Advertisement
ಹಾರಕೂಡನ ಶ್ರೀ ಚೆನ್ನರೇಣುಕಬಸವ ಮಂಟಪದಲ್ಲಿ ಶ್ರೀ ಕರಬಸಯ್ನಾಸ್ವಾಮಿ ಹಿರೇಮಠ ಅವರ ಪುಣ್ಯಸ್ಮರಣೋತ್ಸವನಿಮಿತ್ತ ನಡೆದ ಕಲ್ಯಾಣ ಕರ್ನಾಟಕ ದ್ವಿತೀಯ ಸಂಗೀತ ದಿನಾಚರಣೆ ಹಾಗೂ “ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಸಂಗೀತ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಸರಾಂತ ಸಂಗೀತಗಾರರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಶ್ರೀ ಕರಿಬಸಯ್ಯ ಸ್ವಾಮಿಗಳು ಅಧ್ಯಾತ್ಮ ಜೀವಿಯಾಗಿದ್ದರು. ಹಾರಕೂಡ ಮಠದ ಪ್ರಗತಿಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು. ಮುಖಂಡ ಮೇಘರಾಜ ನಾಗರಾಳೆ, ಇಇ ದೇವಿದಾಸ ಚವ್ಹಾಣ ಮಾತನಾಡಿದರು. ಶಿಲ್ಪಿ ಸತೀಶ ಯಮ್ಹಾನ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂನ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪಾ ಗುದಗೆ, ಬಿಜೆಪಿ ಮುಖಂಡ ರಾಜಕುಮಾರ ಸಿರಗಾಪೂರ, ವಾತಡೆ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ವಾತಡೆ, ಪ್ರಮುಖರಾದ ದೇವಿಂದ್ರಪ್ಪಾ ಮೂಲಗೆ, ಮಲ್ಲಿನಾಥ ಹಿರೇಮಠ, ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ ಸುಭಾಸ ಮುರುಡ ಬೆಳಮಗಿ, ಅಪ್ಪಣ್ಣ ಜನವಾಡಾ ಇದ್ದರು. ವಿಠಲ ಹೂಗಾರ ಸ್ವಾಗತಿಸಿದರು. ಅಂಬಾರಾಯ ಉಗಾಜಿ ನಿರೂಪಿಸಿದರು.
ಪ್ರಶಸ್ತಿ ಪುರಸ್ಕೃತರು ಮತ್ತು ಸಂಗಡಿಗರಿಂದ ತಡ ರಾತ್ರಿ 2ರ ವರೆಗೆ ಸಂಗೀತ ಕಾರ್ಯಕ್ರಮ ಹಾಗೂ ಬೆಳಗಿನ ಜಾವದ ವರೆಗೆ ಭಜನಾ ತಂಡದಿಂದ ಭಜನೆ ನಡೆಯಿತು. ಬಳ್ಳಾರಿಯ ಸೌಮ್ಯಶ್ರೀ ಹಿರೇಮಠ ಅವರ ಭರತನಾಟ್ಯ ಗಮನ ಸೆಳೆಯಿತು.