಸ್ಟಿಸ್ ಶಿವರಾಜ ಪಾಟೀಲ ಮಾತನಾಡಿ, ಈ ಪ್ರತಿಷ್ಠಾನ ಎಲ್ಲ ಸಂಘ ಸಂಸ್ಥೆಯಂತಾಗಬಾರದು. ನಿಮ್ಮಸೇವೆ ಮಾತಿನಲ್ಲಿ ಅಲ್ಲದೇ ಕೃತಿಯಲ್ಲಿ ತೋರಿಸಬೇಕು. ಹಸಿದವರಿಗೆ ಅನ್ನ, ಬಡವರಿಗೆ ಬಟ್ಟೆ, ಆಪತ್ತಿನಲ್ಲಿರುವವರಿಗೆ ರಕ್ತ ನೀಡುವಂಥ ಕೆಲಸವಾಗಬೇಕು. ನೇತ್ರದಾನದ ಬಗ್ಗೆ
ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶೇಖರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ದೂರದರ್ಶನ ನಿರ್ದೇಶಕ ಮಹೇಶ ಜೋಶಿ, ಅನ್ನಪೂರ್ಣ ಶಿವರಾಜ ಪಾಟೀಲ, ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ಸಂಸ್ಥಾಪಕ ಪ್ರೊ| ಚನ್ನಾರೆಡ್ಡಿ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು. ನ್ಯಾ| ಶಿವರಾಜ ಪಾಟೀಲರು ರಚಿಸಿದ “ಗುಡ್ ಮಾರ್ನಿಂಗ್ 365′ ಕೃತಿಯು ನಿತ್ಯ ಜ್ಞಾನ ಕಿರಣ ಸೂಸುವ ಶಕ್ತಿ ಹೊಂದಿದೆ. ಲೇಖಕರು ತಮ್ಮ ಅನುಭವಗಳನ್ನು ಧಾರೆ ಎರೆದು ಜೀವನದ ಸವಿ ಸೌರಭ ತಿಳಿಸಿದ್ದಾರೆ. ನಿತ್ಯ ಒಂದು ನುಡಿಮುತ್ತಿನ ರೂಪದಲ್ಲಿ ವರ್ಷ ಪೂರ್ತಿ ಜ್ಞಾನ ನೀಡುವ ಪುಸ್ತಕ ಇದಾಗಿದ್ದು, ಇಂಥ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುವ ಬದಲು ಮಲಗುವ ಕೊಠಡಿಯಲ್ಲಿಟ್ಟುಕೊಳ್ಳಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮ