Advertisement
ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ನೂರಾರು ವರ್ಷಗಳ ಹಿಂದೆಯೇ ಶಿಲ್ಪಕಲೆಗೆ ಅತ್ಯುನ್ನತ ಮೆರುಗು ತಂದು ಇತಿಹಾಸದ ಭವ್ಯ ಸಾಕ್ಷÂ ನೀಡಿದ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ. ಅವರ ಕಲೆಗಾರಿಕೆ ಅಮರ. ದೇಶವು ಕಲೆ, ಸಂಸ್ಕೃತಿಗೆ ಪ್ರಸಿದ್ಧವಾದುದು. ವಿಶೇಷ ವಾಗಿ ಕರ್ನಾಟಕದ ಬೇಲೂರಿನಲ್ಲಿ ಅದನ್ನು ಕಣ್ಣಾರೆ ನೋಡಲು ಒಂದು ದಿನವೇ ಸಾಲದು. ಇತಿಹಾಸವನ್ನು ಕಲ್ಲಿ ನಲ್ಲಿ ಕೆತ್ತಿ ಈಗಲೂ ಕಣ್ಮನ ಸೆಳೆಯಲು ಕಾರಣರಾಗಿರುವವರು. ಅಂತೆಯೇ ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.
Related Articles
Advertisement
ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜಿ.ಪಂ.ನಲ್ಲಿ ಸೋಮ ವಾರ ನಡೆದ ವಿಶ್ವಕರ್ಮ ಅಮರ ಜಕಣಾಚಾರಿ ಸಂಸ್ಮರಣ ದಿನಾಚರಣೆ ಉದ್ಘಾಟಿಸಿ, ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಕೇಂದ್ರ ಸರಕಾರ ವಿಶ್ವಕರ್ಮ ಸಮುದಾಯವನ್ನು ಅಭಿವೃದ್ಧಿಗೊಳಿ ಸುವ ಉದ್ದೇಶದಿಂದ 14 ಸಾವಿರ ಕೋ.ರೂ. ಮೀಸಲಿಟ್ಟು, ಸಮುದಾಯಕ್ಕೆ ಉತ್ತೇಜನ ನೀಡುತ್ತಿದೆ ಎಂದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಶಿಲ್ಪಗಳಲ್ಲಿ ಶಿಲ್ಪಿಯ ಹೆಸರನ್ನು ನಮೂದಿಸುವುದರಿಂದ ಮುಂದಿನ ಜನಾಂಗದವರು ಆತನನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಈ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದರು. ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಪ್ರೊ| ಬಿ.ಎ. ಆಚಾರ್ಯ ಅವರು ಜಕಣಾಚಾರಿ ಅವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು. ಶಿಲಾಶಿಲ್ಪಿ ರಾಮಚಂದ್ರ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸಿಇಒ ಪ್ರಸನ್ನ ಎಚ್., ಉಪ ಕಾರ್ಯದರ್ಶಿ ರಾಜು ಮೊಗವೀರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ವಿಶ್ವಕರ್ಮ ಒಕ್ಕೂಟದ ಉಡುಪಿ ಹಾಗೂ ದ.ಕ. ಜಿಲ್ಲಾಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಕುಂಜಿಬೆಟ್ಟು ಅಧ್ಯಕ್ಷ ಕೆ. ವೆಂಕಟೇಶ್ ಆಚಾರ್ಯ, ಅ.ಭಾ. ವಿಶ್ವಕರ್ಮ ಮಹಾ ಸಭಾ ಜಿಲ್ಲಾಧ್ಯಕ್ಷ ರಮೇಶ್ ಆಚಾರ್ಯ ನೇರಂಬಳ್ಳಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕಿ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಹರೀಶ್ ವಂದಿಸಿದರು. ಮಹೇಶ್ ಮಲ್ಪೆ ನಿರೂಪಿಸಿದರು.