Advertisement
ಪಟ್ಟಣದ ಕಲ್ಯಾಗೇಟ್ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತಿ ಕಾಂಗ್ರೆಸ್ ಅಭ್ಯರ್ಥಿ ಎಚ್ .ಸಿ.ಬಾಲಕೃಷ್ಣ ಪರ ಪಟ್ಟಣದ 17ನೇ ವಾರ್ಡ್‌ನಲ್ಲಿ ಮತಯಾಚಿಸಿ ಮಾತನಾಡಿ, ನನ್ನ ಪತಿ ಎಚ್.ಸಿ.ಬಾಲಕೃಷ್ಣ ದಿನದ 24 ಗಂಟೆಗಳ ಕಾಲ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು.
ಅಲ್ಪಸಂಖ್ಯಾತರ ಪರ ದುಡಿದಿದ್ದಾರೆ ಎಂದು ತಿಳಿಸಿದರು. ಕೆಲ ವಿರೋಧ ಪಕ್ಷದ ಮುಖಂಡರು ನಮ್ಮ ಕುಟುಂಬ 7 ಬಾರಿ ಶಾಸಕರಾಗಿರುವುದನ್ನೇ ಮುಂದಿಟ್ಟುಕೊಂಡು ಆರೋಪ ಮಾಡುವುದು ಆರೋಗ್ಯಕರ ರಾಜಕಾರಣವಲ್ಲ, ಯಾರೋ ರಾಜಕಾರಣಿಗಳಾಗಲಿ ಮಾಡಿರುವ ಜನಪರ ಅಭಿವೃದ್ಧಿ ಬಗ್ಗೆ ಜನರ ಮುಂದಿಟ್ಟು ಮತಯಾಚಿಸಲಿ ಅದನ್ನು ಬಿಟ್ಟು ಕೀಳು ಮಟ್ಟದ ರಾಜಕಾರಣ ಮಾಡುವುದು ನಾಡಪ್ರಭು ಕೆಂಪೇಗೌಡರಿಗೆ ಆಗೌರವತಂದಂತಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜು ವಿರುದ್ಧ ಆರೋಪಿಸಿದರು. ತಾಲೂಕು ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಎಚ್ .ಸಿ.ಬಾಲಕೃಷ್ಣ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸವನ್ನು ಮತದಾರರ ಬಳಿ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಕೆಲವರು ಅಧಿಕಾರ ಇದ್ದಾಗ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅವರ ಕೊಡುಗೆ ತಾಲೂಕಿನಲ್ಲೆ ಏನು ಎಂದು ಮತದಾರರಲ್ಲಿ ಹೇಳಲಿ ಅದನ್ನು ಬಿಟ್ಟು ಎಚ್ .ಸಿ.ಬಾಲಕೃಷ್ಣ ಅವರ ವಿರುದ್ಧ ಸುಖಾ ಸುಮ್ಮನೆ ಪ್ರಚಾರಕ್ಕೆ ಆರೋಪಿಸುವುದು ಒಳಿತಲ್ಲ ಎಂದು ವಾಗ್ಧಾಳಿ ನಡೆಸಿದರು.
Related Articles
Advertisement