ಶಿವಮೊಗ್ಗ: ತಾಲೂಕು ಬ್ರಾಹ್ಮಣ ಸೇವಾ ಸಂಘದ ವತಿಯಿಂದ 2022 ಸಾಲಿನ ನೂತನ ಕ್ಯಾಲೆಂಡರ್ ಉದ್ಘಾಟನಾ ಸಮಾರಂಭ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಿ.ಎಸ್. ಅರುಣ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್, ಅವರು ಬ್ರಾಹ್ಮಣ ಸಮಾಜದಲ್ಲಿ ಉತ್ತಮ ಚಿಂತಕರು, ಹಿರಿಯರು ಸಮಾಜ ಕಟ್ಟುವಲ್ಲಿ ಶಕ್ತಿಯನ್ನು ನೀಡಿದ್ದಾರೆ. ವಿಧಾನ ಪರಿಷತ್ ಚಿಂತಕರ ಚಾವಡಿ ಹಿರಿಯರ ಸದನ ಎಂಬ ಮಾತಿದೆ. ತಾಲೂಕು ಬ್ರಾಹ್ಮಣ ಸೇವಾ ಸಂಘವು ಅಂತಹ ಚಿಂತಕರ ಚಾವಡಿ ಎಂದರು. 1988ರಿಂದ ವಿಧಾನ ಪರಿಷತ್ ಸದಸ್ಯರಾಗಿ ನಮ್ಮ ತಂದೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದರು. ಆ ಸಂದರ್ಭಗಳಲ್ಲಿ ನಾನು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ. ಹಲವಾರು ಕ್ಷೇತ್ರಗಳಿಂದ ಆಯ್ಕೆಯಾಗಿ ಪರಿಷತ್ತಿಗೆ ಬಂದು ವಿಚಾರಗಳನ್ನು ಮಂಡನೆ ಮಾಡುತ್ತಿದ್ದರು.
ಆ ವಿಚಾರಗಳಿಂದ ಮುಂದಿನ ದಿನ ನಾನು ಸದನದಲ್ಲಿ ಸದಸ್ಯನಾಗಬೇಕು ಎಂಬ ಹಂಬಲ ಹೊಂದಿದ್ದರಿಂದ ಪಕ್ಷದ ಸಹಕಾರ ಹಾಗೂ ಹಿರಿಯರ ಆಶೀರ್ವಾದದಿಂದ ಈಗ ಅದು ಸಾಧ್ಯವಾಗಿದೆ ಎಂದರು. ನಂತರ ಮಾತನಾಡಿದ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ಬ್ರಾಹ್ಮಣ ಸಮಾಜ ಎಲ್ಲರ ಒಳಿತನ್ನು ಸರ್ವೇ ಜನ ಸುಖೀನೋ ಭವಂತು ಎಂದು ಹೇಳುವ ಸಮಾಜ. ಅಂತಹ ಸಮಾಜದಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬ್ರಾಹ್ಮಣ ಸಮಾಜ ಬಂದಿದೆ.
ಆ ನಿಟ್ಟಿನಲ್ಲಿ 2022ರ ನೂತನ ಕ್ಯಾಲೆಂಡರನ್ನು ಮನೆ- ಮನೆಗೆ ನೀಡುತ್ತ ತಾಲೂಕು ಬ್ರಾಹ್ಮಣ ಸಂಘ ಬಂದಿದೆ ಎಂದರು. ನಂತರ ಮಾತನಾಡಿದ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ್ ಅವರು, ನಿಕಟಪೂರ್ವ ಅಧ್ಯಕ್ಷರ ಪರಿಕಲ್ಪನೆಯಂತೆ ಈ ವರ್ಷವೂ ಕೂಡ ನಮ್ಮ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಆಗಿದೆ ಡಿಎಸ್ ಅರುಣ್ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಅವಕಾಶ ಕಲ್ಪಿಸಲಿ ಎಂದರು.
ಇದೇ ಸಂದರ್ಭದಲ್ಲಿ ಅಟಲ ಶ್ರೀ ಪ್ರಶಸ್ತಿ ಪಡೆದ ಸುರೇಖಾ ಮುರಳಿಧರ್ ಅವರನ್ನು ಸನ್ಮಾನಿಸಲಾಯಿತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಟರಾಜ್ ಭಾಗವತ್, ನಗರಸಭೆಯ ಮಾಜಿ ಅಧ್ಯಕ್ಷರಾದ ಎಂ. ಶಂಕರ್ , ಡಾ| ರವಿಕಿರಣ ,ಸುಂದರ ರಾಜ್, ಗುರುರಾಜ್ ಹಂಡೆ, ಮಾಧವಾಚಾರ್ ಇತರರು ಇದ್ದರು.