Advertisement

ಸಮಿತಿಯ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ಪ್ರದೀಪ್ ಶೆಟ್ಟಿ

06:20 PM Sep 27, 2019 | Team Udayavani |

ಮುಂಬಯಿ, ಸೆ. 26: ಸಾಯಿ ಬಾಬಾ ಪೂಜಾ ಸಮಿತಿಯ ವತಿಯಿಂದ ನಡೆಯುತ್ತಿರುವ ಅಬಲೆಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಹೊಲಿಗೆ ತರಬೇತಿ ಕೇಂದ್ರದ ಪ್ರಸಕ್ತ ಸಾಲಿನ ಅರ್ಹತಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಸೆ. 15ರಂದು ಬೊರಿವಲಿ ಪೂರ್ವದ ಚುಕ್ಕುವಾಡಿಯ ಭೂಷಣ್‌ಪಾರ್ಕ್‌ ಸಂಕೀರ್ಣದಲ್ಲಿರುವ ಸಮಿತಿ ಕಚೇರಿಯ ಆವರಣದಲ್ಲಿ ಜರಗಿತು.

Advertisement

ಸಮಾರಂಭದ ಮುಖ್ಯ ಅತಿಥಿಯಾಗಿ ಬೊರಿವಲಿ ಜಯರಾಜ್‌ ನಗರದ ಮಹಿಷ ಮರ್ದಿನಿ ಮಂದಿರದ ಆಡಳಿತ ಟ್ರಸ್ಟಿ ಪ್ರದೀಪ್‌ ಸಿ. ಶೆಟ್ಟಿಯವರ ಆಗಮಿಸಿ ಅರ್ಹತಾ ಪ್ರಯಾಣ ಪತ್ರ ಹಾಗೂ ಹೊಲಿಗೆ ಯಂತ್ರವನ್ನು ಮಹಿಳೆಯರಿಗೆ ವಿತರಿಸಿದರು. ಈ ವೇಳೆ ಸಂಸ್ಥೆಯ ಬಗ್ಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಈ ಸಂಸ್ಥೆಯು ಸುವರ್ಣ ಮಹೋತ್ಸವಕ್ಕೆ ಅಣಿಯಾಗಿ ನಿಂತಿರುವುದು ಸಂತಸದ ವಿಷಯ. ಸಾಯಿಯ ಅಪಾರ ಆಶೀರ್ವಾದದಿಂದ ಸದಸ್ಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿ ದ್ದಾರೆ. ಸಮಿತಿಯ ಮಂದಿರವನ್ನು ಮಹಾನಗರ ಪಾಲಿಕೆ ಕೆಡವಿದರೂ ಸಮಿತಿಯು ಯಾವುದೇ ಲೋಪ ದೋಷವಿಲ್ಲದೆ ಮುನ್ನಡೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇಂತಹ ಸಂಸ್ಥೆಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದು ಸದಸ್ಯರೆಲ್ಲರೂ ಅಭಿನಂದನೆಗೆ ಅರ್ಹರು ಎಂದರು.

ಅತಿಥಿ ಅವರನ್ನು ಶಾಲು, ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಮಾಧವ ಎನ್‌. ಹೆಗ್ಡೆ ಗೌರವಿಸಿದರು. ಕೋಶಾಧಿಕಾರಿ ರವಿ ಡಿ. ಶೇಣವ ವಂದಿಸಿದರು. ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ಪ್ರೊ| ಕೆ. ಎಚ್‌ ಕರ್ಕೇರ ನಿರೂಪಿಸಿ ಸಂಸ್ಥೆಯ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಜಯ ಎಸ್‌. ಶೆಟ್ಟಿ , ಜತೆ ಕಾರ್ಯದರ್ಶಿ ಮಿಜಾರ್‌ ರಮೇಶ್‌ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಬಿ. ಎಂ. ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಅನಂತರ ಸಮಿತಿಯ 25ನೇ ವಾರ್ಷಿಕ ಮಹಾಸಭೆಯು  ಅಧ್ಯಕ್ಷ ಮಾಧವ ಎಸ್‌. ಶೆಟ್ಟಿಯವರಅಧ್ಯಕ್ಷತೆಯಲ್ಲಿ ಜರಗಿತು.

ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಈ ವರ್ಷ 49ನೇ ವಾರ್ಷಿಕ ಮಹಾಪೂಜೆಯನ್ನು ಅ. 27ರಂದು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಹಾಗೂ 2020ನೇ ಸಾಲಿನ ಸುವರ್ಣ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ವೈದ್ಯಕೀಯ ಸೇವೆಯನ್ನು ಆಯೋಜಿಸಲು ನಿರ್ಧರಿಸಲಾಯಿತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next