ಕಲಬುರಗಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಸಾಧನೆ ಮಾಡಿದ್ದು ಗುರುವಾದ ನನಗೆ ಹೆಮ್ಮೆಯಿದೆ ಎಂದು ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಶುಂಪಾಲ ಡಾ| ಎಸ್ .ವಿ. ಮಲ್ಲಾಪುರ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆದ 1981ರ ಸಾಲಿನ ಸಿವಿಲ್ ಇಂಜಿನಿಯರಿಂಗ್ ಬ್ಯಾಚ್‌ನ ಅಲುಮಿನಿ (ಹಳೆ ವಿದ್ಯಾರ್ಥಿಗಳ ಮಿಲನ) ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಂದಿನ ವಿದ್ಯಾರ್ಥಿಗಳು ವಿವಿಧ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಿ, ಸಾಧನೆ ಮಾಡಿದ್ದು ಸಂತೋಷ ತಂದಿದೆ ಎಂದರು.
ಇನ್‌ಸ್ಟಿಟ್ಯೂಶನ್ ಇಂಜಿನಿಯರ್ಸ್ ಆಫ್ ಇಂಡಿಯಾ, ಕಲಬುರಗಿ ಲೋಕಲ್ ಸೆಂಟರ್ ಅಧ್ಯಕ್ಷ ಸುಭಾಷ ಸುಗೂರು ಮಾತನಾಡಿ, ಅಂದಿನ ವಿದ್ಯಾರ್ಥಿ ಜೀವನವು ಶಿಸ್ತು ಮತ್ತು ಉತ್ಸಾಹದಿಂದ ಕೂಡಿತ್ತು. ಕಲಿಯಬೇಕು ಎನ್ನುವ ಆಸಕ್ತಿಯಿಂದ ಜೀವನದಲ್ಲಿ ಸಾಧನೆ ಮಾಡಲು ಅನುಕೂಲವಾಯಿತು ಎಂದರು.
ನಿವೃತ್ತಿ ಜೀವನ ಸರಳವಾಗಿ ಸಾಗಿಸಿ. ಜತೆಗೆ ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಿ, ನಿತ್ಯ ಜೀವನದಲ್ಲಿ ಪ್ರಾಣಾಯಾಮ, ಮುದ್ರಾಯೋಗ, ಯೋಗ ಅಳವಡಿಸಿಕೊಂಡು ನೆಮ್ಮದಿ ಕಂಡುಕೊಳ್ಳುದು ಮುಖ್ಯವಾಗಿದೆ. ಪ್ರತಿದಿನ ಬೆಳಗ್ಗೆ 6ರಿಂದ ವಿಶ್ವೇಶ್ವರಯ್ಯ ಭವನದಲ್ಲಿ ಯೋಗ ಹೇಳಿ ಕೊಡಲು ಶಿಕ್ಷಕರಿದ್ದು, ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಲಬುರಗಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಡಾ| ಪಿ.ಆರ್.ಪಾಟೀಲ, ಸುರಪುರ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಪಿ.ಖಗೇಶನ್, ಪಿಡಬ್ಲ್ಯೂಡಿ ನಿವೃತ್ತ ಕಾರ್ಯದರ್ಶಿ ಸದಾಶಿವ ರೆಡ್ಡಿ ಬಿ.ಪಾಟೀಲ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಜಗ್ನನಾಥ ಹಲಿಂಗೆ, ಕಲಬುರಗಿ ಇಂಜಿನಿಯರಿಂಗ್ ಇನ್ಸಿrಟ್ಯೂಟ್ ಅಧ್ಯಕ್ಷ ಕಕ್ಕೇರಿ ಚಂದ್ರಶೇಖರ, ಕಾರ್ಯದರ್ಶಿ ಗುರುಗುಂಟಿ ಶಿವಶಂಕ್ರಪ್ಪ, ರಾಜಶೇಖರ ಗಾರಂಪಳ್ಳಿ, ಕಾಶೀನಾಥ ಬಿರದಕರ್, ಭಲ್ಲ ಲಕ್ಷಿಕ್ಷ್ಮೀಕಾಂತ ರೆಡ್ಡಿ, ಸೂರ್ಯಕಾಂತ ಕಲ್ಯಾಣಿ, ಪಗಾ ಜಿತೇಂದ್ರ, ಸಿದ್ಧರಾಜ ಪುಣಿಶೆಟ್ಟಿ, ಮಹ್ಮದ್ ಜಾವೀದ್, ಸತೀಶ್ ಹಜಾರೆ, ಗೋಪಿನಾಥ ಮಟ್ಟಿಮನಿ, ವಿಜಯಕುಮಾರ ಮೂಲಗೆ ಇದ್ದರು.