Advertisement
ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕೋಲಾರ ಜಿಲ್ಲೆ ಮಾಲೂರಿನಲ್ಲಿ ಸೋಮವಾರ ಕಾಂಗ್ರೆಸ್ ರೋಡ್ ಶೋ ನಂತರ ಬಾಲಾಜಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ಪ್ರತಿಭಟನೆಯೇ ಪ್ರಚಾರವಾಯಿತು!ಮಾಲೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೋಲಾರ ಜಿಲ್ಲೆಯ
ಮಾಲೂರಿನಲ್ಲಿ ಪೆಟ್ರೋಲಿಯಂ ವಸ್ತುಗಳ ದರ ಏರಿಕೆ ವಿರುದ್ಧ ಸೈಕಲ್ ಏರಿ ಪ್ರತಿಭಟನೆ ಮಾಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸದ ಕೇಂದ್ರ ಸರ್ಕಾರ ಅಧಿಕವಾಗಿ ಬರುತ್ತಿರುವ ಲಾಭವನ್ನು ಏನುಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು. ಅಲ್ಲದೆ ಹೊಗೆ ರಹಿತ ಭಾರತ ಮಾಡಲು ಮುಂದಾಗಿರುವ ನರೇಂದ್ರ ಮೋದಿ, ಅಡುಗೆ ಅನಿಲದ ಬೆಲೆಯನ್ನು ಗಗನ ಮುಖೀಯಾಗಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಪ್ರತಿಭಟನೆ ವೇಳೆ ಕೊಂಚ ದೂರು ಸೈಕಲ್ ತುಳಿದರಲ್ಲದೇ, ಬಳಿಕ ಅಡುಗೆ ಅನಿಲದ ಸಿಲಿಂಡರ್ ಮಾದರಿಗಳನ್ನು ಹಿಡಿದು ಹೆಜ್ಜೆ ಹಾಕಿದರು. ಬಳಿಕ ಎತ್ತಿನ ಗಾಡಿ ಏರಿ ಪ್ರತಿಭಟನೆಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಚಾರ ಸಭೆಯ ರೋಡ್ ಶೋನ ನಂತರ ಬಾಲಾಜಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸಚಿವ ಸಂಪುಟದ ಮಂತ್ರಿಗಳು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದರೂ, ನರೇಂದ್ರ ಮೋದಿ ಪರೋಕ್ಷವಾಗಿ ದಲಿತರು ಮತ್ತು ಮುಸ್ಲಿಂರ ದಮನಕ್ಕೆ ಸಹಕಾರ ನೀಡುತ್ತಿದ್ದಾರೆ. ಸಿದಾಟಛಿಂತ ರಹಿತ ಆರ್‌ಎಸ್‌ಎಸ್, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ಸಂವಿಧಾನವನ್ನು ಬದಲಿಸಲು ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕರ್ನಾಟಕದ ಚುನಾವಣೆ ಕೇವಲ ಪಕ್ಷ ಪಕ್ಷಗಳ ಚುನಾವಣೆಯಲ್ಲ. ಸಿದ್ಧಾಂತ ರಹಿತ ಬಿಜೆಪಿ, ಸಂಘ ಪರಿವಾರಗಳು ಮತ್ತು ಮಹಾತ್ಮ ಗಾಂಧಿ ಅವರ ತತ್ವ ಸಿದ್ಧಾಂತಗಳ ಮೇಲಿನ ಮೌಲ್ಯದ ನಡುವಿನ ಚುನಾವಣೆಯಾಗಿದೆ. ಇದರ ನಡುವೆ ಜೆಡಿಎಸ್ ಪಕ್ಷ ಅವಕಾಶವಾದಿ ರಾಜಕಾರಣಕ್ಕೆ ಅಣಿಯಾಗಿದೆ ಎಂದರು.