Advertisement

ದೇಶದ ಪ್ರಗತಿಗೆ ಸಂವಿಧಾನವೇ ಮೂಲ

12:26 PM Dec 09, 2017 | |

ಭಾಲ್ಕಿ: ಸ್ವಾತಂತ್ರ್ಯ ನಂತರ ದೇಶದ ಪ್ರಗತಿಯಲ್ಲಿ ಸಂವಿಧಾನದ ಅಂಶಗಳು ಅತಿ ಮಹತ್ವ ಪಡೆದಿವೆ. ದೇಶದ ಪ್ರಗತಿಗೆ ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ, ದಲಿತ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಡಾ| ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಆಯೋಜಿಸಿದ್ದ ಶ್ರದ್ಧಾ ಸುಮನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುವುದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ. ಜಗತ್ತಿನ ಅತಿ ಶ್ರೇಷ್ಠ ಸಂವಿಧಾನವನ್ನು ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಅವರು ನಮಗೆ ರಚಿಸಿ ಕೊಟ್ಟಿದ್ದಾರೆ. ಹೀಗಾಗಿ ಅಂತಹ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. 

ಕೆಲವು ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಆಹಾರ ಮತ್ತು ಧರ್ಮದ ಹೆಸರಿನಲ್ಲಿ ದೌರ್ಜನ್ಯ ನಡೆಸುತ್ತಿರುವುದು ವಿಷಾದನೀಯವಾಗಿದೆ. ಜಾತಿ ವಿಷ ಬೀಜ ಬಿತ್ತಿ ದೇಶವನ್ನು ದುರ್ಬಲ ಗೊಳಿಸಲಾಗುತ್ತಿದೆ ಎಂದು ಖೇದ ವ್ಯಕ್ತ ಪಡಿಸಿದರು.

ದಲಿತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ವಿಲಾಸ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಚಿವ ಈಶ್ವರ ಖಂಡ್ರೆ ಅವರು ಬೌದ್ಧ ಮಹಾಸಭಾ ಕಟ್ಟಡ ನಿರ್ಮಿಸಲು ಸುಮಾರು ಒಂದು ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲ ವಿಠಲದಾಸ ಪ್ಯಾಗೆ ವಿಷೇಶ ಉಪನ್ಯಾಸ ಮಂಡಿಸಿದರು. ಭಂತೆ ವರಜ್ಯೋತಿ ಮಹಾಥೇರೋ, ಭಂತೆ
ಕಷ್ಯಪ್‌ ಮತ್ತು ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಇದೇವೇಳೆ ಮುಂಬೈ ಗಾಯಕ ಆನಂದ ಶಿಂಧೆ ಅವರು ಡಾ| ಬಿ.ಆರ್‌.ಅಂಬೇಡ್ಕರ್‌ ತತ್ವಾದರ್ಶಗಳ ಕುರಿತು ಸುಮಧುರ ಸಂಗಿತ ಪ್ರಸ್ತುತಪಡಿಸಿದರು. ಜಿಪಂ ಸದಸ್ಯ ವಿದ್ಯಾಸಾಗರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ವಿಶಾಲ ಪುರಿ, ವಿಜಯಕುಮಾರ ಗಾಯಕವಾಡ, ನರಸಿಂಗರಾವ್‌ ಸೂರ್ಯವಂಶಿ, ಪ್ರೊ| ಚಂದ್ರಕಾಂತ ಬಿರಾದಾರ, ಅಂಬಾದಾಸ ಗಾಯಕವಾಡ, ಪ್ರಕಾಶ ಭಾವಿಕಟ್ಟಿ, ಸಂಜುಕುಮಾರ ಭಾವಿಕಟ್ಟೆ, ಮುನೀರ್‌ ಲಾಸೂನೆ ಉಪಸ್ಥಿತರಿದ್ದರು. ರಾಜಕುಮಾರ ಮೋರೆ ಸ್ವಾಗತಿಸಿದರು. ಕೈಲಾಸ ಭಾವಿಕಟ್ಟೆ ನಿರೂಪಿಸಿದರು. ಸಂಜಿಕುಮಾರ ಭಾವಿಕಟ್ಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next