Advertisement

ಮನೆ ಮುಂದೆ ಕೊರೊನಾ ಬಾವುಟ

07:00 PM May 09, 2021 | Team Udayavani |

ಮೈಸೂರು: ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೆಕೆ.ಆರ್‌. ಕ್ಷೇತ್ರದಲ್ಲಿ ಪ್ರತಿ ಸೋಂಕಿತರ ಮನೆ ಮುಂದೆ ಬಿಳಿ ಬಣ್ಣದ ಬಾವುಟಇರಿಸಿ, ಸೋಂಕಿತರಿಗೆ ಅಗತ್ಯ ಔಷಧ ಕಿಟ್‌ ನೀಡಿ ಮನೆಯನ್ನು ಸಂಪೂರ್ಣಸ್ಯಾನಿಟೈಸ್‌ ಮಾಡುವ ಕಾರ್ಯ ಶನಿವಾರದಿಂದ ಆರಂಭವಾಯಿತು.

Advertisement

“ನಾವೀಗ ಹೋಂ ಕ್ವಾರಂಟೈನ್‌ಲ್ಲಿದ್ದೇವೆ, ನಮ್ಮ ಮನೆಗೆ ಭೇಟಿ ನೀಡದಿರಿ’ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೋಂಕು ತಗುಲಿದಪ್ರತಿ ಮನೆಯ ಮುಂದೆ ಕೋವಿಡ್‌ ಚಿಹ್ನೆ ಇರುವ ಶ್ವೇತ ವರ್ಣದ ಧ್ವಜ ಅಳವಡಿಸುವ ಮೂಲಕ ವಿನೂತನ ಜಾಗೃತಿ ಮೂಡಿಸಲಾಗುತ್ತಿದ್ದು, ಶನಿವಾರಬೆಳಗ್ಗೆ ರಾಜರಾಮ್‌ ಅಗ್ರಹಾರದಲ್ಲಿ ಕಾರ್ಯಕ್ರಮಕ್ಕೆ ಶಾಸಕ ಎಸ್‌.ಎ.ರಾಮದಾಸ್‌ಚಾಲನೆ ನೀಡಿದರು.

ಬಳಿಕ ಪಾಲಿಕೆಯ ವಲಯ ಕಚೇರಿ 1 ವ್ಯಾಪ್ತಿಯ 51ನೇ ವಾರ್ಡಿನ 67ಸೋಂಕಿತರ ಮನೆಗಳಿಗೆ ಕೊರೊನಾ ವೈರಾಣು ಚಿಹ್ನೆಯುಳ್ಳ ಬಿಳಿಯ ಬಾವುಟಇರಿಸಲಾಯಿತು. ಈ ಸಂದರ್ಭ ದಲ್ಲಿ ಮಾÓR…, ಸ್ಯಾನಿಟೈಸರ್‌, ಸಾಬೂನು, ನಿಂಬೆಹಣ್ಣು, ನೆಲ್ಲಿಕಾಯಿ, ಅರಿಶಿನ, ಡಿಜಿಟಲ್‌ ಥರ್ಮೋ ಮೀಟರ್‌, ಡೋಲೋಮಾತ್ರೆ, ವಿಟಮಿನ್‌ ಸಿ, ಡೆಕೊÕàನಾ ಮಾತ್ರೆ ಇರುವ ಕಿಟ್‌ ನೀಡಲಾಯಿತು.

ಬಳಿಕಕೋವಿಡ್‌ ಸೋಂಕಿತರ ಮನೆಯ ಬಳಿಯಲ್ಲಿ ಸ್ಯಾನಿಟೈಸ್‌ ಮಾಡಲಾಯಿತು.ಈ ವೇಳೆ ಮಾತನಾಡಿದ ಶಾಸಕ ಎಸ್‌.ಎ. ರಾಮದಾಸ್‌, ಕೋವಿಡ್‌ಸಮಿತಿಯಲ್ಲಿರುವವರ ಜವಾಬ್ದಾರಿ ದೊಡ್ಡದು, ಹಗಲು ರಾತ್ರಿ ಕೆಲಸಮಾಡಬೇಕಿದೆ. ಟಾÓR…ಫೋರ್ಸ್‌ ನಲ್ಲಿರುವವರು ಆ್ಯಂಬುಲೆನ್ಸ್ ವ್ಯವಸ್ಥೆ,ವೈದ್ಯಕೀಯ ವ್ಯವಸ್ಥೆ ಮಾಡುವುದು ನಮ್ಮ ಜವಾಬ್ದಾರಿ ಎಂದರು. ಈ ವೇಳೆ ಮೇಯರ್‌ ರುಕ್ಮಿಣಿ, ಉಪ ಮೇಯರ್‌ ಅನ್ವರ್‌ ಬೇಗ್‌, ಪಾಲಿಕೆಸದಸ್ಯ ಬಿ.ವಿ.ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next