Advertisement

ತರಹೇವಾರಿ ತಿನಿಸುಗಳ ಉಣಬಡಿಸಿದ “ಅಡುಗೆ ಹಬ್ಬ’

01:48 AM Apr 18, 2019 | sudhir |

ಕುಂದಾಪುರ: ಜೇಸಿಐ ಕುಂದಾಪುರದ ವತಿಯಿಂದ ಹೆಸ್ಕತ್ತೂರಿನ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ “ಅಡುಗೆ ಹಬ್ಬ’ ಕಾರ್ಯಕ್ರಮ ನಡೆಯಿತು.

Advertisement

ವಿದ್ಯಾರ್ಥಿಗಳೇ ಸ್ವತಹಃ ಬೆಂಕಿಯನ್ನು ಬಳಸದೇ ತಮ್ಮದೇ ಪರಿಕಲ್ಪನೆಯಡಿ ವೈವಿಧ್ಯಮಯ ತಿಂಡಿ – ತಿನಿಸುಗಳನ್ನು ತಯಾರಿಸಿ ಸಂಭ್ರಮಪಟ್ಟರು.

ಕೋಸಂಬರಿ, ಫ್ರುಟ್‌ ಸಲಾಡ್‌, ಮೊಸರು ಬಾಜಿ, ಸ್ಯಾಂಡ್‌ವಿಚ್‌, ಅವಲಕ್ಕಿ, ಪುನರ್ಪುಳಿ ಜ್ಯೂಸ್‌, ರಸಾಯನ, ಶರಬತ್‌, ಉಪ್ಪಿನಕಾಯಿ, ಮುಂಡಕ್ಕಿ ಉಪRರಿ ಹೀಗೆ ಮಕ್ಕಳು ತರಹೇವಾರಿ ತಿನಿಗಳನ್ನು ತಯಾರಿಸಿ, ಉಣ ಬಡಿಸಿದರು.

ಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಬಿ. ಅವರು ಉದ್ಘಾಟಿಸಿದರು.
ಜೇಸಿಐ ಕುಂದಾಪುರದ ಅಧ್ಯಕ್ಷ ಅಶೋಕ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶೇಖರ ಕುಮಾರ, ಸಹ ಶಿಕ್ಷಕರಾದ ಜಯರಾಮ ಶೆಟ್ಟಿ, ವಿಜಯಾ ಆರ್‌., ವಿಜಯ ಶೆಟ್ಟಿ, ರವೀಂದ್ರ ನಾಯಕ್‌, ಅತಿಥಿ ಶಿಕ್ಷಕಿ ಪ್ರೀತಿ, ಜರ್ಮನ್‌ನ ಶಿಕ್ಷಕಿ ರೂಯಿಸ್ಕಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next