Advertisement

ಕಾಂಗ್ರೆಸ್‌ ವಿಜಯೋತ್ಸವ: ಗೆದ್ದವರ ಸಂಭ್ರಮಾಚರಣೆ

03:28 PM Apr 10, 2017 | Team Udayavani |

ವಾಡಿ: ಪಟ್ಟಣದ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತು. 

Advertisement

ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿಯ ತೀವ್ರ ಪೈಪೋಟಿ ಮಧ್ಯೆ ಜಯಭೇರಿ ಬಾರಿಸಿದ ವಾರ್ಡ್‌ 13ರ ನೇತಾಜಿ ನಗರದ ಬಿಜೆಪಿ ಅಭ್ಯರ್ಥಿ ಭೀಮಶಾ ಜಿರೋಳಿ ಕಣ್ಣೀರು ಸುರಿಸಿ ಬೆಂಬಲಿಗರನ್ನು ಅಪ್ಪಿಕೊಂಡ ದೃಶ್ಯ ಕಂಡು ಬಂದಿತು. 

ಗೆಲುವಿನ ಘೋಷಣೆಯಾಗುತ್ತಿದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಅಂಬೇಡ್ಕರ್‌ ವೃತ್ತಕ್ಕೆ ಬಂದು ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಬಾಜಾ ಭಜಂತ್ರಿಗಳು ಮತ್ತು ಹಲಿಗೆಗಳೊಂದಿಗೆ ತಮ್ಮ ಬಡಾವಣೆಗಳಿಗೆ ತೆರಳಿ ಸಂಭ್ರಮಿಸಿದರು. ನೂರಾರು ಜನ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವದಲ್ಲಿ ಪಾಲ್ಗೊಂಡು ಪರಸ್ಪರ ಗುಲಾಲು ಎರಚಿಕೊಂಡು ಸಂತಸಪಟ್ಟರು. ಕಾಂಗ್ರೆಸ್‌ ಮತ್ತು ಬಿಜೆಪಿಯ ಮುಖಂಡರು ಅಭ್ಯರ್ಥಿಗಳನ್ನು ಗೌರವಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next