Advertisement

Mangaluru ಮೊಕದ್ದಮೆಗಳ ವಿಲೇವಾರಿಗೆ ಎಲ್ಲರ ಕೊಡುಗೆ ಅಗತ್ಯ

11:18 PM Nov 26, 2023 | Team Udayavani |

ಮಂಗಳೂರು: ಮೊಕದ್ದಮೆಗಳ ಶೀಘ್ರ ವಿಲೇವಾರಿಗೆ ವಕೀಲರು, ನ್ಯಾಯಾಂಗ ಇಲಾಖೆಯ ನೌಕರರ ಕೊಡುಗೆಯೂ ಅಗತ್ಯವಾಗಿದೆ ಎಂದು ಕರ್ನಾಟಕ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಬಿ. ಎಂ. ಶ್ಯಾಮಪ್ರಸಾದ್‌ ಹೇಳಿದ್ದಾರೆ.

Advertisement

ನಗರದ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ “ದ.ಕ. ನ್ಯಾಯಾಂಗ ಇಲಾಖಾ ನೌಕರರ ಜಿಲ್ಲಾ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

ನೋಟಿಸ್‌ ಅಥವಾ ಸಮನ್ಸ್‌ ಗಳನ್ನು ತಲುಪಿಸುವ ಹಂತದಲ್ಲಿ ಆಗುತ್ತಿರುವ ವಿಳಂಬ ಮೊಕದ್ದಮೆಗಳ ವಿಲೇ ವಿಳಂಬಕ್ಕೆ ಮುಖ್ಯ ಕಾರಣ. ಈ ಸಮಸ್ಯೆಗೆ ಪರಿಹಾರವಾಗಿ ಎನ್‌-ಸ್ಟೆಪ್‌ ಯೋಜನೆಯನ್ನು ಎರಡು ವರ್ಷಗಳ ಹಿಂದೆ ಆರಂಭಿಸಲಾಗಿದೆ.

ಸಂಬಂಧಿಸಿದವರಿಗೆ ನೋಟಿಸ್‌ ಅಥವಾ ಸಮನ್ಸ್‌ ನೀಡಿದ ಕೂಡಲೇ ಅವರಿಂದ ಡಿಜಿಟಲ್‌ ಸಿಗ್ನೇಚರ್‌ ಪಡೆದು, ಫೋ ಟೋ ತೆಗೆದು ಅದನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಇದು ಜಿಯೋ ಲೊಕೇಶನ್‌ ಕೂಡ ಹೊಂದಿರುತ್ತದೆ. ಇಂತಹ ವ್ಯವಸ್ಥೆಯ ಸಮರ್ಪಕ ಕಾರ್ಯ ಗತ ಸೇರಿದಂತೆ ವ್ಯಾಜ್ಯಗಳ ವಿಲೇವಾರಿಗೆ ನೌಕರರ ಸಹಕಾರ, ಸಲಹೆ, ಕೊಡುಗೆಯ ಅಗತ್ಯವಿದೆ. ವ್ಯಾಜ್ಯಗಳ ವಿಲೇ ವಿಳಂಬಕ್ಕೆ ಇತರ ಕಾರಣಗಳು ಇವೆ. ಈ ಬಗ್ಗೆ ವಕೀಲರ ಸಂಘಗಳು ಕೂಡ ಚರ್ಚೆ ನಡೆಸಿ ಗಮನ ಹರಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು.

ವರ್ಗಾವಣೆಗೆ ಹೊಸ ನೀತಿ
ಅಧ್ಯಕ್ಷತೆ ವಹಿಸಿದ್ದ ದ.ಕ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ರವೀಂದ್ರ ಜೋಶಿ ಮಾತನಾಡಿ, ನೌಕರರ ಕೌಶಲ ಹೆಚ್ಚಿಸಲು ತರ ಬೇತಿ ನೀಡಲಾಗುತ್ತಿದೆ. ಜಿಲ್ಲೆಯ ನೌಕರರು ಶಕ್ತಿ ಮೀರಿ ಜವಾಬ್ದಾರಿ ನಿರ್ವಹಿಸು
ತ್ತಿದ್ದಾರೆ. ಜಿಲ್ಲೆಯಲ್ಲಿರುವ ಸಿಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ನಡೆ ಯುತ್ತಿದೆ. ನೌಕರರ ವರ್ಗಾವಣೆಗೆ ಈಗ ಇರುವ ನಿಯಮದ ಜತೆಗೆ ಹೊಸ ನೀತಿಯನ್ನು ರೂಪಿಸಲು ನ್ಯಾಯಮೂರ್ತಿ ಬಿ.ಎಂ. ಶ್ಯಾಮ ಪ್ರಸಾದ್‌ ಅವರು ನಿರ್ಧರಿಸಿದ್ದಾರೆ. ಪತಿ-ಪತ್ನಿ ಒಂದೇ ಜಿಲ್ಲೆ ಯಲ್ಲಿ ಸೇವೆ ಸಲ್ಲಿಸುವಂತೆ, ನಿವೃತ್ತಿಯ ಅಂಚಿ ನಲ್ಲಿರುವವರಿಗೆ ಅನುಕೂಲವಾಗವಂತೆ ಹಾಗೂ ಅನಾರೋಗ್ಯದಿಂದ ಬಳಲು ತ್ತಿರುವವರಿಗೂ ಅನುಕೂಲವಾಗುವ ನೀತಿಗೆ ರಾಜ್ಯಮಟ್ಟದಲ್ಲಿ ರೂಪುರೇಷೆ ನಡೆಯುತ್ತಿದ್ದು ಇದನ್ನು ದ.ಕ ಜಿಲ್ಲೆ ಯಿಂದಲೇ ಆರಂಭಿಸುವ ಅಭಿಲಾಷೆ ಇದೆ ಎಂದು ಹೇಳಿದರು.

Advertisement

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ, ಸಂಘದ ಅಧ್ಯಕ್ಷೆ ಪದ್ಮಾವತಿ, ಕೇಂದ್ರ ಸಂಘಟನೆಯ ಜಂಟಿ ಕಾರ್ಯದರ್ಶಿ ಹೇಮಲತಾ ಉಪಸ್ಥಿತರಿದ್ದರು. ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಹಿರಿಯ ಶಿರಸ್ತೇದಾರ ರಾಜೇಶ್‌ ಎಂ. ಸ್ವಾಗತಿಸಿ “ನೌಕರರಲ್ಲಿ ಕಾರ್ಯದಕ್ಷತೆ’ ಕುರಿತು ವಿಚಾರ ಮಂಡಿಸಿದರು. ಜೆಎಂಎಫ್ಸಿ 2ನೇ ನ್ಯಾಯಾಲಯದ ಶಿರಸ್ತೇದಾರ ಪ್ರಕಾಶ್‌ ನಾಯಕ್‌ “ಮೊಕದ್ದಮೆಗಳ ಶೀಘ್ರ ವಿಲೇವಾರಿಯಲ್ಲಿ ನೌಕರರ
ಪಾತ್ರ’ ಕುರಿತು ವಿಚಾರ ಮಂಡಿ ಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಿಯದರ್ಶಿನಿ ಮತ್ತು ಉಪಾಧ್ಯಕ್ಷ ರಾಮ್‌ದಾಸ್‌ ಪಿ. ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯ ದರ್ಶಿ ಚಿದಾನಂದ ಮೂರ್ತಿ ವಂದಿಸಿ ದರು. ನಿವೃತ್ತರು ಹಾಗೂ ವಿಶೇಷ ಸಾಧಕ ನೌಕರರನ್ನು ಸಮ್ಮಾನಿಸಲಾಯಿತು. ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next